ಪರಮಪೂಜ್ಯ ಕೇಶವ ಹೇ

ಪರಮ ಪೂಜ್ಯ ಕೇಶವ ಹೇ
ಶ್ರೇಷ್ಠ ಧ್ಯೇಯಧಾರಿ
ಕೋಟಿ ಕೋಟಿ ಹೃದಯ ದೇವ
ನಮಿಪೆವೆಲ್ಲ ಸೇರಿ                        || ಪ ||

ಹೇ ಅಸೀಮ ಸ್ವಾರ್ಥತ್ಯಾಗಿ
ಅದ್ವಿತೀಯ ಹೇ ವಿರಾಗಿ
ದಿವ್ಯ ಹಿಂದು ಜನತೆಗಾಗಿ
ಭವ್ಯ ರಾಷ್ಟ್ರಕಾಗಿ                        || 1 ||

ಹೇ ಅಜೇಯ ಶಕ್ತಿದಾತ
ಪುಣ್ಯಶಾಲಿ ಶಾಂತಿದೂತ
ದಲಿತ ಜನಕೆ ಸ್ಫೂರ್ತಿದಾತ
ಸರ್ವಜನರ ಪ್ರೀತ                       || 2 ||

ಯೋಧ ಹೇ ಮಹಾ ಪ್ರತಾಪ
ಬೋಧನಾ ಸುಧಾ ಸ್ವರೂಪ
ಹಿಮಾದ್ರಿ ಸದೃಶ ಅಚಲ ಭೂಪ
ಸಮಾಜ ಮುಕುಟ ರೂಪ         || 3 ||

ಶಕ್ತಿಗಂಗೆ ಹರಿಸಿ ಮುಂದೆ
ಎಮ್ಮ ಪಾಪ ಹರಿಸಿ ತಂದೆ
ಪುಣ್ಯ ಗಂಗೆಯಲಿ ಮಿಂದೆ
ಪುಣ್ಯಲೋಕ ಸೇರಿದೆ                || 4 ||

ಜೀವನವೇ ಸತತ ಯಜ್ಞ
ಸದಾ ಸಮಾಜ ಕಾರ್ಯಮಗ್ನ
ಸತ್ಯಮೋಘ ಆತ್ಮಯಜ್ಞ
ಹೇ ದೃಢ ಪ್ರತಿಜ್ಞ                    || 5 ||

ನಡೆಸು ಎಮ್ಮ ಹೇ ತಪಸ್ವಿ
ಹರಸು ಎಮ್ಮ ನೀ ಮನಸ್ವಿ
ಸಂಘಕಾರ್ಯ ಚಿರ ಯಶಸ್ವಿ
ವಂದನಾ ತಪಸ್ವಿ                    || 6 ||

Leave a Reply

Your email address will not be published. Required fields are marked *

*

code