ನಿಂತೆ ನಿಂತಿರುವಳಾ ಉದ್ದಕುದ್ದಂಡ ಸಂತಾನ ಕೂಡಿ ನವ ಜೀವನವ ಕಂಡ || || ಪ || ಕಾಶ್ಮೀರ ಕನ್ಯಾಕುಮಾರಿ ಪರ್ಯಂತ ಭಾರತಿಯ ಶುಭಕಾಯ ಸುಭಗ ಶ್ರೀಮಂತ | ಸಾರಯುತ ಸಮ್ಮಿಲಿತ ಫಲಭರಿತ ಆದ್ಯಂತ ಆಶ್ವೇತ ಗಿರಿಕಾಯ ಶಿರಮುಕುಟ ಪ್ರಾಂತ || || 1 || ಯುಗ ಯುಗಾಂತರ ಗಂಗೆ ಹಿಮದುದರದಿಂದ ಹೊಮ್ಮಿ ಹರಿದಿಹಳೆಮ್ಮ ಪೊರೆದು ಕೋದಂಡ | ದಕ್ಷ ದರ್ಪವ ಅಳಿಸಿ ತಾರಕನ […]
ನಾವೆಲ್ಲ ಹಿಂದುಗಳು ಎಲ್ಲರೂ, ನಾವೆಲ್ಲ ಬಂಧುಗಳು ಭಾರತಮಾತೆಯನೂ ವೈಭವ ಶಿಖರಕ್ಕೇರಿಸುವಾ ನಮ್ಮಯ ಆತ್ಮ ಒಂದೇ ಅಂತೇ ಏಕಾತ್ಮ ಮಾನವತೆ || ಪ || ಜಾತೀಯ ಭೇದ ತೊರೆದು | ಪ್ರಾಂತೀಯ ಮೋಹ ಜಿಗಿದು ನಾವೆಲ್ಲ ಭಾರತ ಮಾತೆಯ ಮಕ್ಕಳು ಎಂದು ಕುಣಿಯೋಣ ನಾವೆಲ್ಲ ಹಿಂದುಗಳು ಎಲ್ಲರೂ ನಾವೆಲ್ಲ ಬಂಧುಗಳು ನಮ್ಮಯ ಆತ್ಮ ಒಂದೇ ಅಂತೇ ಏಕಾತ್ಮ ಮಾನವತೆ || 1 || ಹಿಂದು ಒಂದಾಗಿ ಬಂದು | ಬಂದಲ್ಲಿ ಶಿಸ್ತಲ್ಲಿ ನಿಂದು ನೀಲ ಗಗನಕೆ ಹಾರಿಸೋಣ ಭಗವಾಧ್ವಜ […]
ನವಭಾರತ ನಿರ್ಮಾಣಕೆ ಎರಗಿದ ಐಕ್ಯ ವಿರೋಧಿ ಸವಾಲುಗಳೇ ಯುವ ಭಾರತ ಹೊರಟಿದೆ ಸ್ವೀಕರಿಸಲು ನಿಮ್ಮನು ನಿಮ್ಮ ಅಖಾಡದಲೆ || ಪ || ಅಪ್ರತಿಹತವಿದು ನಾಡಿಗೆ ಕೂಡಿದ ಧ್ಯೇಯ ಜೀವನದ ಬಲದರಿವು ತನುಮನಗಳ ಅನುಶಾಸನ ನೀಡಿದ ಇತಿಹಾಸ ಪ್ರವಾಹದ ತಿರುವು || 1 || ಸಂಘಟನೆಯ ಗಂಗೋತ್ರಿಯ ಬುಗ್ಗೆ ನಿಜ ಸಮಾಜದಂಚಿನವರೆಗೆ ಅನುಜತ್ವದ ಸ್ನೇಹಾಂಕಿತ ಲಗ್ಗೆ ಮನುಜತ್ವದ ಮೇರೆಯವರೆಗೆ || 2 || ಧ್ರುವ […]
ನರಕನೋವಲಿ ಜನನಿ ನರಳುವುದ ತಾ ಕಂಡು ಸಮ್ಮಾನ ಸುಖಸುಧೆಯ ತ್ಯಜಿಸಿದವನಾರು ? ಅಗ್ನಿಗಾಹುತಿ ಎನ್ನ ಸರ್ವಸುಖವೆಂದು ಕಾಲಕೂಟದ ಕುಡಿದ ಕಲಿಪುರುಷನಾರು ? || ಪ || ಮಾತಿರದ ಕಂಠದೊಳು ಭಯಭೀತ ಭಾವದೊಳು ಹಿಂದು ಬಂಧುಗಳೆಲ್ಲ ಹರಿದು ಹಂಚಿರಲು ವರುಷ ಸಾಸಿರದಿಂದ ಪದಪ್ರಹಾರವ ಸಹಿಸಿ ತನ್ನ ಅಸ್ತಿತ್ವವನೆ ತಾನು ಮರೆತಿರಲು ಆತ್ಮವಿಸ್ಮೃತಿಯೆಂದು ಪತನ ನಿಶ್ಚಿತವೆಂದು ಬಾಂಧವರನೆಚ್ಚರಿಪ ಕರೆ ಕೊಟ್ಟನಾರು ? || 1 || ಅಪಹಾಸ ಉಪಹಾಸ ಎಲ್ಲೆಡೆಯು ಧ್ವನಿಸುತಿರೆ ದುಃಖ ದುಮ್ಮಾನದಲಿ ತಾಯೊಡಲು ಸೂಸುತಿರೆ ಕುಪುತ್ರ ಕೋಟಿ […]
ನಮ್ಮದೆಲ್ಲರ ಬಾಳಿದಾಗಲಿ ನಿನ್ನದೇ ಪ್ರತಿಬಿಂಬದಂತೆ ಪೂರ್ಣವಾಗಲಿ ಧ್ಯೇಯ ಸಾಧನೆ ಹಿರಿಮೆಗೇರಲಿ ಭರತಮಾತೆ || ಪ || ಬಾಳನುರಿಸಿದೆ ಬಾಲ್ಯಜೀವನದಿಂದಲಂತಿಮ ಕ್ಷಣದ ವರೆಗು ಬದುಕಿನುದ್ದಕು ಬಿಡದೆ ನಡೆದಾ ಮೂಕ ತಪವನು ಮರೆವುದೆಂತು ? ಅಳೆಯಲಸದಳ ವಿಧಿಗು ನಿನ್ನಯ ಕ್ಷೀರಸಾಗದಂಥ ಬದುಕು ಬಿಂದುವಿನ ತೆರದಿಂದಲೆಮಗಾ ಸಿಂಧುವಿನ ಸವಿಮಿಲನ ಸಾಕು || 1 || ಶ್ರಮವ ಸಹಿಸಿದೆ ವಿಶ್ರಮಿಸದೇ ಜನ್ಮದೊಳು ನೀನೊಂದು ಕ್ಷಣವು ರಾಷ್ಟ್ರಯಜ್ಞಕೆ ಆಜ್ಯವಾಯಿತು ನೆತ್ತರಿನ ಪ್ರತ್ಯೇಕ ಕಣವು ಆತ್ಮದಾಹುತಿಯಿತ್ತು ಸಾರಿದೆ ದೇಶಮುಕ್ತಿಯ ಮಂತ್ರವೆಮಗೆ ತಾಗಲೆಮ್ಮಯ ಹೃದಯಪ್ರಣತಿಯ ಯಜ್ಞ ಜ್ವಾಲೆಯದೊಂದೆ […]
ನಮ್ಮ ಜನರ ಕರೆಯುವಾಗ ನಮ್ಮ ಹಿರಿಮೆ ಅರಿಯುವಾಗ | ಹೆಮ್ಮೆಯಿಂದ ನುಡಿಯಬೇಕು ‘ಹಿಂದು’ ಎಂಬ ಹೆಸರ ಹಿಂದುವಿನ ಪರಂಪರೆಯಲಿ ಎಂಥ ಗೋಚರ | ಅಲ್ಲಿ ಎಂಥ ಗೋಚರ || ಪ || ಕರೆವ ಹಾಲು ಹರಿವ ಹೊಳೆ ಬೆಳೆದ ಬೆಳೆಗೆ ತುಂಬಿದಿಳೆ ಭೂಮಿಯಗಲ ಬಾನಿನುದ್ದ ಸಂಪದಗಳ ಒರತೆ ಕೊರತೆಗೊಂದೆ ಕೊರತೆ ಎನಿತು ಸುಂದರ | ಮನಕೆ | ಎಂಥ ಗೋಚರ || 1 || ಮನುಜ ಪ್ರೀತಿ ಭೂತ ದಯೆ ಪ್ರಕೃತಿ ಶಕ್ತಿ ಪ್ರೇಮಮಯೆ ಆತ್ಮಶಕ್ತಿ ರಾಮರಾಜ್ಯ […]
ನಮೋ ಜ್ಞಾನದಾನಿ ಜಗದ್ಗುರುವಿಗೆ ಹೃದಯಸೌಧ ಶಿಖರವಾಸಿ ಭಗವೆಗೆ || ಪ || ಅಗ್ನಿಮುಖದಿ ಸಿಂಧುತಟದಿ ವೇದಪಠನ ನಡೆಸುತ ಕ್ಷಾತ್ರ ಹೃದಯದಗ್ನಿ ಉರಿಸಿ ಗಡಿಯ ರಕ್ಷೆಗೈಯುತ ವಿಜಯಸ್ಥಂಭವೇರುತಿಹುದು ಗಗನ ಸೇರಿ ಮೆರೆಯುತ ಬೆಳಕು ಬೀರಿ ಜಗಕೆ ದಾರಿ ತೋರಿದಾರ್ಯ ಸಮರ್ಪಿತ || 1 || ಭೀಷ್ಮ ದ್ರೋಣ ಪಾಂಡು ಸುತರಿಗಾಯ್ತು ವರ್ಗ ದ್ವಾಪರ ಗೀತೆಯೊರೆದ ಕೃಷ್ಣನಲ್ತೆ ಶಿಷ್ಯರೊಳಗಗ್ರೇಸರ ಸೂರ್ಯಚಂದ್ರ […]
ನನ್ನ ನಾಡ ಚೆನ್ನ ನಾಡ ಬನ್ನಬಡುತ ಪೊರೆಯುವಾ ನನ್ನಿಯಿಂದ ತಾಯಿನಾಡ ಹೊನ್ನ ಸಿರಿಯ ಬೆಳಗುವಾ || ಪ || ರಾಮಕೃಷ್ಣ ವಿದ್ಯಾರಣ್ಯ ವ್ಯಾಸರನ್ನು ಸ್ಮರಿಸುವಾ ಬುದ್ಧ ಬಸವ ಶಂಕರಾದಿ ಗುರುಗಳನ್ನು ನಮಿಸುವಾ ಶಿವ ಪ್ರತಾಪ ಹರಿಹರಾದಿ ಭೂಪರನ್ನು ಸ್ಮರಿಸುವಾ ಚಂದ್ರಗುಪ್ತ ಪುಲಿಕೇಶಿ ವೀರರನ್ನು ನಮಿಸುವಾ ನಾಡಮೇಲ್ಮೆಗಾಗಿ ದುಡಿದ ಇವರ ಸ್ಮರಣೆ ಮಾಡುವಾ ನಾಡಮೇಲ್ಮೆಯಲ್ಲಿ ನಮ್ಮ ಮೇಲ್ಮೆಯನ್ನು ಕಾಣುವಾ || 1 || […]
ನದನದಿಗಳ ಗಿರಿವನಗಳ ತಾಯೆ ಭಾರತ ಮಾತೆ ಓಂಕಾರದ ಝೇಂಕಾರದಿ ನಿನಗಿದೊ ಶುಭಗೀತೆ || ಪ || ಹಿಮಚುಂಬಿತ ಶಿಖರದಲ್ಲಿ ತಾಯೆ ನಿನ್ನ ನೆಲಸು ಬಿರುಗಾಳಿಯ ಭಿತ್ತಿಯಿಂದ ನೀನೆಮ್ಮನು ಹರಸು | ಗಂಗೆ ಯಮುನೆ ಸಂಗಮದಲಿ ನಿನ್ನ ವೇದಘೋಷ ದೇವದಾರು ವನಗಳಲ್ಲಿ ನಿನ್ನ ಮಂದಹಾಸ || 1 || ವಿಂಧ್ಯಾಚಲದೀಚೆಗಿಲ್ಲಿ ಸಂಧ್ಯಾರುಣ ಛಾಯೆ ಕಾವೇರಿಯ ತೆರೆಗಳಲ್ಲಿ ಮೀನಾಕ್ಷಿಯ ಮಾಯೇ | ಪರ್ವತಗಳ ಶಿಖರದಿಂದ ಕಡಲಂಚಿನ ತನಕ ತಾಯೆ ನಿನ್ನ ಮುಕುಟದಿಂದ ಹೊಳೆಯಲಿ ಮಣಿಕನಕ || 2 ||
ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ || ಪ || ಬೆಚ್ಚಬಿಡು ನೆಚ್ಚನೆಡು ಕೆಚ್ಚಿದೆಯ ಗುಡಿಯಲ್ಲಿ ಸೆರೆಯ ಹರಿ, ಅರಿಯನಿರಿ, ಹುಟ್ಟಳಿಸು ಹುಡಿಯಲ್ಲಿ ನಾನಳಿವೆ ನೀನಳಿವೆ ನಮ್ಮೆಲುವುಗಳ ಮೇಲೆ ಮೂಡುವುದು ಮೂಡುವುದು ನವಭಾರತದ ಲೀಲೆ || 1 || ನೊಂದ ದನಿ ಕಣ್ಣಪನಿ ಬರಿದೆಯೆಂದೊರೆಯದಿರು ತೆತ್ತ ಹಣ ಸತ್ತ ಹೆಣ ಹೋಯ್ತೆಂದು ಮೊರೆಯದಿರು ಪೊಡವಿಯೊಳಗಡಗಿರುವ ತಳಹದಿಯ ತೆಗಳುವರೆ ? ಮೆರೆಯುತಿರುವರಮನೆಯ ಸಿರಿಯೊಂದ ಹೊಗಳುವರೆ ? || 2 […]