ಪ್ರೇರಣಾ ಪಥವನು ತುಳಿಯೋಣ

ಪ್ರೇರಣಾ ಪಥವನು ತುಳಿಯೋಣ

ಧ್ಯೇಯದಾ ರಥವನು ಎಳೆಯೋಣ |

ಶತಶತಮಾನಕೂ ಜಗವನೆ ಬೆಳಗಲು

ಮನೆಮನ ಜಾಗೃತಗೊಳಿಸೋಣ                      || ಪ ||

 

ಕೀಳರಿಮೆಗಳಾ ಬುಡವನೆ ಕಡಿದು

ವೈಭವ ಚರಿತೆಯ ಪದಪದವಿಡಿದು

ವಿದ್ರೋಹಿಗಳ ಸೊಕ್ಕನು ಮುರಿದು

ವಿಜಯದ ಕಾವ್ಯಕೆ ಮುನ್ನುಡಿ ಬರೆದು              || 1 ||

 

ಆಲಸ್ಯವದೇಕೆ ದೇವರ ಕಾರ್ಯಕೆ

ಸಾಧಿಸುವಾ ಛಲ ಇಹುದೀ ಕಾಯಕೆ

ಗೆಲುವಿನ ಸವಿಯೊಂದೆ ಕಾದಿದೆ ಮುಂದಕೆ

ವಿಸ್ಮೃತಿಯಾ ಕಾಲ ಸರಿಯಲಿ ಹಿಂದಕೆ             || 2 ||

 

ಹಿರಿಯರ ಆದರ್ಶ ಹೃದಯದೊಳಿರಿಸುತ

ಧರ್ಮದ ಹಾದಿಯ ಅನುದಿನ ತುಳಿಯುತ

ವಿರಮಿಸವೆಂದೆಂದೂ ದುಡಿವೆವು ಅವಿರತ

ರಾಷ್ಟ್ರದ ಏಳ್ಗೆಯ ಸಂಕಲ್ಪವ ತೊಡುತ          || 3 ||

Leave a Reply

Your email address will not be published. Required fields are marked *