ಬಾ ಕುಶಲ ಕರ್ಣಧಾರ

ಬಾ ಕುಶಲ ಕರ್ಣಧಾರ ಸಂಘಟನೆಯ ಹರಿಕಾರ || ಪ ||

ನಾಡಪ್ರೇಮ ಕಿರಣ ತುಂಬಿ ನಾಡ ನಾಳಗಳಲಿ ತುಂಬಿ
ಜೀವ ತುಂಬಿ ಭಾವ ತುಂಬಿ ಬಾಳ ತುಂಬು ಬಾ || 1 ||

ಹಿಂದು ಜನರ ಮನದೊಳಾಡಿ ಬಾಹುಗಳನು ಸ್ಫುರಣಗೊಳಿಸಿ
ಮನವ ತೀಡಿ ಸುಧೆಯ ನೀಡಿ ದಾರಿ ತೋರು ಬಾ || 2 ||

ಸಂಘಟನೆಯ ಮಂತ್ರ ನೀಡಿ ಓರೆಕೋರೆ ತಿದ್ದಿ ತೀಡಿ
ದೇಶಪ್ರೇಮ ಕಂಪ ಹರಡಿ ಬಾಳ ತೋರು ಬಾ || 3 ||

‘ಯಾಚಿ ದೇಹಿ ಯಾಚಿ ಡೋಳ’ ಜೀವ ತುಂಬಿ ನನಸ ಮಾಡಿ
ಬಾಹುಬಲಿಯ ದೃಷ್ಟಿಯಲ್ಲಿ ಬಾಳ ದೇವ ಬಾ || 4 ||

Leave a Reply

Your email address will not be published. Required fields are marked *

*

code