ಭಾರತಾಂಬೆ ನಿತ್ಯೆ ನಿನ್ನ ಪುಣ್ಯಸೇವೆಗಾಗಿ
ವೀರಮಾತೆ ಸಿದ್ಧರಿಹೆವು ನಿನ್ನ ರಕ್ಷೆಗಾಗಿ || ಪ ||
ಅನ್ಯದಾಸ್ಯವನ್ನು ಬಿಟ್ಟು ನಿನ್ನ ಧ್ಯಾನದಲ್ಲೆ ನೆಟ್ಟು
ಪುಣ್ಯಗೀತೆ ಹಾಡಿ ಕೂಡಿ ಉನ್ನತಾತ್ಮರಾಗಿ || 1 ||
ದಿವ್ಯರೂಪೆ ವಿಗತ ಪಾಪೆ ನಿತ್ಯ ವತ್ಸಲಾನುಕೂಲೆ
ಭವ್ಯ ವಿಮಲ ತತ್ವರೂಪೆ ಚಾರು ಬುದ್ಧಿಶೀಲೆ || 2 ||
ಸುಸ್ವತಂತ್ರ ಧರ್ಮಮಾತೆ ದಾನವಾರಿವೃಂದ ಪ್ರೀತೆ
ವಿಶ್ವಮಾತೆ ವಿಶ್ವನಾಥೆ ವಿಶ್ವಸೌಖ್ಯದಾತೇ || 3 ||