ನಮ್ಮ ಜನರ ಕರೆಯುವಾಗ

ನಮ್ಮ ಜನರ ಕರೆಯುವಾಗ ನಮ್ಮ ಹಿರಿಮೆ ಅರಿಯುವಾಗ |
ಹೆಮ್ಮೆಯಿಂದ ನುಡಿಯಬೇಕು ‘ಹಿಂದು’ ಎಂಬ ಹೆಸರ
ಹಿಂದುವಿನ ಪರಂಪರೆಯಲಿ ಎಂಥ ಗೋಚರ |
ಅಲ್ಲಿ ಎಂಥ ಗೋಚರ || ಪ ||

ಕರೆವ ಹಾಲು ಹರಿವ ಹೊಳೆ ಬೆಳೆದ ಬೆಳೆಗೆ ತುಂಬಿದಿಳೆ
ಭೂಮಿಯಗಲ ಬಾನಿನುದ್ದ ಸಂಪದಗಳ ಒರತೆ
ಕೊರತೆಗೊಂದೆ ಕೊರತೆ ಎನಿತು ಸುಂದರ | ಮನಕೆ | ಎಂಥ ಗೋಚರ || 1 ||

ಮನುಜ ಪ್ರೀತಿ ಭೂತ ದಯೆ ಪ್ರಕೃತಿ ಶಕ್ತಿ ಪ್ರೇಮಮಯೆ
ಆತ್ಮಶಕ್ತಿ ರಾಮರಾಜ್ಯ ಧರ್ಮ ಇಲ್ಲಿ ಬೆಳಕು
ಮಂತ್ರ ಮಿಂಚು ಸೆಳಕು ಎನಿತು ಇಂಚರ | ಕಣ್ಣಿಗೆಂಥ ಗೋಚರ || 2 ||

ಕಳೆದ ದಿನಗಳಳಿದವಿನ್ನು ಮರಳಿ ಭಾಗ್ಯ ಬಾರದೇನು ?
ಧ್ಯೇಯ – ದಾರಿ – ದ್ರವ್ಯವಿರಲು ಬೆಳೆವ ದಿನಕೆ ದಿನಕೆ
ಸ್ಥಿರತೆ ಬೇಕು ಮನಕೆ ಮನವು ಮಂದರ | ದೃಷ್ಟಿಗೆಂಥ ಗೋಚರ || 3 ||

Leave a Reply

Your email address will not be published. Required fields are marked *

*

code