ಬನ್ನಿ ಮಿತ್ರರೇ ಬನ್ನಿ ಮಿತ್ರರೇ
ಬೆಳ್ಳಿಚುಕ್ಕೆ ಮೂಡುತಿಹುದು
ಭ್ರಾಂತಭಾವ ತೊಲಗುತಿಹುದು
ಸಂಘಮಂತ್ರ ಜಪಿಸಿ ನಾವು ಮುಂದೆ ಸಾಗುವಾ
ನಾವು ಮುಂದೆ ಸಾಗುವಾ || ಪ ||
ಮೇಲು ಕೀಳು ಅವನು ಇವನು ಯಾವ ಭೇದ ಇಲ್ಲಿ ಸಲ್ಲ
ಭರತ ಭುವಿಯ ಮಕ್ಕಳೆಲ್ಲ ಹಿಂದು ಎಂಬ ಒಂದೆ ಸೊಲ್ಲ
ಜಗದಿ ನಾವು ಹರಡುವಾ ಬನ್ನಿ ಮಿತ್ರರೇ || 1 ||
ಬ್ರಹ್ಮಕ್ಷಾತ್ರ ತೇಜ ಕೂಡಿ ನವಯುಗವ ನಿರ್ಮಿಸಿ
ಭೀತ ಜಗಕೆ ಭರವಸೆಯ ನೀಡಿ ಬಾನಾಡಿಯಂತೆ
ಮುಕ್ತರಾಗಿ ಮೆರೆಸುವಾ ಬನ್ನಿ ಮಿತ್ರರೇ || 2 ||
ಮನುಕುಲವ ಕಾಡುತಿರುವ ದಾನವರ ದಮನಗೈದು
ಚಿರಸುಖವ ನೆಲೆಗೊಳಿಸಲು ಸಂಘವೊಂದೆ ದಾರಿ ಎಂಬ
ಪರಮ ಸತ್ಯ ಸಾರಲು ಬನ್ನಿ ಮಿತ್ರರೇ || 3 ||