ವಿಮಲ ಮಾತೆ ಪ್ರೇಮ ದಾತೆ | ದೇವಿ ಜನನಿ ಭಾರತೀ || ಪ || ಧವಳ ತೇಜ ಕೇಶರಾಶಿ | ದಿವ್ಯ ಮುಕುಟಧಾರಿಣಿ ಗಿರಿಜನೇತ್ರೆ ಅಚಲಪಾಲೆ ಭವ್ಯ ವದನ ಮಾನಿನೀ || 1 || ಸಿಂಧು ಜಲದಿ ವಿಪುಲಧಾರೆ | ಶುಭ್ರಜಲಜ ಚುಂಬಿನೀ ನಿರುತ ನೀಲ ವರ್ಣರೂಪಿ | ಚತುರ ಸೀಮ ಚಾರಿಣೀ || 2 || ಸ್ವರ್ಣ ಸೂರ್ಯ ಕೀರ್ತಿ ಕಿರಣ | ಪೂರ್ಣ ತೇಜ ವಂದಿತೆ ಸೋಮ ಸುಧಾ ವರ್ಷ ಭರಿತ | ರಜತ […]
ವಿಜಯದಾಯಿ ಸಂಕ್ರಾಂತಿಯಿದು || ಪ || ನವ ರವಿ ಬೆಳಗು ಪಾವನ ಶುಭದಿನ ತೊಳೆಯುತ ತನುಕೃತಿ ವಾಙ್ಮತಿ ಹೃನ್ಮನ ದೋಷವ ಕಳೆಯುತ ನಿರ್ಮಲಗೊಳಿಸಿ ವ್ರತ ಕೈಗೊಳ್ಳುವ ಕಾಲವಿದು || 1 || ಗೌರವ ವೈಭವ ಕಲಿತನ ಧೀಧನ ಚಿರ ಸುಖ ತುಂಬಿದ ಇತಿಹಾಸದ ಘನ ಪುನರಪಿ ಪಡೆಯಲು ಮೇಲ್ಮೆಯಗಳಿಸಿ ಕದಲದೆ ಕಾದುವ ಕಾಲವಿದು || 2 || ಗುರಿ ಸಾಧಿಸುತಿಹ ವರವ್ರತಿಯೋಧನ ಕೊರಗಿದ ಆಶೆಯ ಪುನರುಜ್ಜೀವನ ನೂತನ ಸ್ಫೂರ್ತಿಯ ಧೈರ್ಯವ ಬೆಳೆಸಿ ದುಂದುಭಿ ಮೊಳಗಿಪ ಕಾಲವಿದು || […]
ವರ್ಧಿಸಲಿ ವೇಗದಲಿ ಭರತಭೂವಲಯದಾರಾಧನೆ ಯಶಭರಿತ ಧ್ಯೇಯರತ ಶತಕೃತ ಮಹಾಪ್ರಲಯಸಾಧನೆ || ಪ || ದೀರ್ಘ ಕಾಳಿಮೆ ಕಳೆದು ಧ್ಯೇಯಭಾಸ್ಕರನೊಲಿದು ಸಾಧಕರದೀ ಯಾತ್ರೆ ಫಲಿಸುವನಕ ಬಲಿದಾನ ಬಲದಾನ ಜ್ಞಾನಗಳ ಬಸಿರಿಂದ ರಾಷ್ಟ್ರರವಿ ಪುನರುದಿಸಿ ಬರುವ ತನಕ || 1 || ದೇಶ ಧರ್ಮದ ಧ್ವಜದ ಸನ್ಮಾರ್ಗದರ್ಶನದ ಪ್ರಭೆಯ ಸ್ವೀಕರಿಸಿ ಸೌಭಾಗ್ಯ ತರಲು ಖಳದನುಜ ರಾಜ್ಯದಲಿ ಅರುಣಜಲದಾಜ್ಯದಲಿ ಧ್ಯೇಯದೀಪವನಿರಿಸಿ ಉರಿಸುತಿರಲು || 2 || ಹೃದಯ ಹೃದಯದ ಬಿಂದು ಒಂದಾಗುತೈತಂದು ಪ್ರಬಲ ಸಿಂಧೂ ರೂಪ ಧರಿಸುವಂತೆ ಶಸ್ತ್ರಾಸ್ತ್ರ ಸ್ಪರ್ಧೆಯಲಿ ನಿಯತಿಯಾಣತಿ […]
ವರುಷ ಸಾಸಿರ ಮೊದಲು || ಪ || ಹರುಷ ಗುಪ್ತರ ರಥ ಪದಾತಿಗಳ ದಿವ್ಯಾಭರಣಗಳ ಸ್ವರ್ಣಯುಗ ಮುಗಿದು ಹಗಲಿಳಿದು ಮುಗಿಲೋಳಿಯೊಲು ಹಗೆ ಕವಿದು ಮಗಧ ದೇಶದ ನಗುವ ನಂದನವು ನೀರಿರದ ನೆರಳಿರದ ಮಸಣವಾಗುತಲಂದು ನಿನಗಾಯ್ತು ವನವಾಸ ಓ, ಸ್ವಾತಂತ್ರ್ಯ ಪುರುಷ ! ಮರೆಯಾಯ್ತು ರಾಮನಾಳಿದ ಭಾರತದ ಹರುಷ, ಬರಿದಾಯ್ತು ಆದರ್ಶವೆನಿಸಿದೀ ಭರತವರುಷ || 1 || ವಿಜಯನಗರದೊಳೊಮ್ಮೆ ನೀನಾದೆ ಅತಿಥಿ ರಜಪೂತಾನದಿ ಕಳೆದೆ ಹಲಕೆಲವು ದಿನವ ಕಡಲತೀರದ ಪಡುವನಾಡಿನಲಿ ಕೊಂಕಣದ ಕಾಡಿನಲಿ ಶಿವನ ಗೌರವದ ಸಹವಾಸದಲಿ ಮೆರೆದೆ; […]
ವರ ಭವ್ಯ ಭಾರತದ ನಿರ್ಭೀತ ಸಂತತಿಗೆ ಸಂಗ್ರಾಮ ಸಂಗೀತ ಹಾಡುವಾಸೆ ರಣಭೇರಿ ಕಹಳೆಗಳ ಘನ ಘೋರ ಗರ್ಜನೆಗೆ ನಲಿದು ನರ್ತಿಸು ಹೋರಾಡುವಾಸೆ || ಪ || ಮಾವನತೆಯುದ್ಧಾರ ಮಾತೃವೈಭವಕಾಗಿ ಬೆವರು ನೆತ್ತರ ಸುರಿಸಿ ದುಡಿಯುವಾಸೆ ದೇಶಹಿತ ಧರ್ಮಹಿತ ಸರ್ವಜಗಹಿತಕಾಗಿ ಕಲಿತನದಿ ಕಾದಾಡಿ ಮಡಿಯುವಾಸೆ || 1 || ಸವ್ಯಸಾಚಿಯ ತೆರದಿ ದಿವ್ಯಾಸ್ತ್ರಗಳ ಪಡೆದು ಮರಳಿ ಕುರುಕ್ಷೇತ್ರದೊಳು ನಿಲ್ಲುವಾಸೆ ಭೋರ್ಗರೆವ ಪಾಂಚಜನ್ಯದಾ ರಣಘೋಷವನು ಭೂಮಂಡಲದಿ ಬಿತ್ತರಿಸುವಾಸೆ || 2 || ಧ್ಯೇಯದೇವನ ಪದದಿ ಅರ್ಚನೆಯ ಹೂವಾಗಿ ಧನ್ಯತೆಯ ಸಂತೃಪ್ತಿ […]
ವಂದೇ ಜನನಿ ಜನ್ಮಭೂಮಿಯೆ ಜಯತು ಭಾರತ ಮಾತಾ….ss || ಪ || ಸಸ್ಯ ಶ್ಯಾಮಲೆ ನೀ ಸುಜಲ ಸುಫಲೆ ನೀ ಚಿರಸುಖ ನೀಡು ಮಾತೆ….ss ಗಂಗಾ, ಸಿಂಧು, ಕೃಷ್ಣೆ, ಕಾವೇರಿ ತುಂಗಭದ್ರಾ ಪುಣ್ಯ ಗೋದಾವರಿ ಪೋಷಿಪರು ಈ ನಾಡು….ss ಉತ್ತರದೆತ್ತರ ಭವ್ಯ ಹಿಮಾಲಯ ಮೂಡಣ ಪಡುವಣ ಗಿರಿಕಂದರಾಲಯ ರಕ್ಷಿಪರು ಈ ನಾಡು….ss ಪುಣ್ಯ ಪುರುಷರ ನಿತ್ಯ ಹುತಾತ್ಮರ ಸತ್ಯ ಸನಾತನನಾಡು ….ss || 1 || ಧರ್ಮ ಸಂಸ್ಕೃತಿ ಸಂಗೀತ ಸಾಹಿತ್ಯ ಗೀತೆ ರಾಮಾಯಣ ಸಾರಿವೆ ಸತ್ಯ […]
ರಾಷ್ಟ್ರಸೇವಕ ಬಾರ ಹಿಂದು ವೀರನೆ ಬಾರ ನನ್ನ ಕಂದನೆ ಕೇಳ, ಎನುವಳಮ್ಮ || ಪ || ಅಂಗ ಭಂಗವದಾಗೆ ಮರಳಿ ಜೋಡಿಸಬಹುದು ವಂಗಭಂಗವದಾಗೆ ಬಾರದೇಕೆ? ಸಿಂಧು ಗಾಂಧಾರ ಬ್ರಹ್ಮಾದಿ ಮುರಿದಂಗಗಳ ಕಸಿಯ ಮಾಡಲು ಬನ್ನಿ ಎನ್ನ ಮೈಯ್ಗೆ || 1 || ಸೈನ್ಯವಾಗಿರೆ ಹಿಂದು ಮನೆಮನೆಯೆ ತಾನಿಂದು ಸ್ತನ್ಯವಾಗಿರೆ ರಾಷ್ಟ್ರಭಕ್ತಿ ನಿಮಗೆ ದೈನ್ಯ ದುಃಖ ಹತಾಶೆಯ ಕಾಲ ಹಿಂದಾಗಿ ಮಾನ್ಯತೆಯ ಪಡೆಯೆನೇ ಜಗದೆ ನಾನು? || 2 || ಆಗು ಗೆಳೆಯಗೆ ಮಿತ್ರ ಶಕ್ತಿ ಹಿಡಿದವರ ಕುತ್ತು […]
ರಾಷ್ಟ್ರದೇಕತೆ ರಾಷ್ಟ್ರದಸ್ಮಿತೆ ಪ್ರಲಯವರ್ಧಕ ರಾಷ್ಟ್ರೀಯತೆ ಕೆರಳುತೆದ್ದಿದೆ ಕ್ರುದ್ಧ ನೇತ್ರದಿ ಪ್ರಬಲತರ ತಾಯ್ನೆಲದ ಮಮತೆ || ಪ || ಹಿಮಕಿರೀಟದ ಧವಳಕಿರಣದ ವಿಭವಹರಣಕೆ ಕೈಯನಿಟ್ಟು ಮೂರ್ಖತೆಯ ಗೈಯದಿರು ವೈರಿಯೆ ಸತ್ಯದಿರವನು ಮರೆತು ಕೆಟ್ಟು ಎಚ್ಚರೆಚ್ಚರ ಸಾಲಿರುವೆಗಳ ಹಳದಿ ಸಾಮ್ರಾಜ್ಯದಳಿಕೀಟ ಎಚ್ಚರಿಕೆ ಮ್ಲೇಚ್ಛರಿಗೆ ಬರಿ ಕನವರಿಕೆಯಹುದೀ ಧವಳ ಮುಕುಟ || 1 || ಭಾರತದ ಈ ಭೂಮಿಯುದ್ದಕು ಯುದ್ಧಕಾಗಿಯೆ ಮಣ್ಣೊಳಡಗಿ ಮೈಯುರಿದು ಮೈಮುರಿವ ಯೋಧನ ಭೀಮಬಾಹುದ್ವಯವೆ ಸೆಟೆದು ಬಿಗಿದು ಕಬ್ಬಿಣವಾಗುತುಬ್ಬಿದೆ ಸ್ನಾಯುಮಂಡಲ ಪಂಕ್ತಿ ಪಂಕ್ತಿ ಹೊಸೆಹೊಸೆದು ಹುರಿಗೊಳ್ಳುತಿದೆ ಹಿರಿಹೆಗಲ ಹಿಮಗಿರಿ […]
ಮೊಗವೆತ್ತಿ ದನಿಯೆತ್ತಿ ಕೈಯೆತ್ತಿ ಹಾಡುವೆವು ಭಾರತಿಯ ಜಯದ ಉದ್ಘೋಷ ತುಂಬಲಿ ಭೂಮಿ ಆಕಾಶ || ಪ || ತನು ತುಂಬಿ ಮನ ತುಂಬಿ ಬರಲಿ ಆವೇಶ ನೆನಪಿರಲಿ ಗಮ್ಯ ಉದ್ದೇಶ ಮುಗಿಲ ಕಡೆ ಮುಖರಿಸಲಿ ವಿಜಯ ಸಂಘೋಷ ಕಾದಿಹುದು ಮಂಗಲ ವಿಶೇಷ || 1 || ಒಂದೇ ಸ್ವರ ಒಂದೇ ವರ ಒಂದೇ ಸಂದೇಶ ತಾಯ ಮಕ್ಕಳಿಗಿಲ್ಲಿ ವಾಸ ವಂದನೆಗೆ ಗೌರವವು ನಿಂದನೆಗೆ ನಾಶ ಸಂದೇಹವಿಲ್ಲ ಲವಲೇಶ || 2 || ಅವಳೆ ತಾಯವಳೆಮಗೆ ದೇವತಾ ಸದೃಶ […]
ಮರುಧರೆಯ ಮಣ್ಣಿನೊಳೆ ನಮ್ಮದಿದೆ ನವ ಸೃಷ್ಟಿ ಕೃತಕೃತ್ಯಗೊಳಿಸೆಮ್ಮ ಓ ಸೃಷ್ಟಿಕರ್ತ ; ಉರಿದುರಿವ ಕಣ್ಣಿನೊಳೆ ನಮ್ಮದಿದೆ ನವದೃಷ್ಟಿ ಹರಸು ಹರಸೆಮ್ಮ ಓ ದೃಷ್ಟಿದಾತ ! || ಪ || ಪೂರ್ವಜರ ಹೂಂಕಾರ ಚೀತ್ಕಾರ ನರಳಿಕೆಯೆ ಒಳಗೊಳಗೆ ಮೊಳೆಸಿರುವ ಕುದಿಕುದಿದು ಬೆಳೆಸಿರುವ ಕಾಲಗರ್ಭದ ವ್ಯಥೆಗೆ ಧ್ವನಿಯವರ್ಧಕವಿಟ್ಟು – ಹಂಪೆ ಹಳೆಬೀಡಿನಲಿ ಅಡಿಗಡಿಗು ಹರಡಿರುವ || 1 || ಕಲ್ಲು ಕಲ್ಲಿನ ಕಥೆಗೆ ಹೊಸ ಬಾನುಲಿಯನಿಟ್ಟು- ಇತಿಹಾಸದುದ್ದಕ್ಕೂ ಕೊಲೆ ಸುಲಿಗೆಗೊಳಗಾದ ತಲೆ ತೆತ್ತು ಬಲಿಯಾದ ದೈತ್ಯರತ್ಯಾಚಾರಕಾಹಾರವಾದ ಬಂಧು ಭಗಿನಿಯರೊಡಲ ಸಂಕಟದ […]