ವಂದೇ ಜನನಿ ಜನ್ಮಭೂಮಿಯೆ
ಜಯತು ಭಾರತ ಮಾತಾ….ss || ಪ ||
ಸಸ್ಯ ಶ್ಯಾಮಲೆ ನೀ
ಸುಜಲ ಸುಫಲೆ ನೀ ಚಿರಸುಖ ನೀಡು ಮಾತೆ….ss
ಗಂಗಾ, ಸಿಂಧು, ಕೃಷ್ಣೆ, ಕಾವೇರಿ
ತುಂಗಭದ್ರಾ ಪುಣ್ಯ ಗೋದಾವರಿ
ಪೋಷಿಪರು ಈ ನಾಡು….ss
ಉತ್ತರದೆತ್ತರ ಭವ್ಯ ಹಿಮಾಲಯ
ಮೂಡಣ ಪಡುವಣ ಗಿರಿಕಂದರಾಲಯ
ರಕ್ಷಿಪರು ಈ ನಾಡು….ss
ಪುಣ್ಯ ಪುರುಷರ
ನಿತ್ಯ ಹುತಾತ್ಮರ
ಸತ್ಯ ಸನಾತನನಾಡು ….ss || 1 ||
ಧರ್ಮ ಸಂಸ್ಕೃತಿ ಸಂಗೀತ ಸಾಹಿತ್ಯ
ಗೀತೆ ರಾಮಾಯಣ ಸಾರಿವೆ ಸತ್ಯ
ಜ್ಞಾನದಾ ಈ ನಾಡು….ss
ಜಾತಿ, ಪಂಥ, ಭಾಷೆ, ವೇಷ,
ವಿವಿಧತೆ ಏಕತೆ ಸಿಹಿಸಂದೇಶ
ಬೆಳಗಿದ ಈ ನಾಡು….ss
ಜಗದಾ ಜನಕೆ
ಮಾನವ ಕುಲಕೆ
ಮುಕ್ತಿಯ ತೋರುವ ನಾಡು ….ss || 2 ||