ಉತ್ತರ ದಕ್ಷಿಣ ದೇಸಿಗರೋ

ಉತ್ತರ ದಕ್ಷಿಣ ದೇಸಿಗರೋ
ಬಡವರೊ, ಬಲು ಸಿರಿ ಸಂಪದರೋ
ಅಂತ್ಯಜ ಅಗ್ರಜ ಭೇದಗಳಿಲ್ಲದೆ ಒಂದೇ ನಾವಿಂದು
ಹೇಳಿರಿ ಬಂಧು ಎಲ್ಲರು ಹಿಂದು ಒಂದೇ ನಾವಿಂದು || ಪ ||

ಸಿಂಧೂ ಗಂಗೆ ತುಂಗೆಯದು
ಗೋದಾವರಿ ಕಾವೇರಿಯದು
ಹರಿಯುವ ಸಾವಿರ ನದಿಗಳದು
ಒಂದೇ ನೀರೆಂದು || 1 ||

ಸಿಂಧೂ ಬಯಲಿನ ಗತ ಇತಿಹಾಸ
ಎಲ್ಲೋರದ ಗುಡಿ ಗಿರಿ ಕೈಲಾಸ
ಮಲಗಿದ ಹಂಪೆಯ ಅಂದಿನ ಹಾಸ
ನೆನೆಯುವ ಎಂದೆಂದೂ || 2 ||

ಕಲಿಗಳ ವೀರಾವೇಶದ ಗಾಥೆ
ಕವಿಗಳ ಮೈನವಿರೇಳುವ ಗೀತೆ
ಸಂತರ ವಾಣಿಯು ಮರೆಯಾದೀತೆ ?
ಹಾಡುವ ಎಂದೆಂದೂ || 3 ||

ಹಿಮಗಿರಿ ತುದಿಯಲಿ ಧ್ವಜವನು ಹಾರಿಸಿ
ಕಡಲಿನ ಅಡಿಯಲು ಭೇರಿಯ ಬಾರಿಸಿ
ಎತ್ತರ ಬಾನೆತ್ತರ ಬಿತ್ತರಿಸಿ
ರಾಷ್ಟ್ರಗೀತೆಯಿಂದು || 4 ||

Leave a Reply

Your email address will not be published. Required fields are marked *