ಜೋ…..ಜೋಜೋಜೋ……. ನಿತ್ಯ ನಮಿಸಬೇಕು

ಜೋ…..ಜೋಜೋಜೋ…….

ಜೋಜೋ…….ಜೋಜೋಜೋ………  || ಪ ||

 

ಉಣ್ಣುವ ಅನ್ನಕೂ ಪಾವನ ಮಣ್ಣಿಗೂ

ನಿತ್ಯ ನಮಿಸಬೇಕು

ಮಗುವೇ ನಿತ್ಯ ನಮಿಸಬೇಕು..               || 1 ||

 

ನಂಬಿದ ದೇವರ ಬಿಂಬದ ಇದಿರು

ಹಣತೆ ಹಚ್ಚಬೇಕು

ಮಗುವೇ ಹಣತೆ ಹಚ್ಚಬೇಕು..                || 2 ||

 

ಗತ ಇತಿಹಾಸದ ಪುಟಗಳ ತಿರುವಲು

ಬೆಳೆಯಬೇಕು ಮಗುವೇ

ನೀನು ಬೆಳೆಯಬೇಕು..                           || 3 ||

 

ಸ್ವಾತಂತ್ರ್ಯಕಾಗಿ ಮಡಿದ ಕಲಿಗಳ

ಕಥೆಯ ಓದಬೇಕು

ಮಗುವೇ ಕಥೆಯ ಓದಬೇಕು..                || 4 ||

 

ರಾಷ್ಟ್ರಭಕ್ತಿಯ ಭಾವವು ನಿನ್ನಲಿ

ಮೊಳಕೆಯೊಡೆಯಬೇಕು

ಮಗುವೇ ಮೊಳಕೆಯೊಡೆಯಬೇಕು..      || 5 ||

 

ಉಗ್ರಗಾಮಿಗಳ ಹುಟ್ಟಡಗಿಸಲು

ಹಾಲು ಕುಡಿಯಬೇಕು

ಮಗುವೇ ಶಕ್ತಿ ಬರಲೇಬೇಕು..                 || 6 ||

 

ನೀನು ಜಟ್ಟಿಯಾಗಬೇಕು..

ಜೋ…ಜೋಜೋಜೋ…

ಕಂದಾ…ಜೋ,..ಜೋಜೋಜೋ….        || 7 ||

Leave a Reply

Your email address will not be published. Required fields are marked *