ಯುಗದ ಆಹ್ವಾನವಿದು ಕೇಳಬನ್ನಿ

ಯುಗದ ಆಹ್ವಾನವಿದು ಕೇಳಬನ್ನಿ
ತಾಯ್ನೆಲದ ಕರೆಗೆ ಓಗೊಡುತ ಬನ್ನಿ       || ಪ ||

ಹೂಣ ಗ್ರೀಕರ ಗೆಲಿದು ಶಕಕುಶಾನರನುಲಿದು
ಆಂಗ್ಲ ಮೋಘಲರ ಹಣಿದ ಹಿರಿಮೆಯಿರಲು
ತಡೆಯುವರಾರಿನ್ನು ಬಿಡದೆ ಮುಂದಡಿಯಿಡುತ
ವಿಶ್ವ ವಿಜಯಧ್ವಜವ ಮೆರೆಸಬನ್ನಿ       || 1 ||

ಸಾವಿರದ ಇತಿಹಾಸ ನಿತ್ಯ ಪ್ರೇರಕವಾಗಿ
ಎಮ್ಮ ಹಿರಿಯರ ಬಾಳು ದೀಪವಾಗಿ
ನವಿರುಗೊಳ್ಳಲಿ ತ್ರಾಣ ಕ್ಷಾತ್ರ ಶಕ್ತಿಯ ಸ್ಫುರಣ
ನಾಡರಕ್ಷಾಕವಚ ಆಗಬನ್ನಿ              || 2 ||

ಆತ್ಮವಿಸ್ಮೃತಿಯೊಂದು ಸ್ವಾರ್ಥ ಚಿಂತನೆಯೊಂದು
ರಾಹು ಕೇತು ಗ್ರಹಣ ಮುಕ್ತವಾಗಿ
ಬೆಳಗಲಿದೆ ಹಿಂದುತ್ವದಾ ಪ್ರಭೆಯು ವಿಶ್ವವನೆ
ರಾಷ್ಟ್ರಜೀವನ ಮರಳಿ ಶಕ್ತವಾಗಿ         || 3 ||

ದೇಹವಿದು ನಶ್ವರವು ನಾಡೆಮದು ಶಾಶ್ವತವು
ನಶ್ವರವು ಶಾಶ್ವತಕೆ ಮುಡಿಪು ಎನ್ನಿ
ಪರಮವೈಭವ ಪದವ ಜನುಮದಾತೆಗೆ ತರಲು
ಬೆವರು ನೆತ್ತರ ಬೆಲೆಯ ತೆರುವ ಬನ್ನಿ     || 4 ||

2 thoughts on “ಯುಗದ ಆಹ್ವಾನವಿದು ಕೇಳಬನ್ನಿ

  1. ಹೂಣ ಗ್ರೀಕರ ಗೆಲಿದು ಶಕ ಕುಶಾನರನುಲಿದು
    ಆಂಗ್ಲ ಮೊಘಲರ ಹಣಿದ ಹಿರಿಮೆಯಿರಲು
    ತಡೆಯುವರಾರಿನ್ನು ಬಿಡದೆ ಮುಂದಡಿಯಿಡುತ
    ವಿಶ್ವ ವಿಜಯಧ್ವಜವ ಮೆರೆಸಬನ್ನಿ..

    ಇದು ಒಂದನೇ ಚರಣ….

  2. ಹೂಣ ಗ್ರೀಕರ ಗೆಲಿದು ಶಕ ಕುಷಾನರನುಲಿದು
    ಆಂಗ್ಲ ಮೊಘಲರ ಹಣಿದ ಹಿರಿಮೆಯಿರಲು
    ತಡೆಯುವರಾರಿನ್ನು ಬಿಡದೆ ಮುಂದಡಿಯಿಡುತ
    ವಿಶ್ವ ವಿಜಯಧ್ವಜವ ಮೆರೆಸಬನ್ನಿ

    ಒಂದನೆಯ ಚರಣ ಇದಾಗಿದೆ.

Leave a Reply to Anand Mulimani Navalgund Cancel reply

Your email address will not be published. Required fields are marked *