ಬನ್ನಿ ಮಿತ್ರರೇ ಬನ್ನಿ ಮಿತ್ರರೇ ಬೆಳ್ಳಿಚುಕ್ಕೆ ಮೂಡುತಿಹುದು ಭ್ರಾಂತಭಾವ ತೊಲಗುತಿಹುದು ಸಂಘಮಂತ್ರ ಜಪಿಸಿ ನಾವು ಮುಂದೆ ಸಾಗುವಾ ನಾವು ಮುಂದೆ ಸಾಗುವಾ || ಪ || ಮೇಲು ಕೀಳು ಅವನು ಇವನು ಯಾವ ಭೇದ ಇಲ್ಲಿ ಸಲ್ಲ ಭರತ ಭುವಿಯ ಮಕ್ಕಳೆಲ್ಲ ಹಿಂದು ಎಂಬ ಒಂದೆ ಸೊಲ್ಲ ಜಗದಿ ನಾವು ಹರಡುವಾ ಬನ್ನಿ ಮಿತ್ರರೇ || 1 || ಬ್ರಹ್ಮಕ್ಷಾತ್ರ ತೇಜ ಕೂಡಿ ನವಯುಗವ ನಿರ್ಮಿಸಿ ಭೀತ ಜಗಕೆ ಭರವಸೆಯ ನೀಡಿ ಬಾನಾಡಿಯಂತೆ ಮುಕ್ತರಾಗಿ ಮೆರೆಸುವಾ ಬನ್ನಿ […]
ಪ್ರದೀಪ್ತವಾಗಿವೆ ಹೃದಯ ಅನಂತ ಆಸೇತು ಹಿಮಾಚಲ ಪರ್ಯಂತ || ಪ || ಜಗದೊಳಗೆದ್ದಿಹ ಹಾಲಾಹಾಲಗಳ ಮೃಗಮಾನವರುದ್ಧಾರಕೆ ಕುಡಿದು ಪೊರೆದಿಹ ವಿಷಕಂಠನ ಹಣೆಗಣ್ಣಿನ ದಾವಾನಲವೀ ನಾಡಿನೊಳಿಹುದು || 1 || ಮನ್ವಂತರಗಳ ದೈವೀ ಸಂಸ್ಕೃತಿ ಮೈಗೂಡಿರುವೀ ನಾಡಿನ ಜನಕೆ ನರಜಾತಿಯ ಸೆಳೆದಮರತೆಗೊಯ್ಯುವ ಮಬ್ಬಾಗದೆ ಹಬ್ಬುವ ಹೆಬ್ಬಯಕೆ || 2 || ಬಂದೆರಗಿರೆ ಹಿಂದುವಿನೆದೆ ಬೆಂಕಿಗೆ ಬಹು ರೀತಿಯ ಭಯ ಭೀತಿಯ ಕೆಡಕು […]
ಪುನರುದ್ಧಾರದ ಸಂಕಲ್ಪದ ಸೆಲೆ ಹರಿಸೋಣ ಪುನರುತ್ಥಾನಕೆ ಕೈಜೋಡಿಸಿ ಸಹಕರಿಸೋಣ ಹೊಸ ಇತಿಹಾಸದ ಹರಿಕಾರರು ನಾವೆನಿಸೋಣ || ಪ || ಪರಿಸರದೊಳು ಪರಿಪರಿ ಚಿಂತನೆಗಳ ತುಂಬೋಣ ಪರಿವರ್ತನೆಗಳಿಗೆಳಸುವ ನಿಲುಮೆಯ ನಂಬೋಣ ಪರಮ ವೈಭವದ ಪರಮಾರ್ಥದ ಫಲ ಪಡೆಯೋಣ|| 1 || ಶತಮಾನದ ದಾಸ್ಯದ ದೌರ್ಬಲ್ಯವ ತೊಡೆಯೋಣ ಸುತರೆದೆಯಲಿ ಹಿಂದೂ ಆದರ್ಶವ ಕಡೆಯೋಣ ಸತತ ಸಾಧನೆಯ ಸಿದ್ಧಿಯ ಫಲ ಅನುಭವಿಸೋಣ || 2 || ಕಲೆಗೊಳ್ಳಲಿ ಕಲಿಕುಲಗಳ ವೀರರ ನಿರ್ಮಾಣ ಕಲಿಗಾಲದ ವಿಪರೀತಕೆ ನಡೆಯಲಿ ನಿರ್ಯಾಣ ಕಾಲ ಸೃಷ್ಟಿಸುವ ಸವಾಲು […]
ಪಾವನೆ ನಮ್ಮೀ ಭಾರತಮಾತೆ ತನುವಿರಿಸುವೆವಳಂಘ್ರಿಯಲೀ || ಪ || ಗಂಗಾ ಯಮುನಾ ಪುಣ್ಯ ನದಿಗಳು ನಮ್ಮೀ ದೇಶದಿ ಹರಿಯುತಲಿಹವೂ ಕಂಗೊಳಿಸುತಲಿವೆ ಫಲಪುಷ್ಪಗಳೂ ಮಂಗಳೆ ನಿಜ ಭಾರತಮಾತೇ || 1 || ಕೋಟಿ ಕೋಟಿ ಜನ ಹಿಂದುಗಳಿರುವರು ಕೂಡಿ ಪ್ರೀತಿಯಿಂ ಬರಲೆಲ್ಲವರು ನಡುಗುವರೈ ನಮ್ಮಯ ವೈರಿಗಳು ಬೆಡಗಿನ ಶೌರ್ಯದ ತವರೂರು || 2 || ಅವಳ ಗಾಳಿಯಿಂದುಸಿರಾಡುವೆವೂ ಅವಳ ಬೆಳೆಯನುಣ್ಣುತ ಜೀವಿಪೆವೊ ಭಾರತ ಮಾತೆಯ ಈ ಉಪಕಾರವ ಕೂಡಿ ಹಾಡುತಲಿ ನಲಿಯುವೆವೂ || 3 || ಜನ್ಮವನಿತ್ತಿಹ ಮಾತೆಗೆ […]
ಪಾಂಚಜನ್ಯ ಮೊಳಗುತಿಹುದು ಅಮರವಾದನ ಮನಮನವೂ ಬಯಸುತಿಹುದು ಅಸುರ ಮರ್ದನ ನಿಜದ ಅರಿವು ಎಚ್ಚರಿಸಿ …. ಭುಜದ ಮಿರುಗು ಪ್ರಜ್ವಲಿಸಿ ಹಿಂದು ಹೆಜ್ಜೆತಾಡನ ಅಲೆಯ ಅಬ್ಬರ || ಪ || ಮರೆವು ನಿದ್ರೆ ಕೊಡವಿಕೊಂಡ ನವ್ಯಚೇತನ ಹೃದಯ ಹೃದಯ ಬೆರೆಸಿಕೊಂಡ ಭವ್ಯ ಸ್ಪಂದನ ಬಂಧುಜೀವ ಏಕಭಾವ ಬೆಸುಗೆ ಇಂಧನ ಸೋಲಿನುಸಿರು ಇನ್ನೆಲ್ಲಿ … ಛಲದ ಹಸಿರು ತನುವಲ್ಲಿ ಕೋಟಿ ಜನರ ದಿಟ್ಟತನದಿ ಏಕತಾನಕೆ […]
ಪರಮ ಪೂಜ್ಯ ಕೇಶವ ಹೇ ಶ್ರೇಷ್ಠ ಧ್ಯೇಯಧಾರಿ ಕೋಟಿ ಕೋಟಿ ಹೃದಯ ದೇವ ನಮಿಪೆವೆಲ್ಲ ಸೇರಿ || ಪ || ಹೇ ಅಸೀಮ ಸ್ವಾರ್ಥತ್ಯಾಗಿ ಅದ್ವಿತೀಯ ಹೇ ವಿರಾಗಿ ದಿವ್ಯ ಹಿಂದು ಜನತೆಗಾಗಿ ಭವ್ಯ ರಾಷ್ಟ್ರಕಾಗಿ || 1 || ಹೇ ಅಜೇಯ ಶಕ್ತಿದಾತ ಪುಣ್ಯಶಾಲಿ […]
ನೋಡುವ ಬನ್ನಿರಿ ಬಂಧುಗಳೆಲ್ಲ, ಹಿಂದುಸ್ಥಾನದ ಸಾಹಸವ ಬಲಿದಾನದ ಈ ಭೂಮಿಯ ಕಣದಿ, ಧರಿಸುವ ನೊಸಲಿಗೆ ತಿಲಕವನು ವಂದೇ ಮಾತರಂ – ವಂದೇ ಮಾತರಂ ವಂದೇ ಮಾತರಂ – ವಂದೇ ಮಾತರಂ || ಪ || ಉತ್ತರ ದಿಸೆಯೊಳು ರಕ್ಷಣೆ ಗೈಯುವ, ಪರ್ವತ ರಾಜ ಹಿಮಾಲಯ ಭಾರತ ಮಾತೆಯ ಪಾದವ ತೊಳೆಯುತ, ಇಹುದದು ಸಾಗರ ಸಾಮ್ರಾಜ್ಯ ಗಂಗಾ ಯಮುನೆಯ ಸುಂದರ ತಟವು, ಪವಿತ್ರವೆನಿಸಿಹ ಸಂಗಮವು ಗ್ರಾಮ ಗ್ರಾಮದಿ ಪ್ರಾಂತ್ಯ ಪ್ರಾಂತ್ಯದಿ, ಹರಡಿಹ ಅಸಂಖ್ಯ ದೇಗುಲವು ನೋಡಿರಿ ನಮ್ಮಿ ‘ಅಖಂಡಭಾರತ’, […]
ನೆನಪಿಹುದೆ ? ಅಂದೊಮ್ಮೆ – ಪಶುಶಕ್ತಿಯಿಂದುಬ್ಬಿ, ಋಷಿರಕ್ತದಿಂ ಕೊಬ್ಬಿ ಯಂತ್ರ ಪ್ರಗತಿಯ ಪ್ರತೀಕವಾ ಪುಷ್ಪಕವನೇರಿ ದಕ್ಷಿಣದ ಲಂಕೆಯಿಂದುತ್ತರಕೆ ಹಾರಿ ಕೈಲಾಸವನೆ ಕಿತ್ತು ಬಿಸುಡಲುದ್ಯಮಿಸಿ ಕಲಿತ ಬುದ್ದಿಯನು ದೈತ್ಯ ದಶಶಿರನು ! || ಪ || ಮದಮತ್ತನಾ ರಕ್ಕಸನದೇ ರೂಪ ಪಶುಬಲದ ಕ್ರೂರ ಚೀನಿಯರ ಘೋರತೆಯನಾಂತು ಮಗದೊಮ್ಮೆ ಹೂಂಕರಿಸಿ ಬೊಬ್ಬಿರಿದು ಮೇಲೆದ್ದು ಶಾಂತಿಯರಮನೆ ತ್ರಿವಿಷ್ಟಪದ ಸಾಧುಸಂತರನೊದ್ದು ಹತ್ತಿ ಹಿಮಗಿರಿಯ ನೆತ್ತಿಯನು ಮತ್ತೆ ಕೆಳಗಿಳಿದು ಸೆಳೆದಿಹುದು ಭಾರತಿಯ ಮುಡಿಯ; ಕಾಲೆತ್ತಿ ತುಳಿದಿಹುದು ಸೀತಾಸತಿಯ ಧರೆಯ ! || 1 || […]
ನಿಲ್ಲದೆಲ್ಲಿಯು ಗೆಲ್ಲುವುದೆ ನಮ್ಮ ಗುರಿಯು ನಿಲ್ಲದೋಡಲಿದೆ ನಿಲುಗಡೆಯ ಗಡಿಯು || ಪ || ವಿಜಯಗಳ ಬರಸೆಳೆದು ಸೋಲ ತುಳಿದು ಭುಜಕೀರ್ತಿಪ್ರಭೆ ಬೆಳಗಿ ಹಗೆಯ ಹಳಿದು ಸೊಕ್ಕು ಸುಲಿಗೆಯ ಗರ್ವ ಮದೋನ್ಮತೆಯ ಶವದಹನಕಿದೋ ತರುತಿಹೆವು ಉರಿಯ || 1 || ಕುರುಕ್ಷೇತ್ರ ಪಾನಿಪತ ಕಳೆದುದೊಮ್ಮೆ ಕಳೆಯದಿದೆ ಮಗದೊಮ್ಮೆ ಬರುವ ಬಲುಮೆ ಅದೋ, ಪುನರುದಿಸುವಿತಿಹಾಸದೊಲುಮೆ ನಮ್ಮದಿದೆ ಸ್ವಾಗತಿಸುವತುಲ ಹೆಮ್ಮೆ || 2 || ಸತ್ಪಥದಿ ಜೊತೆಗಿಹುದು ಗೈದ ಶಪಥ ಧರ್ಮರಥಕಿಹುದು ಕರ್ಮಾಶ್ವ ನಿರುತ ಇಹೆವು ರಥಿಕರು ಧನುವ ಠೇಂಕರಿಸುತ ಸಾರಥಿಯು […]
ನಿನ್ನದೀ ಮನಭಾವನಾ ನಿನ್ನದೀ ಮನಭಾವನಾ ಈ ಚೇತನಾ ಈ ಪ್ರೇರಣಾ ಈ ಸಾಧನಾ || ಪ || ಮಾತೆಸೇವೆಯ ಗೈವ ನಮ್ಮಯ ಭಾವಶಕ್ತಿಯು ನಿನ್ನದು ರಾಷ್ಟ್ರರಕ್ಷಣೆ ಮಾಳ್ಪ ನಮ್ಮಯ ಶಕ್ತಿ ಶೌರ್ಯವು ನಿನ್ನದು || 1 || ಜನರ ಮನವ ಒಲಿಸಿ ಗೆಲುವ ಛಲವು ಒಲವು ನಿನ್ನದು ಮನದ ರೂಪವು ತಿದ್ದಿತುಂಬುವ ಶೀಲ ಸಭ್ಯತೆ ನಿನ್ನದು || 2 || ಭಿನ್ನಭಾವವ ಬಿಟ್ಟು ಜನರ ಒಂದುಗೂಡಿಪ ಶ್ರಮವು ನಿನ್ನದು ತನ್ನತನವನು ಜನರ ಮನದಿ ಬೆಳೆಸಿ ನಿಲಿಸಿದ ಕೀರ್ತಿ […]