ಭಾರತಮಾತೆಯ ವೀರ ಸುಪುತ್ರರು ಸಾವನೆ

ಭಾರತ ಮಾತೆಯ ವೀರ ಸುಪುತ್ರರು ಸಾವನೆ ತುಳಿದವರೋ
ಒಂದೇ ಬ್ರಹ್ಮ ತಪೋದಂಡದೊಳೇ ವೈರವ ಸೆಳೆದವರೋ || ಪ ||

ಶತಶತ ಸಂವತ್ಸರ ತಪದಲಿ ಪ್ರತಿಸೃಷ್ಟಿಯ ಗೈದವರೋ
ಸತ್ಯಾಗ್ರಹದೊಳೆ ಕಡಲೊಡಲಾಳವನುಡುಗಿಸಿ ಹೊಯ್ದವರೋ || 1 ||

ಪಂಚ-ಮಹಾಭೂತಂಗಳ ಶಕ್ತಿಯನಡುಗಿಸಿ ಮೆರೆದವರೋ
ವಂಚನೆಯಿಲ್ಲದೆ ರಣನೀತಿಯ ಸುವ್ರತವನು ಪೊರೆದವರೋ || 2 ||

ಹಾಲಾಹಲವನ್ನೀಂಟಿಯು ವಿಶ್ವಕೆ ಪ್ರಾಣವ ತೆತ್ತವರೋ
ಕೋಲಾಹಲದೊಳೆ ದಯಶಾಂತಿಗಳನೆ ಲೋಕಕೆ ಇತ್ತವರೋ || 3 ||

ತ್ಯಾಗೌದಾರ್ಯದಿ ಮಾನವತೆಯನೇ ಬೆಳಗಿದ ವರಸುತರೋ
ಭಾರತ ಸುಯಶೋಧ್ವಜವನೆ ಗಗನಕೆ ಎತ್ತಿದ ಬಲಯುತರೋ || 4 ||

Leave a Reply

Your email address will not be published. Required fields are marked *

*

code