ನಡೆದು ತೋರುವೆವು ಲೋಕಕೆ ನೀತಿಯ ಅಂಜುವೆದೆಯು ನಮ್ಮದಲ್ಲ ಹಿಂದುತ್ವದ ಅಭಿಮಾನದ ಬದುಕಲಿ ಕೀಳರಿಮೆಗೆ ಎಡೆಯಿಲ್ಲ || ಉತ್ತಿಷ್ಠ ಭಾರತ || || ಪ || ವಿಶ್ವದ ಮನುಜರು ಅಗ್ರಜ ಅನುಜರು ತಾಯಿ ಭೂಮಿ ನಮಗೆಲ್ಲಾ ಪ್ರಕೃತಿಗೆ ಉಪಕೃತಿ ನಮ್ಮಯ ಸಂಸ್ಕೃತಿ ಸ್ವಾರ್ಥ ಸುಖದ ಸೋಂಕಿಲ್ಲ ಬಂಧುತ್ವದ ಸಾವಿರದಿತಿಹಾಸಕೆ ಜಗದಲಿ ಸರಿಸಮರಿಲ್ಲ || 1 || ಪುಣ್ಯದ ವರ್ಧನೆ ಪಾಪ ನಿವಾರಣೆ ಪುರುಷಾರ್ಥದ ಸಾಧನೆಗೆ ಕರ್ಮದ ಫಲವಿದೆ ಧರ್ಮದ ಬಲವಿದೆ ಸಾರ್ಥಕತೆಯ ನೆಮ್ಮದಿಗೆ ಆಧ್ಯಾತ್ಮದ ಅವಿರತ ಅನುಭೂತಿಗೆ ಹೋಲಿಕೆಗಳ […]
ಧಾವಿಸು ಮುಂದೆ ಧಾವಿಸು ಧೀರಪಥದಿ ಅಂತಿಮ ಜಯ ನಿನ್ನದೆಂದೆ ಭಾವಿಸು || ಪ || ಸೋಲರಿಯದ ಶಕ್ತಿ ನಿನದು ಸಾವರಿಯದ ಸಂತತಿ ಕಾಲನ ಜತೆ ಕಾಲನಿಡುವ ನಿನದಜೇಯ ಸಂಸ್ಕೃತಿ ನಿನಗೆ ಹಾಲನೆರೆದ ತಾಯಿ ಸನಾತನೆ ಭಾರತಿ ಅವಳ ಗರಿಮೆ ಗಳಿಕೆಗಾಗಿ ಜೀವಿಸು || 1 || ಅಂಜುವೆದೆಯ ಕದವ ತೆರೆದು ಧ್ಯೇಯಜಲವ ಚಿಮುಕಿಸು ನಂಜನುಂಗಿ ಅಮರನಾಗು ಧೈರ್ಯಧಾರೆ ಧುಮುಕಿಸು ಮಂಜು ಹರಿದು ಅರಿಯ ಎದುರು ವಿಜಯಖಡ್ಗ ಝಳಪಿಸು ಹೋರಿಗುರಿಯ ಸೇರು ಬದುಕನರ್ಪಿಸು || 2 || ಹೇಡಿಗೆಷ್ಟು […]
ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ ಮುಗಿಲ ಏಣಿ ಏರಿ ನಿಂದು ವಿಜಯಭೇರಿ ಬಾರಿಸಿ || ಪ || ಸಿಂಧು ಕಣಿವೆಯೊಡಲಿನಿಂದ ವೀರಗಾನ ಮೊಳಗಲಿ ಧ್ಯೇಯರವಿಯ ಕಿರಣ ತರುಣರೆದೆಯ ಗುಡಿಯ ಬೆಳಗಲಿ ಎದ್ದು ನಿಲ್ಲು ಭಾರತ… ದಿವ್ಯಪ್ರಭೆಯ ಬೀರುತ || 1 || ಮನವ ಹಸಿರುಗೊಳಿಸುತಿಹಳು ಭಾವಗಂಗೆ ಅನುದಿನ ಇಳೆಯ ಕೊಳೆಯ ತೊಳೆಯುತಿಹಳು ತಾಯಿ ತುಂಗೆ ಕ್ಷಣಕ್ಷಣ ನೆಲವಿದೆಮ್ಮ ಪಾವನ… ಎನಿತು ಧನ್ಯ ಜೀವನ || 2 || ನಾಡಗುಡಿಯ ಮೂರು ಕಡೆಯು ಪೊರೆವ […]
ಧ್ಯೇಯ ಜನಿಸಿತು ದೇಹ ಧರಿಸಿ ಸಂಪರ್ಕದಮೃತವನೆಮಗೆ ಕುಡಿಸಿ, ನಿತ್ಯಶಕ್ತಿಯ ಮಂತ್ರ ನೀಡಲು ಧ್ಯೇಯ ಜನಿಸಿತು ದೇಹ ಧರಿಸಿ || ಪ || ಶೂನ್ಯ ಪಥದೊಳು ಸಾಗುತಿರಲು ನಾಡಿನೆಲ್ಲೆಡೆ ತರುಣ ಜನತೆ ಶೂನ್ಯದಲೆ ಲಯವಾಗುತಿರಲು ರಾಷ್ಟ್ರಜೀವನದಖಿಲ ಚರಿತೆ ಬೆಳಕು ಹೊಮ್ಮಿತು ಪ್ರಭೆಯ ಚಿಮ್ಮಿತು, ಧರ್ಮ ಸಾರಿತು ಭರದಿ ದ್ರವಿಸಿ || 1 || ವಿಷಮ ಭಾವದೊಳೈಕ್ಯ ಸಾಧನ ಸೂತ್ರಗಳು ತುಂಡಾಗುತಿರಲು ದಿವ್ಯತರ ಚಿರ ರಾಷ್ಟ್ರಜೀವನ ಸತ್ವ ಲಯವಾಗಳಿಯುತಿರಲು ಸಂಸ್ಕೃತಿಯ ನವ ಸ್ನೇಹವುದಿಸಿತು, ಧರ್ಮ ಸಾರಿತು ಕರುಣೆಯಿರಿಸಿ || 2 […]
ಧರೆಯ ಹೃದಯ ಗೆಲ್ಲುತ ಮೆರೆಯಲಿಹುದು ಭಾರತ || ಪ || ಭರತ ಭೂಮಿ ಧರೆಯಲಿ ಗರಿಮೆ ಹಿರಿಮೆ ಗಳಿಸಲಿ ಎಂಬುದೊಂದೆ ಹಂಬಲ ಧರ್ಮವೊಂದೆ ಬೆಂಬಲ || 1 || ತ್ಯಾಗ ಶೌರ್ಯ ಸಾಹಸ ದೇಶಕೆಲ್ಲ ಅರ್ಪಿತ ಧ್ಯೇಯಗೀತೆ ಹಾಡುತಾ ಬಾಳನದಕೆ ನೀಡುತಾ || 2 || ಸ್ವಾಭಿಮಾನವುಳಿಯಲು ಶ್ರೇಷ್ಠ ಜ್ಞಾನ ಬೆಳಗಲು ನಾಡ ಕೀರ್ತಿ ಬೆಳೆಸಲು ಗಳಿಸಿ ಶಕ್ತಿ ಭುಜದೊಳು || 3 || ಕಷ್ಟಗಳನು ಸಹಿಸುತಾ ದುಷ್ಟಬಲವ ದಹಿಸುತಾ ಹಿಂದುರಾಷ್ಟ್ರ ಬೆಳಗಲು ಸಂಘಶಕ್ತಿ ಕಟ್ಟಲು || […]
ಧರೆಯ ಹೃದಯ ಗೆದ್ದು ಎದ್ದು ನಿಲ್ಲಬಲ್ಲ ಭಾರತ ತಾಯೇ ನಿನ್ನ ಪೂಜೆ ನಾನು ಮಾಡುವೆನು ಅವಿರತ || ಪ || ನೋವನೆಲ್ಲ ನುಂಗಿ ನೀನು ನಮ್ಮನೆಲ್ಲ ಸಲಹಿದೆ ನಿನ್ನ ನಾವು ಮರೆತ ನೋವು ಎದೆಯನೆಲ್ಲ ತುಂಬಿದೆ ಅಂದುಗೈದ ಪಾಪ ತೊಳೆದು ಮತ್ತೆ ಶುದ್ಧರಾಗಲು ಬಿಡದೆ ನಿನ್ನ ಸೇವಿಸುವ ಸತ್ವಶೀಲ ಸುತರೊಲು || 1 || ನಿನ್ನ ಅಂಗ ಅಂಗವೆಲ್ಲ ಭಂಗವಾಗಿ ಹೋದ ಚಿತ್ರ ಕಾಣುತಿಹುದು […]
ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು ನಮ್ಮೀ ತಾಯ್ನೆಲವು ದೇವೀ ನಿನ್ನಯ ಸೊಬಗಿನ ಮಹಿಮೆಯ ಬಣ್ಣಿಸಲಸದಳವು || ಪ || ಧವಳ ಹಿಮಾಲಯ ಮುಕುಟದ ಮೆರುಗು ಕಾಲ್ತೊಳೆಯುತಲಿದೆ ಜಲಧಿಯ ಬುರುಗು ಗಂಗಾ ಬಯಲಿದು ಹಸಿರಿನ ಸೆರಗು ಕಣಕಣ ಮಂಗಲವು ನಮ್ಮೀ ತಾಯ್ನೆಲವು || 1 || ಕಾಶಮೀರದಲಿ ಸುರಿವುದು ತುಹಿನ ರಾಜಸ್ಥಾನದಿ ಸುಡುವುದು ಪುಲಿನ ಮಲಯಾಚಲದಲಿ ಗಂಧದ ಪವನ ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು || […]
ಧಗಧಗಿಸಿದೆ ಹೈಮಾದ್ರಿಯ ಒಡಲು ಭೋರ್ಗರೆದಿದೆ ಯುವಶಕ್ತಿಯ ಕಡಲು ಜಗದ ಸವಾಲಿಗೆ ಉತ್ತರ ಕೊಡಲು ನವನಿರ್ಮಾಣದ ದೀಕ್ಷೆಯ ತೊಡಲು ಜೈಜೈ ಮಾತಾ ಭಾರತಮಾತಾ… ಜೈಜೈ ಮಾತಾ ಭಾರತಮಾತಾ… || ಪ || ಶತಶತಮಾನದ ಸಾಹಸ ಚರಿತೆ ಸಾಧನೆಗದುವೇ ಸ್ಪೂರ್ತಿಯ ಒರತೆ ಮರಳಿಗಳಿಸಲು ಕಳೆದಿಹ ಘನತೆ ಟೊಂಕವ ಕಟ್ಟಿದೆ ಜಾಗೃತ ಜನತೆ || 1 || ಮೈಮರೆವಿನ ಕಾಲವು ಕಳೆದಿಹುದು ಆಣ್ವಸ್ತ್ರದ ಹಿರಿತನ ಲಭಿಸಿಹುದು ತ್ಯಜಿಸಿರಿ ಅಂಜಿಕೆ ಭ್ರಮೆ ಕೀಳರಿಮೆ ಸಾರುವ ವಿಶ್ವಕೆ ನಾಡಿನ ಗರಿಮೆ || 2 || […]
ದೇಶ ದೇಶ ದೇಶ ದೇಶ ದೇಶ ನನ್ನದು ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು || ಪ || ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು ಎಲ್ಲ ನನ್ನದು, ಎಲ್ಲ ನನ್ನದು || 1 || ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ ಬೆಳೆದು ನಿಂತ […]
ದೇವಿ ಭಾರತಿಗೆ ಅನುದಿನ ನಮಿಸಿ ಧರ್ಮ ಜಾಗೃತಿಯ ಜ್ಯೋತಿಯ ಉರಿಸಿ ದೇಶದ ಉದ್ದಗಲದಿ ಸಂಚರಿಸಿ ಮನ ಮನದಲಿ ನವಚೇತನ ಹರಿಸಿ ’ಹಿಂದು’ ಧಾವಿಸುವ ಮುನ್ನಡೆಗೆ || ಪ || ಯುವ ಜನತೆಗೆ ಸನ್ನಡತೆಯ ಕಲಿಸಿ ಉನ್ನತ ಧ್ಯೇಯದರ್ಶವ ಬೆಳೆಸಿ ಪ್ರಗತಿಯ ಕಡೆ ನಡೆಯಲು ಸಹಕರಿಸಿ ’ಹಿಂದು’ ಧಾವಿಸುವ ಮುನ್ನಡೆಗೆ || 1 || ಮತಭೇದಗಳನು ದೂರಕೆ ಸರಿಸಿ ಸರ್ವ ಸಮನ್ವಯ ಭಾವವ ಮೆರೆಸಿ ದೃಢ ಸಂಕಲ್ಪದಿ ಪ್ರಕೃತಿಯ ಉಳಿಸಿ ’ಹಿಂದು’ ಧಾವಿಸುವ ಮುನ್ನಡೆಗೆ || 2 || […]