ತಂದೆನಯ್ಯಾ ತಮ್ಮಾ ತಂದೆನಯ್ಯಾ

ತಂದೆನಯ್ಯಾ ತಮ್ಮಾ ತಂದೆನಯ್ಯಾ
ಸ್ನೇಹದ ಹಸ್ತವ ಪ್ರೀತಿಯ ಹೃದಯವ || ಪ ||

ಮಾರು ದೂರ ಇದ್ದುಕೊಂಡು ಸಂಘವನ್ನು ಹಳಿಯಬೇಡ
ತನ್ನನ್ನೇ ತಿದ್ದಿಕೊಂಡು ಓಡಿಬಂದು ಕರ್ಮವ ನೋಡ
ನೋಡಿದಲ್ಲಿ ಮರೆವೀ ನೀನು ತಂತನವನು ತಮ್ಮಾ || 1 ||

ಹೆದರಿ ಹೆದರಿ ಸರಿಯಬ್ಯಾಡ ಉದುರಿ ಉದುರಿ ಹೋಗಲು ಬ್ಯಾಡ
ಹೇಡಿತನವ ಬಿಟ್ಟು ತಮ್ಮಾ ಧೈರ್ಯತನವ ತಂದು ಮುಂದು
ವೀರಭದ್ರನಾಗು ತಮ್ಮಾ ಭದ್ರನಾಗಿರು || 2 ||

ಮನಸ್ಸಿನ ಭೇದವ ಬಿಟ್ಟು ಕನಸಿನ ರೋಷವ ಕಟ್ಟು
ಕನಸು ಮನಸು ನನಸಿನಲ್ಲಿ ಸಂಘವನ್ನು ಇಳಿಯಬಿಟ್ಟು
ಸ್ವಯಂಸೇವಕನಾಗಿರು ತಮ್ಮಾ ಸಬಲನಾಗಿರು || 3 ||

ದಿನನಿತ್ಯ ಶಾಖೆಗೆ ಬಂದು ದೇಶವನ್ನು ಅರಿತೇ ನೀನು
ತಾಯಿಗಾಗಿ ಜೀವಿತಕಾಲ ಅರ್ಪಿಸಲು ಮರೆತೋ ಏನೋ?
ತಾಯಿ ಬಂಜೆ ಅಲ್ಲ ತಮ್ಮಾ ಶ್ರೀಗಂಧನಾಗಿರು || 4 ||

Leave a Reply

Your email address will not be published. Required fields are marked *