ಸಾಟಿ ಇಲ್ಲದ ಸಂತ ನಿನಗೆ ಕೋಟಿ ಕೋಟಿ ವಂದನೆ ಹುಟ್ಟಿ ಬಾರೊ ಮತ್ತೆ ನೀನು ಸಕಲ ವಿಶ್ವವಂದ್ಯನೆ ನೋವ ಸಹಿಸಲಾರೆವು… ನಿನ್ನ ಮರೆಯಲಾರೆವು || ಅ.ಪ || ಪ್ರಾಂತಜಾತಿ ಪಂಥ ಪಕ್ಷ ಸೀಮೆಗಳನು ದಾಟಿದೆ ಭಾರತೀಯರೆದೆಯ ಹೃದಯ ತಂತಿಗಳನು ಮೀಟಿದೆ ಸಂಕುಚಿತತೆ ಮೀರಿ ನಿಂತ ತ್ಯಾಗಭರಿತ ಜೀವನ ಕಾರ್ಯನಿರತ ಸ್ಫೂರ್ತಿಭರಿತ ನಿನ್ನ ಬದುಕು ಪಾವನ || 1 || ರಾಜಕೀಯ ನೆಪಕೆ […]
ಯುಗದ ಆಹ್ವಾನವಿದು ಕೇಳಬನ್ನಿ ತಾಯ್ನೆಲದ ಕರೆಗೆ ಓಗೊಡುತ ಬನ್ನಿ || ಪ || ಹೂಣ ಗ್ರೀಕರ ಗೆಲಿದು ಶಕಕುಶಾನರನುಲಿದು ಆಂಗ್ಲ ಮೋಘಲರ ಹಣಿದ ಹಿರಿಮೆಯಿರಲು ತಡೆಯುವರಾರಿನ್ನು ಬಿಡದೆ ಮುಂದಡಿಯಿಡುತ ವಿಶ್ವ ವಿಜಯಧ್ವಜವ ಮೆರೆಸಬನ್ನಿ || 1 || ಸಾವಿರದ ಇತಿಹಾಸ ನಿತ್ಯ ಪ್ರೇರಕವಾಗಿ ಎಮ್ಮ ಹಿರಿಯರ ಬಾಳು ದೀಪವಾಗಿ ನವಿರುಗೊಳ್ಳಲಿ ತ್ರಾಣ ಕ್ಷಾತ್ರ ಶಕ್ತಿಯ ಸ್ಫುರಣ ನಾಡರಕ್ಷಾಕವಚ ಆಗಬನ್ನಿ || 2 || ಆತ್ಮವಿಸ್ಮೃತಿಯೊಂದು ಸ್ವಾರ್ಥ ಚಿಂತನೆಯೊಂದು ರಾಹು ಕೇತು ಗ್ರಹಣ ಮುಕ್ತವಾಗಿ ಬೆಳಗಲಿದೆ ಹಿಂದುತ್ವದಾ ಪ್ರಭೆಯು […]
ಭಯವಿರದ ಭಾರತವ ಕಟ್ಟಲೋಸುಗ ಬನ್ನಿ ಜಯಧ್ವನಿಯ ಜಗದಗಲ ಮೊಳಗಿಸುವ ಬನ್ನಿ || ಪ || ಹಿಂದು ಹೆದ್ದೆರೆಯಲ್ಲಿ ಕೊಚ್ಚಿ ಹೋಗಲಿ ಭೇದ ಬಂಧುತ್ವ ಹಿರಿದಾಗಿ ರಾಷ್ಟ್ರಬೋಧ ಸಿಂಧುವಿನ ಸೆರಗಿನಲಿ ಉಗ್ರತೆಯು ಬೆಳೆಯುತಿದೆ ಮುಂದಾಗಿ ಎದುರಿಸುವ ಕ್ಷಾತ್ರಯೋಧ || 1 || ದೈನ್ಯವೇತಕೆ ನಿನಗೆ ಮಾನ್ಯ ಭಾರತಿ ಪುತ್ರ ಕಪಿಸೈನ್ಯ ಸಾಗರವ ದಾಟಿಲ್ಲವೇನು ? ವೈನತೇಯನು ತಂದ ಪೀಯೂಷವಿರುವಾಗ ಸಾವೆಂಬ ವಿಷಸರ್ಪಕಂಜಲೇನು ? || 2 || ಭಾರತದ ಬಹುಳತೆಗೆ ಹಿಂದುತ್ವವಡಿಪಾಯ ಮರೆಯದಿರು ಮುರಿಯದಿರು ಸೇತುಬಂಧ ಕರೆಯದೇ ಬಂದವರು ಉಳಿದುಕೊಂಡಿಹರಿಲ್ಲಿ ಉರುಳಾಗದಿರಲಿ ದಯೆ […]
ನಾಡಿಗೆ ಸೇವೆಯ ಸಲ್ಲಿಸಲು ಬಾಡಿದ ಮನಗಳ ಅರಳಿಸಲು ವೀರ ಪ್ರತಿಜ್ಞೆಯ ತೊಟ್ಟಿಹೆವು…. ಹೊಸನಾಡೊಂದನು ಕಟ್ಟುವೆವು || ಪ || ರೂಢಿಯ ಮೌಢ್ಯದ ಗೋಡೆಯ ಕೆಡವಿ ಗುಡಿಸಲುವಾಸಿಗಳಾ ಮೈದಡವಿ ಒಲವಿನ ಧಾರೆಯ ಹರಿಸುವೆವು………. ಅರಿವಿನ ದೀಪವನುರಿಸುವೆವು || 1 || ನಮ್ಮ ಪರಂಪರೆಯನು ಸ್ಮರಿಸುತಲಿ ಘನ ಆದರ್ಶವ ಅನುಸರಿಸುತಲಿ ಮುಚ್ಚಿದ ಕಂಗಳ ತೆರೆಸುವೆವು………. ಕೆಚ್ಚೆದೆ ಸಾಹಸ ಮೆರೆಸುವೆವು || 2 || ವಿಘ್ನ ವಿರೋಧದ ಭೀತಿಯ ತ್ಯಜಿಸಿ ಕೀರ್ತಿ ಪ್ರಶಂಸೆಯ ಮೋಹವ ದಹಿಸಿ […]
ನಾವು ನೀವು ಒಂದಾಗಿ ನಡೆಯುವಾ ಮಾವಿದ್ವಿಷಾವಹೈ ಐಕ್ಯಮಂತ್ರದಾ ಸೂತ್ರ ಹಿಡಿಯುವಾ ಸಹವೀರ್ಯಂ ಕರವಾವಹೈ || ಪ || ಬಲಾ ಚ ಪೃಥಿವೀ ಎನ್ನುವರು ಜನ ಆಡಕೊಂದು ಹುಲಿಗಂಜುವರು ದೇವನು ದುರ್ಬಲ ಘಾತಕನೆಂದುsss ಹಿರಿಯರು ಅನುಭವ ನುಡಿದಿಹರು ನಿಜವನು ತಿಳಿದು ಅಜೇಯರಾಗುವ ಮಾವಿದ್ವಿಷಾವಹೈ ಐಕ್ಯಮಂತ್ರದಾ …. […]
ನಿನ್ನನೆಂತು ಅರ್ಚಿಸಲಿ ನಿನ್ನನೇನು ಬೇಡಲಿ ನಿನ್ನ ಸೊಬಗ ನಾನೆಂತು ಬಣ್ಣಿಪೆ ತಾಯೆ ? || ಪ || ತುಂಬಿ ಹರಿವ ನದಿಗಳು ಒಡಲೊಳಗಿನ ಗಣಿಗಳು ಸಾಲು ಸಾಲು ಬೆಟ್ಟಗಳಲಿ ತೇಗ ಗಂಧ ತರುಗಳು ಮುಕುಟದಲಿ ಹಿಮರಾಶಿ ಪದತಲದಲಿ ಜಲರಾಶಿ ನಿನ್ನೊಡಲ ಸಂಪದವ ನನ್ನಾಣೆ ಅರಿಯೆ ತಾಯೆ || 1 || ನಿನ್ನ ಸುತರು ಕೋಟಿ ಕೋಟಿ ನಿನ್ನ ಗರ್ಭಕಿಲ್ಲ ಸಾಟಿ ನಿನ್ನ ಮಡಿಲ ಧರ್ಮವ ಒಯ್ದರವರು ಕಡಲ ದಾಟಿ ದುಃಖ ದೈನ್ಯ ಕಷ್ಟಗಳ […]
ಪುನರಪಿ ಅವತರಿಸಿದೆ ಭಾರತದಿ ಕಾಲಧರ್ಮ ಸ್ವದೇಶೀ | ರಾಷ್ಟ್ರದ ವೈಭವ ಸಾಧನೆಗುತ್ತರ ಕಾಮ್ಯ ಕರ್ಮ ಸ್ವದೇಶೀ || ಪ || ಸ್ವತ್ವವ ಮರೆತು ಸ್ವರಾಜ್ಯದ ಪಡೆದೆವು ಪರತತ್ವದ ಗುಂಗಿನಲಿ | ಸಾಲದ ಶೂಲಕೆ ನೋಯದೆ ನಲಿದೆವು ಪರದೇಶದ ಹಂಗಿನಲಿ | ಕಾಲವು ಬದಲಾಗಿದೆ ಸಿಡಿದೆದ್ದಿದೆ ಸ್ವಾಭಿಮಾನ ಸ್ವದೇಶೀ || 1 || ಆರ್ಥಿಕ ದಾಹದ ಜಾಲಕೆ […]
ಬನ್ನಿ ಹಿಂದು ತರುಣರೇ ಒಂದುಗೂಡಿ ಹಾಡುವಾ ರಾಷ್ಟ್ರಕಾಗಿ ಬಾಳಿ ಬದುಕಿ ನವಚರಿತ್ರೆ ರಚಿಸುವಾ || ಪ || ಆಂಗ್ಲ ಮೊಗಲ ನಕ್ಸಲ ತುಂಬಿ ಶತ್ರು ಸಂಕುಲ ಶತ್ರು ಸೈನ್ಯ ನುಗ್ಗಿ ಬರಲು ಕೆಡಹುದೊಂದೆ ಹಂಬಲ ಸ್ವಾಭಿಮಾನ ದೇಶಪ್ರೇಮ ರುಧಿರಧಾರೆ ಹರಿಯಲಿ ಕಷ್ಟನಷ್ಟವೇನೆ ಬರಲಿ ಹೃದಯಕಮಲ ಅರಳಲಿ || 1 || ಆಜಾದ ಧೀಂಗ್ರ ಭಗತರು ದೇಶಕಾಗಿ ಮಡಿದರು ವಿವೇಕಾದಿ ಸಂತರು ಧರ್ಮಕಾಗಿ ದುಡಿದರು ಕೇಶವ ಮಧು ಯಾದವರು ತರುಣ ತನುವ ತೇದರು ಸಿಡಿಲ ಕಿಡಿಗಳಾಗಿ ನಾವು ರಾಷ್ಟ್ರ […]
ಉತ್ತರ ದಕ್ಷಿಣ ದೇಸಿಗರೋ ಬಡವರೊ, ಬಲು ಸಿರಿ ಸಂಪದರೋ ಅಂತ್ಯಜ ಅಗ್ರಜ ಭೇದಗಳಿಲ್ಲದೆ ಒಂದೇ ನಾವಿಂದು ಹೇಳಿರಿ ಬಂಧು ಎಲ್ಲರು ಹಿಂದು ಒಂದೇ ನಾವಿಂದು || ಪ || ಸಿಂಧೂ ಗಂಗೆ ತುಂಗೆಯದು ಗೋದಾವರಿ ಕಾವೇರಿಯದು ಹರಿಯುವ ಸಾವಿರ ನದಿಗಳದು ಒಂದೇ ನೀರೆಂದು || 1 || ಸಿಂಧೂ ಬಯಲಿನ ಗತ ಇತಿಹಾಸ ಎಲ್ಲೋರದ ಗುಡಿ ಗಿರಿ ಕೈಲಾಸ ಮಲಗಿದ ಹಂಪೆಯ ಅಂದಿನ ಹಾಸ ನೆನೆಯುವ ಎಂದೆಂದೂ || 2 || ಕಲಿಗಳ ವೀರಾವೇಶದ ಗಾಥೆ ಕವಿಗಳ […]
ಮಾತೃಭಕ್ತಿ ಮೂಡಲಿ ದೇಶ ಶಕ್ತವಾಗಲಿ || ಪ || ಹೇ ಸುಧೀರ ಮೇಲಕೇಳು ಶತ್ರುಬಲವ ಸೀಳು ಹೂಳು ಭಯವು ವೈರಿಗಾಗಲಿ ಜಯವು ಧರ್ಮಕಾಗಲಿ || 1 || ಚಿತಾಭಸ್ಮ ತವ ಪ್ರತಾಪ ಪೃಥ್ವಿ ಪಡೆದ ರಕ್ತಲೇಪ ಪುನರ್ಜನ್ಮ ತಾಳಲಿ, ಶಸ್ತ್ರನಾದವೇಳಲಿ || 2 || ವೀರರೆದ್ದು ಸುಖವನೊದ್ದು ಲೋಹ ಧರಿಸಿ ವಿಜಯವರಸಿ ವೀರ ಘೋಷಗೈಯಲಿ ಖಡ್ಗ ಹಿಡಿದು ಕೈಯಲಿ || 3 || ಭರತಭುವಿಯ ಭಾಗ್ಯರವಿಯ ಉದಯಕರಳಿ ಹೃದಯ ಹೃದಯ ಧನ್ಯತೆಯನು ಪಡೆಯಲಿ, ನಾಡಪೂಜೆ ನಡೆಯಲಿ || […]