ಜೋ…..ಜೋಜೋಜೋ……. ನಿತ್ಯ ನಮಿಸಬೇಕು

ಜೋ…..ಜೋಜೋಜೋ……. ಜೋಜೋ…….ಜೋಜೋಜೋ………  || ಪ ||   ಉಣ್ಣುವ ಅನ್ನಕೂ ಪಾವನ ಮಣ್ಣಿಗೂ ನಿತ್ಯ ನಮಿಸಬೇಕು ಮಗುವೇ ನಿತ್ಯ ನಮಿಸಬೇಕು..               || 1 ||   ನಂಬಿದ ದೇವರ ಬಿಂಬದ ಇದಿರು ಹಣತೆ ಹಚ್ಚಬೇಕು ಮಗುವೇ ಹಣತೆ ಹಚ್ಚಬೇಕು..                || 2 ||   ಗತ ಇತಿಹಾಸದ ಪುಟಗಳ ತಿರುವಲು ಬೆಳೆಯಬೇಕು ಮಗುವೇ ನೀನು ಬೆಳೆಯಬೇಕು..                           || 3 ||   ಸ್ವಾತಂತ್ರ್ಯಕಾಗಿ ಮಡಿದ ಕಲಿಗಳ ಕಥೆಯ ಓದಬೇಕು ಮಗುವೇ ಕಥೆಯ ಓದಬೇಕು..                || 4 || […]

Read More

ಮನದ ಮೂಲೆಯಲ್ಲಿ ಮೊಳೆತ

ಮನದ ಮೂಲೆಯಲ್ಲಿ ಮೊಳೆತ ಮಧುರ ಭಾವ ಸುಂದರ ಮಾತೆ ನಿನ್ನ ಮೂರ್ತಿಗೆನ್ನ ಹೃದಯವಾಯ್ತು ಮಂದಿರ     || ಪ || ನಿನ್ನ ಹಿರಿಮೆಯರಿಮೆ ಎನ್ನ ಹೃದಯ ಹಸನುಗೊಳಿಸಿತು ಪ್ರೇಮದೊಡನೆ ಪೂಜ್ಯಭಾವ ಬೆರೆತು ಭಕ್ತಿ ಸ್ಫುರಿಸಿತು        || 1 || ‘ನಾನು’ ಏನು ಎಂಬ ಅರಿವು ನನ್ನ ಒಳಗೆ ಉದಿಸಿತು ನಿನ್ನ ಜೊತೆಗೆ ಲೀನಗೊಳುವ ಭಾವವೊಂದು ಬೆಳೆಯಿತು      || 2 || ನಮ್ಮೊಳಗಿನ ಭಾವ ಬೆಸುಗೆ ಗುರು ಭಗವೆಯೇ ಪ್ರೇರಕ ಮೇಲರಿಮೆಯ ಮೌಢ್ಯ ತೊಡೆದ ಮಹಾ ಮಾರ್ಗದರ್ಶಕ         || 3 || ‘ನಾನು’ ಲೀನನಾದ […]

Read More

ಸಾಟಿ ಇಲ್ಲದ ಸಂತ ನಿನಗೆ ಕೋಟಿ ಕೋಟಿ ವಂದನೆ

ಸಾಟಿ ಇಲ್ಲದ ಸಂತ ನಿನಗೆ ಕೋಟಿ ಕೋಟಿ ವಂದನೆ ಹುಟ್ಟಿ ಬಾರೊ ಮತ್ತೆ ನೀನು ಸಕಲ ವಿಶ್ವವಂದ್ಯನೆ ನೋವ ಸಹಿಸಲಾರೆವು… ನಿನ್ನ ಮರೆಯಲಾರೆವು                     || ಅ.ಪ ||   ಪ್ರಾಂತಜಾತಿ ಪಂಥ ಪಕ್ಷ ಸೀಮೆಗಳನು ದಾಟಿದೆ ಭಾರತೀಯರೆದೆಯ ಹೃದಯ ತಂತಿಗಳನು ಮೀಟಿದೆ ಸಂಕುಚಿತತೆ ಮೀರಿ ನಿಂತ ತ್ಯಾಗಭರಿತ ಜೀವನ ಕಾರ್ಯನಿರತ ಸ್ಫೂರ್ತಿಭರಿತ ನಿನ್ನ ಬದುಕು ಪಾವನ                || 1 ||   ರಾಜಕೀಯ ನೆಪಕೆ […]

Read More

ಯುಗದ ಆಹ್ವಾನವಿದು ಕೇಳಬನ್ನಿ

ಯುಗದ ಆಹ್ವಾನವಿದು ಕೇಳಬನ್ನಿ ತಾಯ್ನೆಲದ ಕರೆಗೆ ಓಗೊಡುತ ಬನ್ನಿ       || ಪ || ಸಾವಿರದ ಇತಿಹಾಸ ನಿತ್ಯ ಪ್ರೇರಕವಾಗಿ ಎಮ್ಮ ಹಿರಿಯರ ಬಾಳು ದೀಪವಾಗಿ ನವಿರುಗೊಳ್ಳಲಿ ತ್ರಾಣ ಕ್ಷಾತ್ರ ಶಕ್ತಿಯ ಸ್ಫುರಣ ನಾಡರಕ್ಷಾಕವಚ ಆಗಬನ್ನಿ              || 1 || ಆತ್ಮವಿಸ್ಮೃತಿಯೊಂದು ಸ್ವಾರ್ಥ ಚಿಂತನೆಯೊಂದು ರಾಹು ಕೇತು ಗ್ರಹಣ ಮುಕ್ತವಾಗಿ ಬೆಳಗಲಿದೆ ಹಿಂದುತ್ವದಾ ಪ್ರಭೆಯು ವಿಶ್ವವನೆ ರಾಷ್ಟ್ರಜೀವನ ಮರಳಿ ಶಕ್ತವಾಗಿ         || 2 || ದೇಹವಿದು ನಶ್ವರವು ನಾಡೆಮದು ಶಾಶ್ವತವು ನಶ್ವರವು ಶಾಶ್ವತಕೆ ಮುಡಿಪು ಎನ್ನಿ ಪರಮವೈಭವ […]

Read More

ಭಯವಿರದ ಭಾರತವ ಕಟ್ಟಲೋಸುಗ ಬನ್ನಿ

ಭಯವಿರದ ಭಾರತವ ಕಟ್ಟಲೋಸುಗ ಬನ್ನಿ ಜಯಧ್ವನಿಯ ಜಗದಗಲ ಮೊಳಗಿಸುವ ಬನ್ನಿ    || ಪ || ಹಿಂದು ಹೆದ್ದೆರೆಯಲ್ಲಿ ಕೊಚ್ಚಿ ಹೋಗಲಿ ಭೇದ ಬಂಧುತ್ವ ಹಿರಿದಾಗಿ ರಾಷ್ಟ್ರಬೋಧ ಸಿಂಧುವಿನ ಸೆರಗಿನಲಿ ಉಗ್ರತೆಯು ಬೆಳೆಯುತಿದೆ ಮುಂದಾಗಿ ಎದುರಿಸುವ ಕ್ಷಾತ್ರಯೋಧ          || 1 || ದೈನ್ಯವೇತಕೆ ನಿನಗೆ ಮಾನ್ಯ ಭಾರತಿ ಪುತ್ರ ಕಪಿಸೈನ್ಯ ಸಾಗರವ ದಾಟಿಲ್ಲವೇನು ? ವೈನತೇಯನು ತಂದ ಪೀಯೂಷವಿರುವಾಗ ಸಾವೆಂಬ ವಿಷಸರ್ಪಕಂಜಲೇನು ?              || 2 || ಭಾರತದ ಬಹುಳತೆಗೆ ಹಿಂದುತ್ವವಡಿಪಾಯ ಮರೆಯದಿರು ಮುರಿಯದಿರು ಸೇತುಬಂಧ ಕರೆಯದೇ ಬಂದವರು ಉಳಿದುಕೊಂಡಿಹರಿಲ್ಲಿ ಉರುಳಾಗದಿರಲಿ ದಯೆ […]

Read More

ನಾಡಿಗೆ ಸೇವೆಯ ಸಲ್ಲಿಸಲು

ನಾಡಿಗೆ ಸೇವೆಯ ಸಲ್ಲಿಸಲು ಬಾಡಿದ ಮನಗಳ ಅರಳಿಸಲು ವೀರ ಪ್ರತಿಜ್ಞೆಯ ತೊಟ್ಟಿಹೆವು…. ಹೊಸನಾಡೊಂದನು ಕಟ್ಟುವೆವು            || ಪ || ರೂಢಿಯ ಮೌಢ್ಯದ ಗೋಡೆಯ ಕೆಡವಿ ಗುಡಿಸಲುವಾಸಿಗಳಾ ಮೈದಡವಿ ಒಲವಿನ ಧಾರೆಯ ಹರಿಸುವೆವು………. ಅರಿವಿನ ದೀಪವನುರಿಸುವೆವು              || 1 || ನಮ್ಮ ಪರಂಪರೆಯನು ಸ್ಮರಿಸುತಲಿ ಘನ ಆದರ್ಶವ ಅನುಸರಿಸುತಲಿ ಮುಚ್ಚಿದ ಕಂಗಳ ತೆರೆಸುವೆವು………. ಕೆಚ್ಚೆದೆ ಸಾಹಸ ಮೆರೆಸುವೆವು              || 2 || ವಿಘ್ನ ವಿರೋಧದ ಭೀತಿಯ ತ್ಯಜಿಸಿ ಕೀರ್ತಿ ಪ್ರಶಂಸೆಯ ಮೋಹವ ದಹಿಸಿ […]

Read More

ನಾವು ನೀವು ಒಂದಾಗಿ ನಡೆಯುವಾ

ನಾವು ನೀವು ಒಂದಾಗಿ ನಡೆಯುವಾ ಮಾವಿದ್ವಿಷಾವಹೈ ಐಕ್ಯಮಂತ್ರದಾ ಸೂತ್ರ ಹಿಡಿಯುವಾ ಸಹವೀರ್ಯಂ ಕರವಾವಹೈ                        || ಪ || ಬಲಾ ಚ ಪೃಥಿವೀ ಎನ್ನುವರು ಜನ ಆಡಕೊಂದು ಹುಲಿಗಂಜುವರು ದೇವನು ದುರ್ಬಲ ಘಾತಕನೆಂದುsss ಹಿರಿಯರು ಅನುಭವ ನುಡಿದಿಹರು ನಿಜವನು ತಿಳಿದು ಅಜೇಯರಾಗುವ ಮಾವಿದ್ವಿಷಾವಹೈ ಐಕ್ಯಮಂತ್ರದಾ ….                          […]

Read More

ನಿನ್ನನೆಂತು ಅರ್ಚಿಸಲಿ ನಿನ್ನನೇನು ಬೇಡಲಿ

ನಿನ್ನನೆಂತು ಅರ್ಚಿಸಲಿ ನಿನ್ನನೇನು ಬೇಡಲಿ ನಿನ್ನ ಸೊಬಗ ನಾನೆಂತು ಬಣ್ಣಿಪೆ ತಾಯೆ ?      || ಪ || ತುಂಬಿ ಹರಿವ ನದಿಗಳು ಒಡಲೊಳಗಿನ ಗಣಿಗಳು ಸಾಲು ಸಾಲು ಬೆಟ್ಟಗಳಲಿ ತೇಗ ಗಂಧ ತರುಗಳು ಮುಕುಟದಲಿ ಹಿಮರಾಶಿ ಪದತಲದಲಿ ಜಲರಾಶಿ ನಿನ್ನೊಡಲ ಸಂಪದವ ನನ್ನಾಣೆ ಅರಿಯೆ ತಾಯೆ      || 1 || ನಿನ್ನ ಸುತರು ಕೋಟಿ ಕೋಟಿ ನಿನ್ನ ಗರ್ಭಕಿಲ್ಲ ಸಾಟಿ ನಿನ್ನ ಮಡಿಲ ಧರ್ಮವ ಒಯ್ದರವರು ಕಡಲ ದಾಟಿ ದುಃಖ ದೈನ್ಯ ಕಷ್ಟಗಳ […]

Read More

ಪುನರಪಿ ಅವತರಿಸಿದೆ ಭಾರತದಿ

ಪುನರಪಿ ಅವತರಿಸಿದೆ ಭಾರತದಿ ಕಾಲಧರ್ಮ ಸ್ವದೇಶೀ | ರಾಷ್ಟ್ರದ ವೈಭವ ಸಾಧನೆಗುತ್ತರ ಕಾಮ್ಯ ಕರ್ಮ ಸ್ವದೇಶೀ                || ಪ || ಸ್ವತ್ವವ ಮರೆತು ಸ್ವರಾಜ್ಯದ ಪಡೆದೆವು ಪರತತ್ವದ ಗುಂಗಿನಲಿ | ಸಾಲದ ಶೂಲಕೆ ನೋಯದೆ ನಲಿದೆವು ಪರದೇಶದ ಹಂಗಿನಲಿ | ಕಾಲವು ಬದಲಾಗಿದೆ ಸಿಡಿದೆದ್ದಿದೆ ಸ್ವಾಭಿಮಾನ ಸ್ವದೇಶೀ                  || 1 || ಆರ್ಥಿಕ ದಾಹದ ಜಾಲಕೆ […]

Read More

ಬನ್ನಿ ಹಿಂದು ತರುಣರೇ ಒಂದುಗೂಡಿ ಹಾಡುವಾ

ಬನ್ನಿ ಹಿಂದು ತರುಣರೇ ಒಂದುಗೂಡಿ ಹಾಡುವಾ ರಾಷ್ಟ್ರಕಾಗಿ ಬಾಳಿ ಬದುಕಿ ನವಚರಿತ್ರೆ ರಚಿಸುವಾ || ಪ || ಆಂಗ್ಲ ಮೊಗಲ ನಕ್ಸಲ ತುಂಬಿ ಶತ್ರು ಸಂಕುಲ ಶತ್ರು ಸೈನ್ಯ ನುಗ್ಗಿ ಬರಲು ಕೆಡಹುದೊಂದೆ ಹಂಬಲ ಸ್ವಾಭಿಮಾನ ದೇಶಪ್ರೇಮ ರುಧಿರಧಾರೆ ಹರಿಯಲಿ ಕಷ್ಟನಷ್ಟವೇನೆ ಬರಲಿ ಹೃದಯಕಮಲ ಅರಳಲಿ || 1 || ಆಜಾದ ಧೀಂಗ್ರ ಭಗತರು ದೇಶಕಾಗಿ ಮಡಿದರು ವಿವೇಕಾದಿ ಸಂತರು ಧರ್ಮಕಾಗಿ ದುಡಿದರು ಕೇಶವ ಮಧು ಯಾದವರು ತರುಣ ತನುವ ತೇದರು ಸಿಡಿಲ ಕಿಡಿಗಳಾಗಿ ನಾವು ರಾಷ್ಟ್ರ […]

Read More