ಮಾಘ ಮಾಸದ ಚಳಿಯದು

ಮಾಘ ಮಾಸದ ಚಳಿಯದು ಮಾಗುತ ಬರುತಿದೆ ಸಂಕ್ರಮಣ
ಉತ್ತರದೆಡೆಗೆ ಅರುಣನ ಪಯಣ ಕಿರಣದ ಸಂಚಲನ
ಇರುಳನು ಸರಿಸುತ ಬೆಳಕನು ಹರಿಸುತ ಜ್ಞಾನದ ಅನುರಣನ
ವ್ಯಕ್ತಿ ವ್ಯಕ್ತಿಯೊಳು ಮೊಳಗಿದೆ ಗಾನ ಹಿಂದೂ ಜಾಗರಣ || ಪ ||

ಬೆಲ್ಲದ ಸಿಹಿಯೊಳು ಎಳ್ಳಿನ ಜಿಡ್ಡೊಳು ಅಡಗಿದೆ ಗೆಲ್ಲುವ ಜಿದ್ದು
ಜ್ಯೋತಿರ್ವರ್ಷದ ವೇಗದಿ ಹರಡಿದೆ ರಾಷ್ಟ್ರ ಭಕ್ತಿಯ ಸದ್ದು
ಧರ್ಮದ ರಕ್ಷೆಯೆ ರಾಷ್ಟ್ರ ರಕ್ಷೆಯು ಬಾ ಹಿಂದುವೆ ಸಿಡಿದೆದ್ದು
ಶತ್ರುವಿನೆದೆಯನು ಸೀಳುವ ಛಲವಿರೆ ಭದ್ರವು ಸರಹದ್ದು || 1 ||

ತಾಯಿ ಭಾರತಿಯ ಗತ ಇತಿಹಾಸವ ಬನ್ನಿರಿ ಅರಿಯೋಣ
ಭರತ ಮಾತೆಯಾ ಗತ ವೈಭವವ ಮರಳಿಸಿ ಕುಣಿಯೋಣ
ಅಜ್ಞಾನದ ಅಂಧತೆ ತೊಲಗುತ ಧರ್ಮವು ಬೆಳಗಲು ನವಗಾನ
ಹಿಂದೂಜನರೊಂದಾಗಿ ನಲಿಯುತ ಹಾಡಲು ಸಮ್ಮಾನ || 2 ||

Leave a Reply

Your email address will not be published. Required fields are marked *

*

code