ಭಾರತೀಯ ಕಂದರೆಮ್ಮ ಭಾರತಾಂಬೆ

ಭಾರತೀಯ ಕಂದರೆಮ್ಮ ಭಾರತಾಂಬೆ ಜಯ ಜಯಾss
ವೀರಭೂಮಿ ಸತ್ಯಧರ್ಮ ಧೀರಮಾರ್ಗ ನಿರ್ಭಯ || ಪ ||

ಸರ್ವ ಸಿರಿಗಳುಂಟು ಹಿಂದು ಜನರೊಳಿಲ್ಲ ಏಕತಾ
ಗುರಿಯೆ ಸಂಘ ಜನತೆ ಐಕ್ಯ ಬನ್ನಿ ಜಯತು ಭಾರತ || 1 ||

ಸ್ವಾರ್ಥ ಸೌಖ್ಯ ಸ್ಥಾನಮಾನ ಕೀರ್ತಿಯಾಸೆ ಮುರಿದೆವು
ಪೂರ್ತಿ ದೇಶದೇಳ್ಗೆಗಾಗಿ ಸ್ಫೂರ್ತಿಗೊಂಡು ಸಲುವೆವು || 2 ||

ವೀರ ಶಿವ ಪ್ರತಾಪರಂತೆ ದೇಶಧರ್ಮ ರಕ್ಷಣಾ
ಸೇರಿ ಬನ್ನಿ ಹಿಂದು-ಬಂಧು ತಡವು ಏಕೆ ಈ ಕ್ಷಣ ? || 3 ||

ದುಷ್ಟರನ್ನು ಅಟ್ಟಿ ಜಗಕೆ ಶಾಂತಿ ಸಮತೆ ಬೀರುವಾ
ಕಷ್ಟ ನಷ್ಟ ಮೆಟ್ಟಿ ನಡೆದು ಧ್ಯೇಯ ತಲುಪಿ ತೋರುವಾ || 4 ||

ನಮ್ಮ ಧ್ಯೇಯದಿಂದ ಹಿಂದುರಾಷ್ಟ್ರ ಪರಮವೈಭವ
ನಮ್ಮ ಜನ್ಮವಿದಕೆ ಮುಡಿಪು ಸೇವೆಯಲ್ಲಿ ಗೆಲ್ಲುವಾ || 5 ||

Leave a Reply

Your email address will not be published. Required fields are marked *