ಭಾರತಮಾತೆಯ ವೀರ ಸುಪುತ್ರರು ಜಗವನು

ಭಾರತಮಾತೆಯ ವೀರ ಸುಪುತ್ರರು
ಜಗವನು ಪಾವನ ಮಾಡುವೆವು
ಮಾತೆಯ ಮಂಗಳ ಪದವನು ನಾವು
ಬಿಡದರ್ಚಿಸುವೆವು ಸೇವಿಪೆವು || ಪ ||

ಮಾತೆಯ ಬಂಧನ ಕಡಿದೊಗೆಯುತ ನಾವ್
ಜನ್ಮವ ಸಾರ್ಥಕಗೊಳಿಸುವೆವು
ವೀರರೆ ಏಳಿರಿ ಮುಂದಕೆ ಸಾಗಿರಿ
ಮಾತೆಯ ರಕ್ಷಣ ಗೈಯುವೆವು || 1 ||

ರಾಮನು ಜನ್ಮವ ತಾಳುತ ಧರ್ಮವ
ನೆಲೆಸಿದ ನಾಡಿದು ಭಾರತವು
ಪಾತಿವ್ರತ್ಯದ ಮಹಿಮೆಯ ತೋರಿದ
ಜಾನಕಿ ದೇವಿಯ ವರಗೃಹವು || 2 ||

ಕುರುಕ್ಷೇತ್ರದೊಳು ಸಾರಥಿಯಾಗಿ
ಪಾಂಚಜನ್ಯವನ್ನೂದಿದನು
ಜಯಭೇರಿಯನು ಹೊಡೆದಿಹ ವೀರನ
ಶ್ರೀ ಕೃಷ್ಣನ ನಾಡಿದು ದಿಟವು || 3 ||

ನಮಿಪೆವು ಮಾತೆಯೆ ನಿನ್ನೀ ಚರಣಕೆ
ಶಕ್ತಿಯ ನೀಡಲೆ ಬೇಡುವೆವು
ನಿನ್ನಯ ವೀರ ಸುಪುತ್ರರು ನಾವು
ನಿನ್ನಯ ವೈಭವ ನೋಡುವೆವು || 4 ||

Leave a Reply

Your email address will not be published. Required fields are marked *

*

code