ಬೆಳೆಯಿಸು ನಿನ್ನಯ ವಾಮನ ಗಾತ್ರ ವಹಿಸು ತ್ರಿವಿಕ್ರಮ ಈ ಪಾತ್ರ……. || ಪ || ಅಂಧಕಾರದಲಿ ಮುಳುಗಿದ ವಿಶ್ವಕೆ ಬೆಳಕಿನ ನಿಧಿಯು ನೀ ಮಾತ್ರ ಭಾರತ ಮಾತೆಯ ವರಪುತ್ರ || ಅಪ || ಹರಿಹರ ಬ್ರಹ್ಮರ ಅಂಶಜ ನೀನು, ನೀ ನಿಜ ತ್ರಿಭುವನ ಸಂಚಾರಿ ರುದ್ರ ತ್ರಿಶೂಲದ ಘನ ಕೋದಂಡದ, ಚಕ್ರ ಸುದರ್ಶನದಧಿಕಾರಿ ಅನುಪಮ ಶಕ್ತಿಯ ಅವತಾರಿ || 1 || ಕಲಿಯುಗದಲಿ ತಲೆ ಎತ್ತಿದ ಬಲಿಗಳ ನೆತ್ತಿಯನೊತ್ತಿ ರಸಾತಳಕೆ ಬೆಳೆಯಿಸು ತವ ಪಾದಂಗಳ ಮಂಗಳಲೋಕದ ಆಚೆಯ […]
ಬೆಂಕಿಯ ಮೇಲಿದೆ ಮೌನದ ಜಲಧಿ, ಮನಮನದಿ ಆಂತರ್ಯದ ಉರಿಯಾರದ ನೆಲದಿ, ಭಾರತದಿ || ಪ || ಕಂಸ ಜರಾಸಂಧರು ಮೆರೆದಂದು, ಎದುರಾರೆಂದು ನಕ್ಕಿತು ವಿಧಿ ಮುರಲೀ ಸ್ವರದಿ ಬೆಳೆಸಿತು ಕಾಲನ ಕಾಲಿಂದಿ, ಗೋಕುಲದಿ || 1 || ದುರುಳರು ದಾನವರೆಲ್ಲರ ವಂಶ, ಗೈಯಲು ಧ್ವಂಸ ಕುರುಕ್ಷೇತ್ರವು ತುಂಬಿತು ಜವದಿ ಗೀತಾಗಾಂಡೀವದ ರವದಿ, ದ್ವಾಪರದಿ || 2 || ಶಕಹೂಣರು ಮೊಗಲಾಂಗ್ಲರ ಧಾಳಿ, ಆಯಿತು ಧೂಳಿ ಚಿತೆಯಾಯಿತು ಪರರದು ಗಾದಿ ಕಡೆಗಿಲ್ಲುಳಿಯಿತು ಹಿಡಿಬೂದಿ, ಈ ಯುಗದಿ || 3 […]
ಬಾ ಕುಶಲ ಕರ್ಣಧಾರ ಸಂಘಟನೆಯ ಹರಿಕಾರ || ಪ || ನಾಡಪ್ರೇಮ ಕಿರಣ ತುಂಬಿ ನಾಡ ನಾಳಗಳಲಿ ತುಂಬಿ ಜೀವ ತುಂಬಿ ಭಾವ ತುಂಬಿ ಬಾಳ ತುಂಬು ಬಾ || 1 || ಹಿಂದು ಜನರ ಮನದೊಳಾಡಿ ಬಾಹುಗಳನು ಸ್ಫುರಣಗೊಳಿಸಿ ಮನವ ತೀಡಿ ಸುಧೆಯ ನೀಡಿ ದಾರಿ ತೋರು ಬಾ || 2 || ಸಂಘಟನೆಯ ಮಂತ್ರ ನೀಡಿ ಓರೆಕೋರೆ ತಿದ್ದಿ ತೀಡಿ ದೇಶಪ್ರೇಮ ಕಂಪ ಹರಡಿ ಬಾಳ ತೋರು ಬಾ || 3 || ‘ಯಾಚಿ […]
ಬಲವೇದಿ ಕಾದಿಹುದು ಎಂದೆಂದು ನಿನಗೆಂದು ಬಾ ಬಂಧು ಬಾಳಿದನು ಬಲಿನೀಡಲೆಂದು ಏರಿಂದೆ ಮೇಲೇರು ಜಗಕೆಲ್ಲ ನೀ ಸಾರು ಭಾರತಿಯ ಬಸಿರೆಂದು ಬರಿದಾಗದೆಂದು || ಪ || ಪರದೇಶ ಪರಧರ್ಮಗಳು ಬಾಗಿಲೊಳು ನಿಂದು ತಾಯ್ನೆಲವ ಕಬಳಿಸಲು ಕಾದಿರುವುವಿಂದು ಓ ಹಿಂದು ಮೇಲೇಳು ಕೊರಳೆತ್ತಿ ನೀ ಹೇಳು ಬಂದಿಲ್ಲ ಭಾರತಕೆ ಬಂಜೆತನವೆಂದು || 1 || ಒಳಹೊರಗೆ ನೂರಾರು ದಾಳಿಗಳನೆದುರಿಸುತ ಉಸಿರಾಡುತಿಹೆವಿನ್ನು ಜೀವಂತರಾಗಿ ಮೇಲೇರಿ ಬರುವವರಿಗರುಹು ಬಾ ನೀನಿಂದು ಆರಿಲ್ಲ ಭಾರತದ ಬಡಬಾಗ್ನಿಯೆಂದು || 2 || ನುಂಗುವರ ಕೊರಳಿರಿವ […]
ಬನ್ನಿ ಮಿತ್ರರೇ ಬನ್ನಿ ಮಿತ್ರರೇ ಬೆಳ್ಳಿಚುಕ್ಕೆ ಮೂಡುತಿಹುದು ಭ್ರಾಂತಭಾವ ತೊಲಗುತಿಹುದು ಸಂಘಮಂತ್ರ ಜಪಿಸಿ ನಾವು ಮುಂದೆ ಸಾಗುವಾ ನಾವು ಮುಂದೆ ಸಾಗುವಾ || ಪ || ಮೇಲು ಕೀಳು ಅವನು ಇವನು ಯಾವ ಭೇದ ಇಲ್ಲಿ ಸಲ್ಲ ಭರತ ಭುವಿಯ ಮಕ್ಕಳೆಲ್ಲ ಹಿಂದು ಎಂಬ ಒಂದೆ ಸೊಲ್ಲ ಜಗದಿ ನಾವು ಹರಡುವಾ ಬನ್ನಿ ಮಿತ್ರರೇ || 1 || ಬ್ರಹ್ಮಕ್ಷಾತ್ರ ತೇಜ ಕೂಡಿ ನವಯುಗವ ನಿರ್ಮಿಸಿ ಭೀತ ಜಗಕೆ ಭರವಸೆಯ ನೀಡಿ ಬಾನಾಡಿಯಂತೆ ಮುಕ್ತರಾಗಿ ಮೆರೆಸುವಾ ಬನ್ನಿ […]
ಪ್ರದೀಪ್ತವಾಗಿವೆ ಹೃದಯ ಅನಂತ ಆಸೇತು ಹಿಮಾಚಲ ಪರ್ಯಂತ || ಪ || ಜಗದೊಳಗೆದ್ದಿಹ ಹಾಲಾಹಾಲಗಳ ಮೃಗಮಾನವರುದ್ಧಾರಕೆ ಕುಡಿದು ಪೊರೆದಿಹ ವಿಷಕಂಠನ ಹಣೆಗಣ್ಣಿನ ದಾವಾನಲವೀ ನಾಡಿನೊಳಿಹುದು || 1 || ಮನ್ವಂತರಗಳ ದೈವೀ ಸಂಸ್ಕೃತಿ ಮೈಗೂಡಿರುವೀ ನಾಡಿನ ಜನಕೆ ನರಜಾತಿಯ ಸೆಳೆದಮರತೆಗೊಯ್ಯುವ ಮಬ್ಬಾಗದೆ ಹಬ್ಬುವ ಹೆಬ್ಬಯಕೆ || 2 || ಬಂದೆರಗಿರೆ ಹಿಂದುವಿನೆದೆ ಬೆಂಕಿಗೆ ಬಹು ರೀತಿಯ ಭಯ ಭೀತಿಯ ಕೆಡಕು […]
ಪುನರುದ್ಧಾರದ ಸಂಕಲ್ಪದ ಸೆಲೆ ಹರಿಸೋಣ ಪುನರುತ್ಥಾನಕೆ ಕೈಜೋಡಿಸಿ ಸಹಕರಿಸೋಣ ಹೊಸ ಇತಿಹಾಸದ ಹರಿಕಾರರು ನಾವೆನಿಸೋಣ || ಪ || ಪರಿಸರದೊಳು ಪರಿಪರಿ ಚಿಂತನೆಗಳ ತುಂಬೋಣ ಪರಿವರ್ತನೆಗಳಿಗೆಳಸುವ ನಿಲುಮೆಯ ನಂಬೋಣ ಪರಮ ವೈಭವದ ಪರಮಾರ್ಥದ ಫಲ ಪಡೆಯೋಣ|| 1 || ಶತಮಾನದ ದಾಸ್ಯದ ದೌರ್ಬಲ್ಯವ ತೊಡೆಯೋಣ ಸುತರೆದೆಯಲಿ ಹಿಂದೂ ಆದರ್ಶವ ಕಡೆಯೋಣ ಸತತ ಸಾಧನೆಯ ಸಿದ್ಧಿಯ ಫಲ ಅನುಭವಿಸೋಣ || 2 || ಕಲೆಗೊಳ್ಳಲಿ ಕಲಿಕುಲಗಳ ವೀರರ ನಿರ್ಮಾಣ ಕಲಿಗಾಲದ ವಿಪರೀತಕೆ ನಡೆಯಲಿ ನಿರ್ಯಾಣ ಕಾಲ ಸೃಷ್ಟಿಸುವ ಸವಾಲು […]
ಪಾವನೆ ನಮ್ಮೀ ಭಾರತಮಾತೆ ತನುವಿರಿಸುವೆವಳಂಘ್ರಿಯಲೀ || ಪ || ಗಂಗಾ ಯಮುನಾ ಪುಣ್ಯ ನದಿಗಳು ನಮ್ಮೀ ದೇಶದಿ ಹರಿಯುತಲಿಹವೂ ಕಂಗೊಳಿಸುತಲಿವೆ ಫಲಪುಷ್ಪಗಳೂ ಮಂಗಳೆ ನಿಜ ಭಾರತಮಾತೇ || 1 || ಕೋಟಿ ಕೋಟಿ ಜನ ಹಿಂದುಗಳಿರುವರು ಕೂಡಿ ಪ್ರೀತಿಯಿಂ ಬರಲೆಲ್ಲವರು ನಡುಗುವರೈ ನಮ್ಮಯ ವೈರಿಗಳು ಬೆಡಗಿನ ಶೌರ್ಯದ ತವರೂರು || 2 || ಅವಳ ಗಾಳಿಯಿಂದುಸಿರಾಡುವೆವೂ ಅವಳ ಬೆಳೆಯನುಣ್ಣುತ ಜೀವಿಪೆವೊ ಭಾರತ ಮಾತೆಯ ಈ ಉಪಕಾರವ ಕೂಡಿ ಹಾಡುತಲಿ ನಲಿಯುವೆವೂ || 3 || ಜನ್ಮವನಿತ್ತಿಹ ಮಾತೆಗೆ […]
ಪಾಂಚಜನ್ಯ ಮೊಳಗುತಿಹುದು ಅಮರವಾದನ ಮನಮನವೂ ಬಯಸುತಿಹುದು ಅಸುರ ಮರ್ದನ ನಿಜದ ಅರಿವು ಎಚ್ಚರಿಸಿ …. ಭುಜದ ಮಿರುಗು ಪ್ರಜ್ವಲಿಸಿ ಹಿಂದು ಹೆಜ್ಜೆತಾಡನ ಅಲೆಯ ಅಬ್ಬರ || ಪ || ಮರೆವು ನಿದ್ರೆ ಕೊಡವಿಕೊಂಡ ನವ್ಯಚೇತನ ಹೃದಯ ಹೃದಯ ಬೆರೆಸಿಕೊಂಡ ಭವ್ಯ ಸ್ಪಂದನ ಬಂಧುಜೀವ ಏಕಭಾವ ಬೆಸುಗೆ ಇಂಧನ ಸೋಲಿನುಸಿರು ಇನ್ನೆಲ್ಲಿ … ಛಲದ ಹಸಿರು ತನುವಲ್ಲಿ ಕೋಟಿ ಜನರ ದಿಟ್ಟತನದಿ ಏಕತಾನಕೆ […]
ಪರಮ ಪೂಜ್ಯ ಕೇಶವ ಹೇ ಶ್ರೇಷ್ಠ ಧ್ಯೇಯಧಾರಿ ಕೋಟಿ ಕೋಟಿ ಹೃದಯ ದೇವ ನಮಿಪೆವೆಲ್ಲ ಸೇರಿ || ಪ || ಹೇ ಅಸೀಮ ಸ್ವಾರ್ಥತ್ಯಾಗಿ ಅದ್ವಿತೀಯ ಹೇ ವಿರಾಗಿ ದಿವ್ಯ ಹಿಂದು ಜನತೆಗಾಗಿ ಭವ್ಯ ರಾಷ್ಟ್ರಕಾಗಿ || 1 || ಹೇ ಅಜೇಯ ಶಕ್ತಿದಾತ ಪುಣ್ಯಶಾಲಿ […]