ಒಂದ ದಿನ ಸಂಜೆಯ ಹೊತ್ತಿನಲಿ
ಹೊರಬಿದ್ದೆನು ನಮ್ಮೂರ ಹಾದಿಯಲಿ
ನಮ್ಮೂರ ಶಾಲೆಯ ಅಂಗಳದಲ್ಲಿ
ಕಂಡರು ಕೆಲ ಬಾಲಕರು ಕಾವಿಧ್ವಜದಡಿ || ಪ ||
ಬಾಲಕರು ಆಡುತ್ತಿದ್ದ ಆಟದ ಮೋಡಿ
ನಿಲ್ಲಿಸಿತು ನನ್ನ ಅಲ್ಲೇ ಗೆಳೆಯರ ಕೂಡಿ
ಹಾಡುತ್ತಿದ್ದ ದೇಶಭಕ್ತಿ ಹಾಡಿನ ಹೊನಲು
ಕೇಳುತಲಿ ನಿಂತೆ ಕಡೆಗೆ ಪ್ರಾರ್ಥನೆ ಸಾಲು || 1 ||
ಹೊರಬಿದ್ದ ಹುಡುಗರ ಆ ಗುಂಪಿನ ಗೆಳೆಯ
ನನ್ನ ಬಳಿ ಬಂದು ಕೇಳಲೆನ್ನ ಪರಿಚಯ
ಎನಗವರ ಅವರಿಗೆನ್ನ ಪರಿಚಯವಾಗೆ
ದಿನನಿತ್ಯ ಹೋಗುತ್ತಿದ್ದೆ ಶಾಖೆಯ ಕಡೆಗೆ || 2 ||
ಕೆಲದಿನಗಳ ಬಳಿಕ ನಡೆದ ದಕ್ಷತ ವರ್ಗ
ಕಂಡಿತೆನಗೆ ಸಂಘದ ಕಿರುಬೆಳಕಿನ ಮಾರ್ಗ
ಕಳೆದ ವರ್ಷ ಪ್ರಾಥಮಿಕ ಶಿಕ್ಷಾ ವರ್ಗ
ಬೆಳೆಸಿತೆನ್ನಲಿ ದೇಶಭಕ್ತಿಯ ಸಂಗ || 3 ||
ಅಂದು ನಾನು ಆಗಿದ್ದೆ ಗಟನಾಯಕ
ಇಂದು ಶಾಖೆ ನಡೆಸುತಲಿ ಆದೆ ಶಿಕ್ಷಕ
ಸ್ವೀಕರಿಸಿದೆ ಪ್ರತಿಜ್ಞೆಯನು ಉಳಿಯಲು ಮಾರ್ಗ
ಹೆಚ್ಚು ತಿಳಿಸುತಿಹುದು ಸಂಘ ಶಿಕ್ಷಾ ವರ್ಗ || 4 ||
ಕೇಶವ ಮಾಧವರ ಆದರ್ಶದ ಜ್ವಾಲೆ
ಸುಟ್ಟಿತು ಎನ್ನ ಬಾಳ ಸ್ವಾರ್ಥದ ಸ್ವಾಲೆ
ಅರ್ಚಿಸುವೆ ಮುದದಿ ಮಾತೆ ಭಾರತಾಂಬೆಯ
ನೆನೆದು ಎನ್ನ ಬಾಳಾ ಸವಿನೆನಪಿನ ಕಥೆಯ || 5 ||