ನಾವೆಲ್ಲ ಹಿಂದುಗಳು ಎಲ್ಲರೂ ನಾವೆಲ್ಲ

ನಾವೆಲ್ಲ ಹಿಂದುಗಳು ಎಲ್ಲರೂ, ನಾವೆಲ್ಲ ಬಂಧುಗಳು
ಭಾರತಮಾತೆಯನೂ ವೈಭವ ಶಿಖರಕ್ಕೇರಿಸುವಾ
ನಮ್ಮಯ ಆತ್ಮ ಒಂದೇ ಅಂತೇ ಏಕಾತ್ಮ ಮಾನವತೆ || ಪ ||

ಜಾತೀಯ ಭೇದ ತೊರೆದು | ಪ್ರಾಂತೀಯ ಮೋಹ ಜಿಗಿದು
ನಾವೆಲ್ಲ ಭಾರತ ಮಾತೆಯ ಮಕ್ಕಳು ಎಂದು ಕುಣಿಯೋಣ
ನಾವೆಲ್ಲ ಹಿಂದುಗಳು ಎಲ್ಲರೂ ನಾವೆಲ್ಲ ಬಂಧುಗಳು
ನಮ್ಮಯ ಆತ್ಮ ಒಂದೇ ಅಂತೇ ಏಕಾತ್ಮ ಮಾನವತೆ || 1 ||

ಹಿಂದು ಒಂದಾಗಿ ಬಂದು | ಬಂದಲ್ಲಿ ಶಿಸ್ತಲ್ಲಿ ನಿಂದು
ನೀಲ ಗಗನಕೆ ಹಾರಿಸೋಣ ಭಗವಾಧ್ವಜ ಜೈ ಎಂದು
ನಾವೆಲ್ಲ ಹಿಂದುಗಳು ಎಲ್ಲರೂ ನಾವೆಲ್ಲ ಬಂಧುಗಳು
ನಮ್ಮಯ ಆತ್ಮ ಒಂದೇ ಅಂತೇ ಏಕಾತ್ಮ ಮಾನವತೆ || 2 ||

ದಿನನಿತ್ಯ ಶಾಖೆ ಎಂದು | ಒಂದೆಡೆಗೆ ಸೇರಿ ಬಂದು
ಕೇಶವ ಮಾಧವ ಪೂಜ್ಯರೆಂದು ಸಾರಿ ಸಾರಿ ಹೇಳೋಣ
ನಾವೆಲ್ಲ ಹಿಂದುಗಳು ಎಲ್ಲರೂ ನಾವೆಲ್ಲ ಬಂಧುಗಳು
ನಮ್ಮಯ ಆತ್ಮ ಒಂದೇ ಅಂತೇ ಏಕಾತ್ಮ ಮಾನವತೆ || 3 ||

ನಮ್ಮಲ್ಲಿ ಭೇದ ಇಲ್ಲ | ನಮ್ಮಲ್ಲಿ ಛೇದ ಇಲ್ಲ
ಹಿಂದುಗಳೆಲ್ಲರ ಹೃದಯಸಂಗಮವು ಅದುವೇ ಹಿಂದು ಸಂಗಮ
ನಾವೆಲ್ಲ ಹಿಂದುಗಳು ಎಲ್ಲರೂ ನಾವೆಲ್ಲ ಬಂಧುಗಳು
ನಮ್ಮಯ ಆತ್ಮ ಒಂದೇ ಅಂತೇ ಏಕಾತ್ಮ ಮಾನವತೆ || 4 ||

Leave a Reply

Your email address will not be published. Required fields are marked *