ನಾವು ನೀವು ಒಂದಾಗಿ ನಡೆಯುವಾ

ನಾವು ನೀವು ಒಂದಾಗಿ ನಡೆಯುವಾ
ಮಾವಿದ್ವಿಷಾವಹೈ
ಐಕ್ಯಮಂತ್ರದಾ ಸೂತ್ರ ಹಿಡಿಯುವಾ
ಸಹವೀರ್ಯಂ ಕರವಾವಹೈ                        || ಪ ||

ಬಲಾ ಚ ಪೃಥಿವೀ ಎನ್ನುವರು
ಜನ ಆಡಕೊಂದು ಹುಲಿಗಂಜುವರು
ದೇವನು ದುರ್ಬಲ ಘಾತಕನೆಂದುsss
ಹಿರಿಯರು ಅನುಭವ ನುಡಿದಿಹರು
ನಿಜವನು ತಿಳಿದು ಅಜೇಯರಾಗುವ
ಮಾವಿದ್ವಿಷಾವಹೈ
ಐಕ್ಯಮಂತ್ರದಾ ….                                        || 1 ||

ಇತಿಹಾಸದ ಸೋಲಿನ ಬದುಕು
ಅದು ವಿಘಟಿತ ಶಕ್ತಿಯ ಕಹಿ ನೆನಪು
ಮುಕ್ತಿಗೆ ಶಕ್ತಿಯೆ ಕಾರಣವೆಂದುsss
ಚರಿತ್ರೆ ಕೊರೆದಿದೆ ಹೆಗ್ಗುರುತು
ಮತ್ಸ್ಯನ್ಯಾಯದಾ ಕೃತ್ಯವಳಿಸುವ
ಮಾವಿದ್ವಿಷಾವಹೈ
ಐಕ್ಯಮಂತ್ರದಾ ….                                      || 2 ||

ಆರ್ಯನೆಲದ ಯೌವನ ನಮದು
ಶತಸೂರ್ಯ ಬಲದ ತಾರುಣ್ಯವಿದು
ಮರಳಿ ಮನುಕುಲಕೆ ಮುಕ್ತಿಯ ಮಾರ್ಗವ
ತೋರುವ ಹೊಣೆ ನಮ್ಮೆದುರಿಹುದು
ಪುನರಪಿ ಆರ್ಯರ ಗೆಲುವನು ಪಡೆಯುವಾ
ಮಾವಿದ್ವಿಷಾವಹೈ
ಐಕ್ಯಮಂತ್ರದಾ …..                                    || 3 ||

Leave a Reply

Your email address will not be published. Required fields are marked *

*

code