ಬೆಳೆಯಿಸು ನಿನ್ನಯ ವಾಮನ ಗಾತ್ರ

ಬೆಳೆಯಿಸು ನಿನ್ನಯ ವಾಮನ ಗಾತ್ರ
ವಹಿಸು ತ್ರಿವಿಕ್ರಮ ಈ ಪಾತ್ರ……. || ಪ ||

ಅಂಧಕಾರದಲಿ ಮುಳುಗಿದ ವಿಶ್ವಕೆ
ಬೆಳಕಿನ ನಿಧಿಯು ನೀ ಮಾತ್ರ
ಭಾರತ ಮಾತೆಯ ವರಪುತ್ರ || ಅಪ ||

ಹರಿಹರ ಬ್ರಹ್ಮರ ಅಂಶಜ ನೀನು, ನೀ ನಿಜ ತ್ರಿಭುವನ ಸಂಚಾರಿ
ರುದ್ರ ತ್ರಿಶೂಲದ ಘನ ಕೋದಂಡದ, ಚಕ್ರ ಸುದರ್ಶನದಧಿಕಾರಿ
ಅನುಪಮ ಶಕ್ತಿಯ ಅವತಾರಿ || 1 ||

ಕಲಿಯುಗದಲಿ ತಲೆ ಎತ್ತಿದ ಬಲಿಗಳ ನೆತ್ತಿಯನೊತ್ತಿ ರಸಾತಳಕೆ
ಬೆಳೆಯಿಸು ತವ ಪಾದಂಗಳ ಮಂಗಳಲೋಕದ ಆಚೆಯ ಅಂಗಣಕೆ
ದಿಗ್ವಿಜಯಂಗಳ ಪ್ರಾಂಗಣಕೆ || 2 ||

ಹದಮೀರಿದ ಮದವೇರಿದ ವಿಧವಿಧ ವಾದಂಗಳು ಸೋಲೊಪ್ಪಿಹವು
ಹುಟ್ಟಿದ ನೆಲದಲಿ ಕಟ್ಟಿ ಸಮಾಧಿಯ, ನೆಲೆಯಿಲ್ಲದೆ ಕಂಗೆಟ್ಟಿಹವು
ತವ ಪಾರಮ್ಯವನೊಪ್ಪಿಹವು || 3 ||

ಅಭಿನವ ಭಾರ್ಗವ ಕೇಶವ ಕಟ್ಟಿದ, ದುರ್ಜಯ ಹಿಂದು ಸಂಘಟನೆ
ಶ್ರೀರಾಮನ ಅವಿರಾಮದ ಕಾರ್ಯಕೆ, ಹೊರಟಿದೆ ಯುವ ವೀರರ ಸೇನೆ
ಆವರಿಸಿದೆ ಈ ವಿಶ್ವವನೆ || 4 ||

Leave a Reply

Your email address will not be published. Required fields are marked *

*

code