ಬಲವೇದಿ ಕಾದಿಹುದು ಎಂದೆಂದು ನಿನಗೆಂದು
ಬಾ ಬಂಧು ಬಾಳಿದನು ಬಲಿನೀಡಲೆಂದು
ಏರಿಂದೆ ಮೇಲೇರು ಜಗಕೆಲ್ಲ ನೀ ಸಾರು
ಭಾರತಿಯ ಬಸಿರೆಂದು ಬರಿದಾಗದೆಂದು || ಪ ||
ಪರದೇಶ ಪರಧರ್ಮಗಳು ಬಾಗಿಲೊಳು ನಿಂದು
ತಾಯ್ನೆಲವ ಕಬಳಿಸಲು ಕಾದಿರುವುವಿಂದು
ಓ ಹಿಂದು ಮೇಲೇಳು ಕೊರಳೆತ್ತಿ ನೀ ಹೇಳು
ಬಂದಿಲ್ಲ ಭಾರತಕೆ ಬಂಜೆತನವೆಂದು || 1 ||
ಒಳಹೊರಗೆ ನೂರಾರು ದಾಳಿಗಳನೆದುರಿಸುತ
ಉಸಿರಾಡುತಿಹೆವಿನ್ನು ಜೀವಂತರಾಗಿ
ಮೇಲೇರಿ ಬರುವವರಿಗರುಹು ಬಾ ನೀನಿಂದು
ಆರಿಲ್ಲ ಭಾರತದ ಬಡಬಾಗ್ನಿಯೆಂದು || 2 ||
ನುಂಗುವರ ಕೊರಳಿರಿವ ಕೂರಸಿಯು ನೀನಾಗಿ
ನಮಿಸಿದರೆ ಕ್ಷಮಿಸುತಲಿ ನಯವಂತನಾಗಿ
ಜಗಕೆಲ್ಲ ತೋರುತಲಿ ಶೀಲದಲಿ ಶೌರ್ಯದಲಿ
ಭಾರತಕೆ ಬಡತನವು ಬಂದಿಲ್ಲವೆಂದು || 3 ||
ಭಾರತಿಯ ಬಸಿರಿನೊಳು ಭಾರತದ ಹೆಸರಿನೊಳು
ಶಿಶುಗಳೆನಿತೆನಿತೋ ಉಸಿರಾಡುತಿಹೆವಿಂದು
ವಿಶ್ವವನೆ ವಿಕಸಿಸಲು ಧರ್ಮಧ್ವಜವರಳಿಸಲು
ಭಾರತಕೆ ಬಂಜೆತನ ಬರಬಾರದೆಂದು || 4 ||