ಭಾರತ ಮಾತೆಗೆ ಜಯಹೇ

ಭಾರತ ಮಾತೆಗೆ ಜಯಹೇ ಭಾರತ ಮಾತೆಗೆ ಜಯಹೇ
ಹಿಂದುಗಳೆಲ್ಲ ಭರದಿಂದ ಕೂಡಿ ಒಲವಿಂದ ಕೂಡಿ ಹಾಡಿ || ಪ ||

ನಿನ್ನಯ ಘನತೆಗೆ ನಿನ್ನಯ ಏಳ್ಗೆಗೆ ನಿನ್ನಯ ಸೊಬಗಿಗೆ ದುಡಿಯುತಲಿ
ನಿನ್ನಯ ಹೆಸರಿಗೆ ನಿನ್ನಯ ರಕ್ಷೆಗೆ ಕಂಕಣ ಕಟ್ಟಿ ಹೋರಾಡಿ || 1 ||

ನಿನ್ನಯ ಉದರದಿ ಜನಿಸಿದ ನಾನು ನಿನ್ನಯ ಮಡಿಲಲಿ ನಲಿಯುತ ಬಾಳು
ನಿನ್ನಯ ರಕುತದಿ ಕೂಡಿದ ನಾವು ಬಲದಿಂದ ಕೂಡಿ ಹಾಡಿ || 2 ||

ಜಾತಿಯ ತೊಡೆದು ಭೇದವ ಅಳಿಸಿ ದ್ವೇಷವ ಕಡಿದು ಮಮತೆಯ ಬೆಳೆಸಿ
ಸಾಧಕತನದಿ ಬೋಧನೆ ಪಡೆದು ಛಲದಿಂದ ಮೋಡಿ ಮಾಡಿ || 3 ||

Leave a Reply

Your email address will not be published. Required fields are marked *

*

code