ಯುಗದ ಆಹ್ವಾನವಿದು ಕೇಳಬನ್ನಿ
ತಾಯ್ನೆಲದ ಕರೆಗೆ ಓಗೊಡುತ ಬನ್ನಿ || ಪ ||
ಸಾವಿರದ ಇತಿಹಾಸ ನಿತ್ಯ ಪ್ರೇರಕವಾಗಿ
ಎಮ್ಮ ಹಿರಿಯರ ಬಾಳು ದೀಪವಾಗಿ
ನವಿರುಗೊಳ್ಳಲಿ ತ್ರಾಣ ಕ್ಷಾತ್ರ ಶಕ್ತಿಯ ಸ್ಫುರಣ
ನಾಡರಕ್ಷಾಕವಚ ಆಗಬನ್ನಿ || 1 ||
ಆತ್ಮವಿಸ್ಮೃತಿಯೊಂದು ಸ್ವಾರ್ಥ ಚಿಂತನೆಯೊಂದು
ರಾಹು ಕೇತು ಗ್ರಹಣ ಮುಕ್ತವಾಗಿ
ಬೆಳಗಲಿದೆ ಹಿಂದುತ್ವದಾ ಪ್ರಭೆಯು ವಿಶ್ವವನೆ
ರಾಷ್ಟ್ರಜೀವನ ಮರಳಿ ಶಕ್ತವಾಗಿ || 2 ||
ದೇಹವಿದು ನಶ್ವರವು ನಾಡೆಮದು ಶಾಶ್ವತವು
ನಶ್ವರವು ಶಾಶ್ವತಕೆ ಮುಡಿಪು ಎನ್ನಿ
ಪರಮವೈಭವ ಪದವ ಜನುಮದಾತೆಗೆ ತರಲು
ಬೆವರು ನೆತ್ತರ ಬೆಲೆಯ ತೆರುವ ಬನ್ನಿ || 3 ||