ಪಾಂಚಜನ್ಯ ಮೊಳಗುತಿಹುದು ಅಮರವಾದನ

ಪಾಂಚಜನ್ಯ ಮೊಳಗುತಿಹುದು ಅಮರವಾದನ
ಮನಮನವೂ ಬಯಸುತಿಹುದು ಅಸುರ ಮರ್ದನ
ನಿಜದ ಅರಿವು ಎಚ್ಚರಿಸಿ ….
ಭುಜದ ಮಿರುಗು ಪ್ರಜ್ವಲಿಸಿ
ಹಿಂದು ಹೆಜ್ಜೆತಾಡನ ಅಲೆಯ ಅಬ್ಬರ                       || ಪ ||

ಮರೆವು ನಿದ್ರೆ ಕೊಡವಿಕೊಂಡ ನವ್ಯಚೇತನ
ಹೃದಯ ಹೃದಯ ಬೆರೆಸಿಕೊಂಡ ಭವ್ಯ ಸ್ಪಂದನ
ಬಂಧುಜೀವ ಏಕಭಾವ ಬೆಸುಗೆ ಇಂಧನ
ಸೋಲಿನುಸಿರು ಇನ್ನೆಲ್ಲಿ …
ಛಲದ ಹಸಿರು ತನುವಲ್ಲಿ
ಕೋಟಿ ಜನರ ದಿಟ್ಟತನದಿ ಏಕತಾನಕೆ                       || 1 ||

ಶೃಂಗತುಹಿನ ಸಿಂಧುಬಿಂದು ಎದೆಯ ತುಂಬಿದೆ
ವೇದಘೋಷ ಗೀತೆಸಾರ ಗುರಿಯ ತೋರಿದೆ
ಇತಿಹಾಸ ಪುಟಪುಟನೆ ಮಂತ್ರ ಉಲಿದಿದೆ
ಎಚ್ಚರಾದ ಸಂಘಟನೆ ತಂತ್ರ ಫಲಿಸಿದೆ
ಉತ್ಥಾನಕೆ ನಾಂದಿಯಿದು ……
ಪ್ರಸ್ಥಾನಕೆ ಹಾದಿಯಿದು …..
ಗಗನಗಮನ ದರ್ಶನಕೆ ಸೋಪಾನ                           || 2 ||

Leave a Reply

Your email address will not be published. Required fields are marked *

*

code