ಭೇದ ಭಾವ ಬಿಟ್ಟು ಬನ್ನಿ – (ಘೋಷ್ – ಹಂಸಧ್ವನಿ)

ಭೇದ ಭಾವ ಬಿಟ್ಟು ಬನ್ನಿ ಮೆಟ್ಟಿ ಬನ್ನಿ ದೀನತೆ ಪ್ರಾಂತ ಜಾತಿ ಪಂಥ ಪಕ್ಷಕಿಂತ ಮುಖ್ಯ ಏಕತೆ || ಪ || ಹಿಂದು ರಾಷ್ಟ್ರ ಸತ್ಯವು, ರಾಷ್ಟ್ರಶಕ್ತಿ ನಿತ್ಯವು ಮಾಡಿ ಸಫಲಗೊಳಿಸಿ ಸತ್ ಸಂಕಲ್ಪವಾ, ನಮೋ ನಮೋಸ್ತುತೇ ನಮೋ ಪ್ರಚಂಡ ರಾಷ್ಟ್ರರೂಪಿ ದೇವನೇ, ಭಲರೇ, ಓ ಹಿಂದು ಬಂಧೂ ಸಹೋದರಾ, ಪರಾಕ್ರಮೀ, ಅದಮ್ಯ ನೀ, ಹೋ ಹೋ ಜನರೆ ಬನ್ನಿ ಬನ್ನಿ ತನ್ನಿ ತನ್ನಿ ಸ್ನೇಹ ಹಸ್ತವ || 1 ||

Read More

ಭಾರತೀಯ ಕಂದರೆಮ್ಮ ಭಾರತಾಂಬೆ

ಭಾರತೀಯ ಕಂದರೆಮ್ಮ ಭಾರತಾಂಬೆ ಜಯ ಜಯಾss ವೀರಭೂಮಿ ಸತ್ಯಧರ್ಮ ಧೀರಮಾರ್ಗ ನಿರ್ಭಯ || ಪ || ಸರ್ವ ಸಿರಿಗಳುಂಟು ಹಿಂದು ಜನರೊಳಿಲ್ಲ ಏಕತಾ ಗುರಿಯೆ ಸಂಘ ಜನತೆ ಐಕ್ಯ ಬನ್ನಿ ಜಯತು ಭಾರತ || 1 || ಸ್ವಾರ್ಥ ಸೌಖ್ಯ ಸ್ಥಾನಮಾನ ಕೀರ್ತಿಯಾಸೆ ಮುರಿದೆವು ಪೂರ್ತಿ ದೇಶದೇಳ್ಗೆಗಾಗಿ ಸ್ಫೂರ್ತಿಗೊಂಡು ಸಲುವೆವು || 2 || ವೀರ ಶಿವ ಪ್ರತಾಪರಂತೆ ದೇಶಧರ್ಮ ರಕ್ಷಣಾ ಸೇರಿ ಬನ್ನಿ ಹಿಂದು-ಬಂಧು ತಡವು ಏಕೆ ಈ ಕ್ಷಣ ? || 3 || […]

Read More

ಭಾರತಿ ಜಯ ಭಾರತಿ

ಭಾರತಿ ಜಯ ಭಾರತಿ || ಪ || ಸಾಗರವೇಷ್ಠಿತೆ ಹಿಮಗಿರಿ ಶೋಭಿತೆ, ಸುಂದರ ತರುವನ ಪುಷ್ಪ ಸದಾರ್ಚಿತೆ ವಿಶ್ವವಿನುತೆ ವೇದಾಂತ ವಿಭೂಷಿತೆ, ವೃಂದಾರಕ ಗಣ ಪೂಜಿತೆ ಮಾತೆ || 1 || ವೀರ ಪ್ರಸವಿನಿ ಅಸುರ ಮರ್ದಿನಿ, ವಿಜಯದಾಯಿನೀ ಹೇ ಕಲ್ಯಾಣಿ ವೀತ ರಾಗ ಮುನಿ ವೃಂದ ಪೋಷಿಣಿ, ಶಾಶ್ವತ ಧರ್ಮ ಸನಾತನ ಜನನಿ || 2 || ಮಣ್ಣು ಮರಳಿನಲು ಚಿನ್ಮಯ ಶಕ್ತಿ, ಕಣ್ಣರಳಿಸಿ ಕಾಣಾ ಅಭಿವ್ಯಕ್ತಿ ತೋರಿಸು ನಿ ನಿಷ್ಕಲ್ಮಷ ಭಕ್ತಿ, ಮುಕ್ತಿಪಥಕೆ ನಿನಗಾಕೆಯೆ […]

Read More

ಭಾರತಾಂಬೆ ನಿತ್ಯ ನಿನ್ನ

ಭಾರತಾಂಬೆ ನಿತ್ಯೆ ನಿನ್ನ ಪುಣ್ಯಸೇವೆಗಾಗಿ ವೀರಮಾತೆ ಸಿದ್ಧರಿಹೆವು ನಿನ್ನ ರಕ್ಷೆಗಾಗಿ || ಪ || ಅನ್ಯದಾಸ್ಯವನ್ನು ಬಿಟ್ಟು ನಿನ್ನ ಧ್ಯಾನದಲ್ಲೆ ನೆಟ್ಟು ಪುಣ್ಯಗೀತೆ ಹಾಡಿ ಕೂಡಿ ಉನ್ನತಾತ್ಮರಾಗಿ || 1 || ದಿವ್ಯರೂಪೆ ವಿಗತ ಪಾಪೆ ನಿತ್ಯ ವತ್ಸಲಾನುಕೂಲೆ ಭವ್ಯ ವಿಮಲ ತತ್ವರೂಪೆ ಚಾರು ಬುದ್ಧಿಶೀಲೆ || 2 || ಸುಸ್ವತಂತ್ರ ಧರ್ಮಮಾತೆ ದಾನವಾರಿವೃಂದ ಪ್ರೀತೆ ವಿಶ್ವಮಾತೆ ವಿಶ್ವನಾಥೆ ವಿಶ್ವಸೌಖ್ಯದಾತೇ || 3 ||

Read More

ಭಾರತ ವರಸಂತಾನ ನಾವು

ಭಾರತ ವರಸಂತಾನ ನಾವು, ಭಾರತ ವರಸಂತಾನ || ಪ || ಕೆಚ್ಚೆದೆ ಕಲಿಗಳ ಕೂರಸಿ ಕಡಿತಕೆ ಸಾಸಿರ ಅರಿಶಿರ ಬಿದ್ದವು ನೆಲಕೆ ಜಿತ ಭಗವಾಧ್ವಜ ಏರಿತು ನಭಕೆ, ದುಷ್ಟರ ರಿಪು ಬಲವಾನ ನಾವು || 1 || ರಕ್ಷಿತವಾದವು ದೇಶಗಳೆಲ್ಲ ಸ್ಥಿರಚರ ಹಿರಿಕಿರಿ ಜೀವಿಗಳೆಲ್ಲ ಭಯಕಂಪಿತ ಶತ ಪಾಪಿಗಳೆಲ್ಲ, ಸಭ್ಯ ಪ್ರಭಾವಿ ಮಹಾನ ನಾವು || 2 || ವೇದದ ಗಾನವು ಹರಡಿತು ಭರದಿ, ಮೋಹ ಭ್ರಮೆಗಳು ಅಳಿದವು ಜಗದಿ ಮನುಜತ್ವದ ಸಸಿ ಮೊಳೆಯಿತು ಮನದಿ, ವಿಶ್ವಕೆ […]

Read More

ಭಾರತಭೂಮಿಯ ವೀರ ಸುಪುತ್ರರೆ

ಭಾರತಭೂಮಿಯ ವೀರಸುಪುತ್ರರೆ ಚಾಮುಂಡಾಂಬೆಯ ಪೂಜಕರೆ ಶಕ್ತಿ ಪರಾಕ್ರಮ ಆವಾಹನೆಗೆ ಕಂಕಣಧರಿಸಿ ಸಾಧಕರೆ ಹಿಂದುತ್ವದ ಆರಾಧಕರೆ ಜೈಭರತಾಂಬೆ – ಜೈದುರ್ಗಾಂಬೆ || ಪ || ಚಂದಮುಂಡರಾ ದಂಡನು ದಂಡಿಸಿ ರುಂಡವ ಖಂಡಿಸಿ ಚೆಂಡಾಡಿ ದುಷ್ಟರ ದಮನಿಸಿ ಕಷ್ಟಕೆ ಸಿಲುಕಿಹ ಶಿಷ್ಟಶಕ್ತಿಯನು ಕಾಪಾಡಿ || 1 || ಕಂಟಕವಳಿಸಿ ಸಂಕಟ ನೀಗಲು ಟೊಂಕವ ಕಟ್ಟುವ ಸಮಯವಿದು ಜಡತೆಯ ಜಯಿಸಿ ಸ್ವಾರ್ಥವದಹಿಸಿ ಮುನ್ನಡೆಯುವ ಸುಮುಹೂರ್ತವಿದು || 2 || ಬಹುರಾಷ್ಟ್ರೀಯರ ಸಂಚಿನ ಸುಳಿಯಲಿ ನಾಡೆಮದು ಮುಳುಗದೆ ಇರಲಿ ಸ್ವತ್ವ ಸ್ವದೇಶೀ ಸ್ವಾವಲಂಬನೆಯ […]

Read More

ಭಾರತಮಾತೆಯ ವೀರ ಸುಪುತ್ರರು ಸಾವನೆ

ಭಾರತ ಮಾತೆಯ ವೀರ ಸುಪುತ್ರರು ಸಾವನೆ ತುಳಿದವರೋ ಒಂದೇ ಬ್ರಹ್ಮ ತಪೋದಂಡದೊಳೇ ವೈರವ ಸೆಳೆದವರೋ || ಪ || ಶತಶತ ಸಂವತ್ಸರ ತಪದಲಿ ಪ್ರತಿಸೃಷ್ಟಿಯ ಗೈದವರೋ ಸತ್ಯಾಗ್ರಹದೊಳೆ ಕಡಲೊಡಲಾಳವನುಡುಗಿಸಿ ಹೊಯ್ದವರೋ || 1 || ಪಂಚ-ಮಹಾಭೂತಂಗಳ ಶಕ್ತಿಯನಡುಗಿಸಿ ಮೆರೆದವರೋ ವಂಚನೆಯಿಲ್ಲದೆ ರಣನೀತಿಯ ಸುವ್ರತವನು ಪೊರೆದವರೋ || 2 || ಹಾಲಾಹಲವನ್ನೀಂಟಿಯು ವಿಶ್ವಕೆ ಪ್ರಾಣವ ತೆತ್ತವರೋ ಕೋಲಾಹಲದೊಳೆ ದಯಶಾಂತಿಗಳನೆ ಲೋಕಕೆ ಇತ್ತವರೋ || 3 || ತ್ಯಾಗೌದಾರ್ಯದಿ ಮಾನವತೆಯನೇ ಬೆಳಗಿದ ವರಸುತರೋ ಭಾರತ ಸುಯಶೋಧ್ವಜವನೆ ಗಗನಕೆ ಎತ್ತಿದ ಬಲಯುತರೋ […]

Read More

ಭಾರತಮಾತೆಯ ವೀರ ಸುಪುತ್ರರು ಜಗವನು

ಭಾರತಮಾತೆಯ ವೀರ ಸುಪುತ್ರರು ಜಗವನು ಪಾವನ ಮಾಡುವೆವು ಮಾತೆಯ ಮಂಗಳ ಪದವನು ನಾವು ಬಿಡದರ್ಚಿಸುವೆವು ಸೇವಿಪೆವು || ಪ || ಮಾತೆಯ ಬಂಧನ ಕಡಿದೊಗೆಯುತ ನಾವ್ ಜನ್ಮವ ಸಾರ್ಥಕಗೊಳಿಸುವೆವು ವೀರರೆ ಏಳಿರಿ ಮುಂದಕೆ ಸಾಗಿರಿ ಮಾತೆಯ ರಕ್ಷಣ ಗೈಯುವೆವು || 1 || ರಾಮನು ಜನ್ಮವ ತಾಳುತ ಧರ್ಮವ ನೆಲೆಸಿದ ನಾಡಿದು ಭಾರತವು ಪಾತಿವ್ರತ್ಯದ ಮಹಿಮೆಯ ತೋರಿದ ಜಾನಕಿ ದೇವಿಯ ವರಗೃಹವು || 2 || ಕುರುಕ್ಷೇತ್ರದೊಳು ಸಾರಥಿಯಾಗಿ ಪಾಂಚಜನ್ಯವನ್ನೂದಿದನು ಜಯಭೇರಿಯನು ಹೊಡೆದಿಹ ವೀರನ ಶ್ರೀ ಕೃಷ್ಣನ […]

Read More

ಭಾರತ ಮಾತೆಗೆ ಜಯಹೇ

ಭಾರತ ಮಾತೆಗೆ ಜಯಹೇ ಭಾರತ ಮಾತೆಗೆ ಜಯಹೇ ಹಿಂದುಗಳೆಲ್ಲ ಭರದಿಂದ ಕೂಡಿ ಒಲವಿಂದ ಕೂಡಿ ಹಾಡಿ || ಪ || ನಿನ್ನಯ ಘನತೆಗೆ ನಿನ್ನಯ ಏಳ್ಗೆಗೆ ನಿನ್ನಯ ಸೊಬಗಿಗೆ ದುಡಿಯುತಲಿ ನಿನ್ನಯ ಹೆಸರಿಗೆ ನಿನ್ನಯ ರಕ್ಷೆಗೆ ಕಂಕಣ ಕಟ್ಟಿ ಹೋರಾಡಿ || 1 || ನಿನ್ನಯ ಉದರದಿ ಜನಿಸಿದ ನಾನು ನಿನ್ನಯ ಮಡಿಲಲಿ ನಲಿಯುತ ಬಾಳು ನಿನ್ನಯ ರಕುತದಿ ಕೂಡಿದ ನಾವು ಬಲದಿಂದ ಕೂಡಿ ಹಾಡಿ || 2 || ಜಾತಿಯ ತೊಡೆದು ಭೇದವ ಅಳಿಸಿ ದ್ವೇಷವ […]

Read More

ಭಾರತ ದೇಶದಿ ಜನಿಸುವ ಪುಣ್ಯವು ಜನುಮ

ಭಾರತ ದೇಶದಿ ಜನಿಸುವ ಪುಣ್ಯವು ಜನುಮ ಜನುಮದಲಿ ಇರಲೆಮಗೆ ಭಾರತ ಮಾತೆಯ ಸೇವೆಯ ಗೈಯುವ ಭಾಗ್ಯವು ದಿನದಿನ ಬರೆಲೆಮಗೆ || ಪ || ಇಲ್ಲಿಯ ನಡೆನುಡಿ ವಿಶ್ವಕೆ ಮಾದರಿ ನೆಲವಿದು ಕಲೆಗಳ ತವರೂರು ಬೇಲೂರಿನ ಗುಡಿ ಮಧುರೆಯ ಮಂದಿರ ಕುಶಲ ಕಲಾಕೃತಿಗಳ ಬೀಡು || 1 || ವಿಶ್ವೇಶ್ವರ ರಾಮಾನುಜರಂತೆ ಕುಶಲಮತಿಗಳುದಿಸಿಹರಿಲ್ಲಿ ಭಾರತಮಾತೆಯ ಕೀರ್ತಿಯ ಶಿಖರಕೆ ಏರಿಸಿ ಹರುಷದಿ ಜಯಚೆಲ್ಲಿ || 2 ||

Read More