ರಾಷ್ಟ್ರಸೇವಕ ಬಾರ

ರಾಷ್ಟ್ರಸೇವಕ ಬಾರ ಹಿಂದು ವೀರನೆ ಬಾರ
ನನ್ನ ಕಂದನೆ ಕೇಳ, ಎನುವಳಮ್ಮ || ಪ ||

ಅಂಗ ಭಂಗವದಾಗೆ ಮರಳಿ ಜೋಡಿಸಬಹುದು
ವಂಗಭಂಗವದಾಗೆ ಬಾರದೇಕೆ?
ಸಿಂಧು ಗಾಂಧಾರ ಬ್ರಹ್ಮಾದಿ ಮುರಿದಂಗಗಳ
ಕಸಿಯ ಮಾಡಲು ಬನ್ನಿ ಎನ್ನ ಮೈಯ್ಗೆ || 1 ||

ಸೈನ್ಯವಾಗಿರೆ ಹಿಂದು ಮನೆಮನೆಯೆ ತಾನಿಂದು
ಸ್ತನ್ಯವಾಗಿರೆ ರಾಷ್ಟ್ರಭಕ್ತಿ ನಿಮಗೆ
ದೈನ್ಯ ದುಃಖ ಹತಾಶೆಯ ಕಾಲ ಹಿಂದಾಗಿ
ಮಾನ್ಯತೆಯ ಪಡೆಯೆನೇ ಜಗದೆ ನಾನು? || 2 ||

ಆಗು ಗೆಳೆಯಗೆ ಮಿತ್ರ ಶಕ್ತಿ ಹಿಡಿದವರ ಕುತ್ತು
ಧೀರನಾಗಿರು ಕಷ್ಟವೇನೇ ಬರಲಿ
ಪ್ರಾಣಪಣವಾಗೆನ್ನ ರಕ್ಷಿಸಲು ನೀನಿಂದು
ರಕ್ಷಿಪೆನನು ಎಂದೆಂದು ನಿನ್ನ ನಾನು || 3 ||

Leave a Reply

Your email address will not be published. Required fields are marked *

*

code