ಜಗತ್ತಿಗೆ ಜಗದ್ಗುರು ಅನಿಸಿಕೊಂಡ ಭೂಮಿ ಇದು
ರಾಮಾ ಕೃಷ್ಣ ಇಲ್ಲಿ ಅವತಾರ ತಾಳಿ ಹೋಗ್ಯಾರ್‍ರೀ| ಅವತಾರ ತಾಳಿ ಹೋಗ್ಯಾರ್‍ರೀ
ಸ್ನೇಹ ತುಂಬಿದ್ ಆಚರಣೆ ಸಂಪದ್ಭರಿತ ದೇಶ ನಮದು
ಮುತ್ತು ರತ್ನ ಬಜಾರದಾಗ ಮಾರುತ್ತಿದ್ದರ್‍ರೀ || ಪ ||
ಹೂಣ ಶಕ ಮೊಘಲರು ಡಚ್ ಫ್ರೆಂಚ್ ಆ೦ಗ್ಲಾರು
ದೇಶ ಕೋಶ ನಾಶ ಮಾಡಿ ಜೀವ ತಗದಾರ್‍ರೀ| ನಮ್ಮ ಜೀವ ತಗದಾರ್‍ರೀ
ಲಕ್ಷ ಲಕ್ಷ ಜನ ತಮ್ಮ ಮನಿ ಮಠ ಸುಟಗೊಂಡ್ರು
ಸ್ವಾತಂತ್ರ ಇದು ನಮಗೆ ಹಂಗೆ ಸಿಕ್ಕಿಲ್ಲರ್‍ರೀ || 1 ||
ಸ್ವಾತಂತ್ರದ ಲಡಾಯ್ದಾಗ ಪುಣ್ಯ ಭೂಮಿ ಹಿಂದುಸ್ಥಾನ
ಸಾಕು ಬೇಕಾದಷ್ಟು ಸಾವು ನೋವು ಕಂಡೈತ್ರೀ| ಸಾವು ನೋವು ಕ೦ಡೈತ್ರೀ
ದೇಶ ತುಂಡು ಮಾಡಿ ನಮಗೆ ಸ್ವಾತಂತ್ರ್ಯ ಕೊಟ್ಟು ಹೋದ್ರು
ಹಿರಿಯರು ಕಂಡ ಕನಸ ಹಂಗ ಉಳಿದು ಹೋಗೈತ್ರೀ || 2 ||
ಸ್ವಾತಂತ್ರ್ಯ ಬಂದು ಈಗ ಭಾರತಕ್ಕ ಎಪ್ಪತ್ತೈದು
ಅಲ್ಲಿಂದ ಇಲ್ಲಿವರಗ ಏನೇನ ನಡೆದೈತ್ರೀ| ಮತ್ತ ಏನೇನ ನಡದೈತ್ರೀ
ಹಿಂದು ಜನ ನಾವು ಎಲ್ಲ ಒಂದಾಗಿ ಕುಂತು ಸ್ವಲ್ಪ
ವಿಚಾರ ಮಾಡಿ ಮುಂದಿನ ಹೆಜ್ಜೆ ಇಡಬೇಕಾಗೈತ್ರೀ || 3 ||
ಮೊದಲಿನ ವೈಭೋಗ ಮತ್ತ ಮರಳಿ ಬರಬೇಕಂದ್ರ
ಜಾತಿ ಪಾತಿ ಭಾಷಾ ಭೇದ ಅಳಿಸಬೇಕಲ್ರೀ| ಭೇದ ಅಳಿಸಬೇಕಲ್ರೀ
ಹಿಂದು ಜನ ಒಂದಾದ್ರ ಭಾರಿ ಶಕ್ತಿ ತಯಾರಾಗಿ
ದೇಶ ಮತ್ತ ವಿಶ್ವ ಗುರು ಆಗೋದ ಖರೇ ರ್‍ರೀ || 4 ||