ಪಾವನೆ ನಮ್ಮೀ ಭಾರತಮಾತೆ

ಪಾವನೆ ನಮ್ಮೀ ಭಾರತಮಾತೆ
ತನುವಿರಿಸುವೆವಳಂಘ್ರಿಯಲೀ || ಪ ||

ಗಂಗಾ ಯಮುನಾ ಪುಣ್ಯ ನದಿಗಳು
ನಮ್ಮೀ ದೇಶದಿ ಹರಿಯುತಲಿಹವೂ
ಕಂಗೊಳಿಸುತಲಿವೆ ಫಲಪುಷ್ಪಗಳೂ
ಮಂಗಳೆ ನಿಜ ಭಾರತಮಾತೇ || 1 ||

ಕೋಟಿ ಕೋಟಿ ಜನ ಹಿಂದುಗಳಿರುವರು
ಕೂಡಿ ಪ್ರೀತಿಯಿಂ ಬರಲೆಲ್ಲವರು
ನಡುಗುವರೈ ನಮ್ಮಯ ವೈರಿಗಳು
ಬೆಡಗಿನ ಶೌರ್ಯದ ತವರೂರು || 2 ||

ಅವಳ ಗಾಳಿಯಿಂದುಸಿರಾಡುವೆವೂ
ಅವಳ ಬೆಳೆಯನುಣ್ಣುತ ಜೀವಿಪೆವೊ
ಭಾರತ ಮಾತೆಯ ಈ ಉಪಕಾರವ
ಕೂಡಿ ಹಾಡುತಲಿ ನಲಿಯುವೆವೂ || 3 ||

ಜನ್ಮವನಿತ್ತಿಹ ಮಾತೆಗೆ ಸತತವು
ಕೀರ್ತಿಯ ಬಯಸದೆ ಇರಲಹುದೇ
ಕ್ಷಣ ಕ್ಷಣದಲಿ ಬೆವರಿನ ಮಳೆಗರೆಯುತ
ಮಾತೆಯ ವೈಭವ ಸಾಧಿಪೆವೂ || 4 ||

Leave a Reply

Your email address will not be published. Required fields are marked *

*

code