ಪುನರುದ್ಧಾರದ ಸಂಕಲ್ಪದ ಸೆಲೆ

ಪುನರುದ್ಧಾರದ ಸಂಕಲ್ಪದ ಸೆಲೆ ಹರಿಸೋಣ
ಪುನರುತ್ಥಾನಕೆ ಕೈಜೋಡಿಸಿ ಸಹಕರಿಸೋಣ
ಹೊಸ ಇತಿಹಾಸದ ಹರಿಕಾರರು ನಾವೆನಿಸೋಣ || ಪ ||

ಪರಿಸರದೊಳು ಪರಿಪರಿ ಚಿಂತನೆಗಳ ತುಂಬೋಣ
ಪರಿವರ್ತನೆಗಳಿಗೆಳಸುವ ನಿಲುಮೆಯ ನಂಬೋಣ
ಪರಮ ವೈಭವದ ಪರಮಾರ್ಥದ ಫಲ ಪಡೆಯೋಣ|| 1 ||

ಶತಮಾನದ ದಾಸ್ಯದ ದೌರ್ಬಲ್ಯವ ತೊಡೆಯೋಣ
ಸುತರೆದೆಯಲಿ ಹಿಂದೂ ಆದರ್ಶವ ಕಡೆಯೋಣ
ಸತತ ಸಾಧನೆಯ ಸಿದ್ಧಿಯ ಫಲ ಅನುಭವಿಸೋಣ || 2 ||

ಕಲೆಗೊಳ್ಳಲಿ ಕಲಿಕುಲಗಳ ವೀರರ ನಿರ್ಮಾಣ
ಕಲಿಗಾಲದ ವಿಪರೀತಕೆ ನಡೆಯಲಿ ನಿರ್ಯಾಣ
ಕಾಲ ಸೃಷ್ಟಿಸುವ ಸವಾಲು ಸೈನ್ಯವ ಜಯಿಸೋಣ || 3 ||

Leave a Reply

Your email address will not be published. Required fields are marked *

*

code