ಕೇಶವನ ಬಾಳೆಮಗೆ ಪ್ರೇರಣೆಯ ದೀಪ

ಕೇಶವನ ಬಾಳೆಮಗೆ ಪ್ರೇರಣೆಯ ದೀಪ
ಮಾಧವನ ಸಾಧನೆಯು ಆದರ್ಶ ರೂಪ        || ಪ ||

ಈಶ್ವರೀಯವು ನಮ್ಮ ದೇಶಧರ್ಮದ ಕಾರ್ಯ
ಜನಮನವ ಜೋಡಿಸುವ ಸವಿನುಡಿಯು ವಿನಯ
ವ್ಯಕ್ತಿತ್ವ ಕರ್ತೃತ್ವ ಅರ್ಪಿತವು ಸರ್ವಸ್ವ
‘ಯಾಚಿ ದೇಹೀ ಯಾಚಿ ಡೋಳ’ ಸಂಕಲ್ಪ     || 1 ||

ಶುದ್ಧ ಜಂಗಮ ಸ್ನೇಹಿ ಲೌಕಿಕದಿ ನಿರ್ಮೋಹಿ
ಆಧ್ಯಾತ್ಮದಲಿ ರಕ್ತಿ ಅತುಲ ಧೀ ಶಕ್ತಿ
ಹೆಜ್ಜೆ ಗುರುತುಗಳೆಲ್ಲ ಯುಗದೃಷ್ಟಿ ನವಸೃಷ್ಟಿ
ಸದ್ದಿರದೆ ಸರಿವ ಬಗೆ ‘ಮೈ ನಹೀಂ ತೂ ಹೀ’   || 2 ||

ಸ್ವೀಕೃತವು ಮಾರ್ಗವಿದು ನಡೆ ನಿಮ್ಮ ಅನುಚರಣ
ಸೋಕಲೆದೆಯನು ನಿಮ್ಮ ತೇಜದಾ ಕಿರಣ
ತೀರಿಸಲು ತಾಯ ಋಣ ಶ್ರಮಿಸುವೆವು ಪ್ರಾಣಪಣ
ವೀರವ್ರತ ಧರಿಸಿಹೆವು ತೊರೆದು ಸುಖತಲ್ಪ      || 3 ||

Leave a Reply

Your email address will not be published. Required fields are marked *

*

code