ಗುರಿಯನು ತೋರಿದ ಶ್ರೀಗುರು ಭಗವೆಗೆ

ಗುರಿಯನು ತೋರಿದ ಶ್ರೀಗುರು ಭಗವೆಗೆ ನಮಿಪೆನು ಅನುದಿನ ಅಡಿಗಡಿಗೆ|ತ್ಯಾಗದ ಶೌರ್ಯದ ಓ ಪ್ರತಿನಿಧಿಯೇ ಸ್ಫೂರ್ತಿಯ ಕರುಣಿಸು ಸಕಲರಿಗೆ||ಪ|| ಧೈರ್ಯವ ತುಂಬುತ ಮೌಢ್ಯವ ಕಿತ್ತೊಗೆ ಧ್ಯೇಯದ ಜಾಗೃತಿ ನೀಡೆಮಗೆಮನದಲಿ ಕವಿದಿಹ ಜಡತೆಯ ನೀಗಿಸಿ ಬೆಳಕನು ಜ್ವಲಿಸು ನಮ್ಮೊಳಗೆ||೧|| ಶುದ್ಧತೆ ನೀಡುತ ಕಲುಷಿತ ಮನಸಿಗೆ ಆದ್ಯತೆ ಕಾರ್ಯದ ಬದ್ಧತೆಗೆಬುದ್ಧಿಮತ್ತೆಯ ಕೊಡು ಜತೆಜತೆ ನಡಿಗೆಗೆ ಸಿದ್ಧಗೊಳಿಸುನೀ ಏಕತೆಗೆ||೨|| ತರತಮವಿಲ್ಲದೇ ರಾಷ್ಟ್ರದ ಕಾರ್ಯಕೆ ಸರಿಸಮ ಭಾವವ ಕೊಡು ಜನಕೇಸರ್ವಸಮರ್ಪಣೆ ಇತ್ತಾ ನೆಲಕೆ ಪರಹಿತವೇ ಗುರಿ ಕಾಯಕಕೆ||೩||

Read More

ಮಾತೃಭೂಮಿಯ ಸೇವೆಗೈಯ್ಯುವ ಸರಳ ಸೂತ್ರದ ಹಂದರ

ಮಾತೃಭೂಮಿಯ ಸೇವೆಗೈಯ್ಯುವ ಸರಳ ಸೂತ್ರದ ಹಂದರಪುಣ್ಯಭೂಮಿಯ ಸತತ ನೆನೆಯುವ ನಿತ್ಯಸಾಧನೆ ಸುಂದರ ॥ ಪ॥ ಭಾಷೆ ಭಿನ್ನತೆ ಹಿಂದೆ ಸರಿದಿದೆ ಹಿಂದು ಸತ್ವವೆ ಪ್ರೇರಣೆದ್ವೇಷ ಕಳೆಯುತ ಶಕ್ತವಾಗಿದೆ ಸಾಮರಸ್ಯದ ಭಾವನೆದೋಷವೆಲ್ಲವ ಸರಿಸಿ ದೂರಕೆ ನಿತ್ಯ ನಡೆದಿದೆ ಸಾಧನೆನಾಶವಾಗಿದೆ ಸ್ವಾರ್ಥಲಾಲಸೆ ಸ್ವಂತವೆಲ್ಲವು ಅರ್ಪಣೆ ॥ 1 ॥ ಧ್ಯೇಯಮಾರ್ಗದಿ ನಡೆಯು ನಮ್ಮದು ಕಾರ್ಯಪದ್ಧತಿ ಸಾತ್ವಿಕದೇಶಕಾಗಿಯೆ ದುಡಿವ ಕಾರ್ಯಕೆ ಭಗವೆ ಎಮ್ಮಯ ಪ್ರೇರಕಸಿದ್ಧಗೊಂಡಿದೆ ಕಾರ್ಯಭೂಮಿಕೆ ವ್ಯಕ್ತಿ ವ್ಯಕ್ತಿಯು ಸಾಧಕಶತಕದಂಚಿನ ಸಂಘಕಾರ್ಯವೆ ನಾಡಿನೇಳ್ಗೆಗೆ ಪೂರಕ ॥ 2 ॥ ದೇಶಕಾರ್ಯವೆ ಈಶಕಾರ್ಯವು […]

Read More

ನಿಶೆಯು ಸರಿದಿದೆ ಜಡತೆ ನೀಗಿದೆ

ನಿಶೆಯು ಸರಿದಿದೆ ಜಡತೆ ನೀಗಿದೆ ಉಷೆಯು ಗಾರುಡಿ ಬೀಸಿದೆ ಕ್ಲೇಶ ಕಳೆದಿದೆ ಆಸೆ ಫಲಿಸಿದೆ ಯಶವು ನಾಡಿಗೆ ಕಾದಿದೆ || ಪ || ಸಂದ ಜಯವಿದು ಶುಭದ ಸೂಚನೆ ನನಸು ಸಾವಿರ ಕಲ್ಪನೆ ಕುಂದು ಕೊರತೆಯ ನೀಗಿ ವಿಶ್ವಕೆ ವಂದ್ಯರೆನಿಸಲು ಪ್ರೇರಣೆ || 1 || ಅಂದು ಯಜ್ಞಕೆ ಸಮಿಧೆಯಾದರು ದಾಸ ಶರಣರು ಸಂತರು ಇಂದು ಸೇವೆಯ ವ್ರತದಿ ಬದ್ಧರು ಕರ್ಮರಂಗದ ಧೀರರು || 2 || ಬಂಧುಭಾವವು ಐಕ್ಯ ತಂದಿದೆ ಜಾತಿಗೋಡೆಯ ಕೆಡವಿದೆ ಸ್ವಾರ್ಥ ಸುಳಿಯದ […]

Read More

ಜಗತ್ತಿಗೆ ಜಗದ್ಗುರು ಅನಿಸಿಕೊಂಡ ಭೂಮಿ ಇದು

ಜಗತ್ತಿಗೆ ಜಗದ್ಗುರು ಅನಿಸಿಕೊಂಡ ಭೂಮಿ ಇದು ರಾಮಾ ಕೃಷ್ಣ ಇಲ್ಲಿ ಅವತಾರ ತಾಳಿ ಹೋಗ್ಯಾರ್‍ರೀ| ಅವತಾರ ತಾಳಿ ಹೋಗ್ಯಾರ್‍ರೀ ಸ್ನೇಹ ತುಂಬಿದ್ ಆಚರಣೆ ಸಂಪದ್ಭರಿತ ದೇಶ ನಮದು ಮುತ್ತು ರತ್ನ ಬಜಾರದಾಗ ಮಾರುತ್ತಿದ್ದರ್‍ರೀ || ಪ || ಹೂಣ ಶಕ ಮೊಘಲರು ಡಚ್ ಫ್ರೆಂಚ್ ಆ೦ಗ್ಲಾರು ದೇಶ ಕೋಶ ನಾಶ ಮಾಡಿ ಜೀವ ತಗದಾರ್‍ರೀ| ನಮ್ಮ ಜೀವ ತಗದಾರ್‍ರೀ ಲಕ್ಷ ಲಕ್ಷ ಜನ ತಮ್ಮ ಮನಿ ಮಠ ಸುಟಗೊಂಡ್ರು ಸ್ವಾತಂತ್ರ ಇದು ನಮಗೆ ಹಂಗೆ ಸಿಕ್ಕಿಲ್ಲರ್‍ರೀ || […]

Read More

ಮಾಘ ಮಾಸದ ಚಳಿಯದು

ಮಾಘ ಮಾಸದ ಚಳಿಯದು ಮಾಗುತ ಬರುತಿದೆ ಸಂಕ್ರಮಣ ಉತ್ತರದೆಡೆಗೆ ಅರುಣನ ಪಯಣ ಕಿರಣದ ಸಂಚಲನ ಇರುಳನು ಸರಿಸುತ ಬೆಳಕನು ಹರಿಸುತ ಜ್ಞಾನದ ಅನುರಣನ ವ್ಯಕ್ತಿ ವ್ಯಕ್ತಿಯೊಳು ಮೊಳಗಿದೆ ಗಾನ ಹಿಂದೂ ಜಾಗರಣ || ಪ || ಬೆಲ್ಲದ ಸಿಹಿಯೊಳು ಎಳ್ಳಿನ ಜಿಡ್ಡೊಳು ಅಡಗಿದೆ ಗೆಲ್ಲುವ ಜಿದ್ದು ಜ್ಯೋತಿರ್ವರ್ಷದ ವೇಗದಿ ಹರಡಿದೆ ರಾಷ್ಟ್ರ ಭಕ್ತಿಯ ಸದ್ದು ಧರ್ಮದ ರಕ್ಷೆಯೆ ರಾಷ್ಟ್ರ ರಕ್ಷೆಯು ಬಾ ಹಿಂದುವೆ ಸಿಡಿದೆದ್ದು ಶತ್ರುವಿನೆದೆಯನು ಸೀಳುವ ಛಲವಿರೆ ಭದ್ರವು ಸರಹದ್ದು || 1 || ತಾಯಿ […]

Read More

ವ್ರತವ ತೊಡುವ ಬನ್ನಿ

ವ್ರತವ ತೊಡುವ ಬನ್ನಿ ಸೇವಾ ವ್ರತವ ತೊಡುವ ಬನ್ನಿ || ಪ || ಹೃದಯ ಹೃದಯಕೆ ಬೆಸುಗೆಯ ಹಾಕುವ ಅಸ್ಥಿರ ಬದುಕನು ಸಾರ್ಥಕಗೊಳಿಸುವ ನೊಂದು ಬೆಂದವರ ತೊಂದರೆ ನೀಗುವ ಎಲ್ಲೆಡೆ ಸ್ನೇಹದ ಲತೆಯನು ಬೆಳೆಸುವ || 1 || ಉನ್ನತ ಪದವಿಯ ಗೊಂದಲವಿಲ್ಲ ಧನಕನಕವೇ ಇಲ್ಲಿ ಪ್ರಧಾನವಲ್ಲ ಜಾತಿ ವರ್ಣವನು ಕೇಳುವುದಿಲ್ಲ ರೂಪಕೆ ಧೂಪವ ಹಾಕುವುದಿಲ್ಲ || 2 || ಅಂತರಂಗದಾ ಸಿರಿ ಹೊಂದಿರಬೇಕು ಅಂತರ ತೋರದ ಆಂತರ್ಯ ಬೇಕು ನಾನೆಂಬುದನು ಕಡೆಗಾಣ ಸಬೇಕು ತನುಮನದಲಿ ಬಲವುಕ್ಕಲೇ […]

Read More

ತಂದೆನಯ್ಯಾ ತಮ್ಮಾ ತಂದೆನಯ್ಯಾ

ತಂದೆನಯ್ಯಾ ತಮ್ಮಾ ತಂದೆನಯ್ಯಾ ಸ್ನೇಹದ ಹಸ್ತವ ಪ್ರೀತಿಯ ಹೃದಯವ || ಪ || ಮಾರು ದೂರ ಇದ್ದುಕೊಂಡು ಸಂಘವನ್ನು ಹಳಿಯಬೇಡ ತನ್ನನ್ನೇ ತಿದ್ದಿಕೊಂಡು ಓಡಿಬಂದು ಕರ್ಮವ ನೋಡ ನೋಡಿದಲ್ಲಿ ಮರೆವೀ ನೀನು ತಂತನವನು ತಮ್ಮಾ || 1 || ಹೆದರಿ ಹೆದರಿ ಸರಿಯಬ್ಯಾಡ ಉದುರಿ ಉದುರಿ ಹೋಗಲು ಬ್ಯಾಡ ಹೇಡಿತನವ ಬಿಟ್ಟು ತಮ್ಮಾ ಧೈರ್ಯತನವ ತಂದು ಮುಂದು ವೀರಭದ್ರನಾಗು ತಮ್ಮಾ ಭದ್ರನಾಗಿರು || 2 || ಮನಸ್ಸಿನ ಭೇದವ ಬಿಟ್ಟು ಕನಸಿನ ರೋಷವ ಕಟ್ಟು ಕನಸು ಮನಸು […]

Read More

ಜಯ ಜಯ ಜಯ ಜನ್ಮಭೂಮಿ

ಜಯ ಜಯ ಜಯ ಜನ್ಮಭೂಮಿ ಜಯ ಜಯ ಜಯ ಮಾತೃಭೂಮಿ || ಪ || ಆಕಾಶಗಂಗೆ ಇಳಿದು ಬಂದ ಭೂಮಿ ಶ್ರೀ ಕೃಷ್ಣಗೀತೆಯ ಅಮೃತವಿತ್ತ ಭೂಮಿ || ಅ.ಪ || ಸ್ನೇಹದ ಕುಸುಮಮಾಲೆ ಧರಿಸಿದ ಭೂಮಿ ತ್ಯಾಗಿಗಳು ಜನಿಸಿರುವ ಪಾವನ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತಭೂಮಿ ಭಾಸುರಭೂಮಿ || 1 || ಹೈಮಾದ್ರಿ ವಿಂಧ್ಯಗಳ ಉನ್ನತಭೂಮಿ ಕಾವೇರಿ ಗಂಗೆಗಳು ಹರಿಯುವ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತಭೂಮಿ ಭಾಸುರಭೂಮಿ || 2 ||

Read More

ಭಾರತಿಯು ಇರಬೇಕು ಅನುದಿನ

ಭಾರತಿಯು ಇರಬೇಕು ಅನುದಿನ ಸಸ್ಯಸ್ಯಾಮಲೆಯಾಗುತ ಹಸಿರು ಹೊನ್ನಿನ ಬೆಲೆಯನರಿಯಲಿ ಜನತೆಯಾಗಲಿ ಜಾಗೃತ || ಪ || ತುಂಬಿ ನಿಲ್ಲಲಿ ತುಂಬ ಗಿಡಮರ ಬಿಂಬಿಸಲಿ ವನಸಿರಿಯನು ಕಂಪನೊಯ್ಯಲು ಪವನ, ಮಳೆಹನಿ ತಂಪುಗೈಯಲಿ ನೆಲವನು || 1 || ಬೆಳೆಯು ಬೆಳೆಯಲಿ ಇಳೆಯು ಬೆಳಗಲಿ ಕಳೆಯ ನಗುಮೊಗ ತೋರಲಿ ಒಸರು ಹೊರಡಲಿ ಹಸಿರು ಹರಡಲಿ ಹೊಸತು ಉಸಿರಲಿ ಹಾಡಲಿ || 2 || ಮರುಳು ಮಾಡುತ ವನವ ಕೆಡವುತ ಮರಳುಗಾಡನು ತರುವರೇ? ಮರಳಿಬಾರದು ಭೂಮಿ, ಅರಳದು ತಿರುಳು ತೀರಲು, ತಿಳಿಯರೇ? […]

Read More

ಒಂದ ದಿನ ಸಂಜೆಯ ಹೊತ್ತಿನಲಿ

ಒಂದ ದಿನ ಸಂಜೆಯ ಹೊತ್ತಿನಲಿ ಹೊರಬಿದ್ದೆನು ನಮ್ಮೂರ ಹಾದಿಯಲಿ ನಮ್ಮೂರ ಶಾಲೆಯ ಅಂಗಳದಲ್ಲಿ ಕಂಡರು ಕೆಲ ಬಾಲಕರು ಕಾವಿಧ್ವಜದಡಿ || ಪ || ಬಾಲಕರು ಆಡುತ್ತಿದ್ದ ಆಟದ ಮೋಡಿ ನಿಲ್ಲಿಸಿತು ನನ್ನ ಅಲ್ಲೇ ಗೆಳೆಯರ ಕೂಡಿ ಹಾಡುತ್ತಿದ್ದ ದೇಶಭಕ್ತಿ ಹಾಡಿನ ಹೊನಲು ಕೇಳುತಲಿ ನಿಂತೆ ಕಡೆಗೆ ಪ್ರಾರ್ಥನೆ ಸಾಲು || 1 || ಹೊರಬಿದ್ದ ಹುಡುಗರ ಆ ಗುಂಪಿನ ಗೆಳೆಯ ನನ್ನ ಬಳಿ ಬಂದು ಕೇಳಲೆನ್ನ ಪರಿಚಯ ಎನಗವರ ಅವರಿಗೆನ್ನ ಪರಿಚಯವಾಗೆ ದಿನನಿತ್ಯ ಹೋಗುತ್ತಿದ್ದೆ ಶಾಖೆಯ ಕಡೆಗೆ […]

Read More