ಭಾರತದ ಅಸ್ಮಿತೆಗೆ ಎರಗಿಹ ಸವಾಲುಗಳ ಸ್ವೀಕರಿಸ ಬನ್ನಿರೋ ತರುಣ ಜನರೆ ಹೆಮ್ಮೆಯಿಂದೆದೆಯೆತ್ತಿ ನಮ್ಮದೀ ನೆಲವೆಂದು ಜಗಕೆ ಸಾರುವ ಬನ್ನಿ ಹಿಂದು ಜನರೆ || ಪ || ಮೇದಿನಿಯು ಮುಳುಗಿರಲು ಗಾಢಾಂದಕಾರದಲಿ ಜ್ಞಾನಜ್ಯೋತಿಯ ಬೆಳೆಗಿದಂಥ ನೆಲವು ಪರಕೀಯ ತತ್ವಗಳ ಅಂಧಾನುಕರಣೆಯಲಿ ಮೈಮರೆತು ಮಲಗಿದರೆ ಏನು ಫಲವು? || 1 || ಜಾತಿಮತಭೇದಗಳ ಬೇಲಿಗಳ ಕಿತ್ತೆಸೆದು ಏಕಪುರುಷನ ತೆರದಿ ಎದ್ದು ನಿಂದು ಭಿನ್ನತೆಯ ಬದಿಗಿರಿಸಿ ತನ್ನತವನು ಮೆರೆಸಿ ಹೊನ್ನಿನಂತಹ ನಾಡ ಕಟ್ಟಿರಿಂದು || 2 || ಗುಪ್ತಗಾಮಿನಿಯಂತೆ ನಾಡ ನಾಡಿಗಳಲ್ಲಿ […]
ಭವ್ಯರಾಷ್ಟ್ರದ ಧನ್ಯಜನನಿಯೆ ನಿನಗೆ ನೂರು ನಮನ ಮಾತೃಸಂಸ್ಕೃತಿಯ ಮೂರ್ತರೂಪಿಣೆಯೆ ನಿನಗೆ ಯಾರು ಸಮಾನ || ಪ || ನೆಲವಾದವಳೆ ಜಲವಾದವಳೆ ಜ್ವಾಲಾ ರೂಪದಿ ಬಂದವಳ ಉಸಿರಾದವಳೆ ಹಸಿರಾದವಳೆ ಪಂಚತತ್ವದಲು ನಿಂದವಳೆ ಹಿಂದು ಪರಂಪರೆ ದರುಶನ ಮಾಡಿದ ಆದಿಶಕ್ತಿ ರೂಪಿಣಿಯೆ ಮಾನವ್ಯಕೆ ಹಾಲುಣಿಸಿದ ಮಾತೆಯೆ ಆರ್ಯಕುಲದ ಮಾನಿನಿಯೆ || 1 || ಸಾವಿರ ವರ್ಷದ ರಣಸಂಘರ್ಷದ ಸಂಸಾರದಿ ವಿಷವುಂಡವಳೆ ಸಂಕಟಬರಲಿ ಸಂತಸವಿರಲಿ ಏಕೋಭಾವದಿ ಕಂಡವಳೆ ಸದ್ಗುಣ ಸೆಲೆ ಸಂಸ್ಕಾರದ ನೆಲೆಯಲಿ ಮನೆಕಟ್ಟಿದ ಮಹಿಮಾನ್ವಿತೆಯೆ ಸಂಸ್ಕೃತಿಯುಳುಹಿ ಸಮಾಜವ ಬೆಳಗಿದ ಹಿಂದು […]
ಭರತ ದೇಶದಿ ಮರಳಿ ನಡೆಯಲಿ ಶೌರ್ಯ ಸಾಹಸದರ್ಚನೆ ಹೆಮ್ಮೆ ಸಾರುತ ಚಿಮ್ಮಿ ಹೊಮ್ಮಲಿ ಸಿಂಹ ವಿಕ್ರಮ ಘರ್ಜನೆ || ಪ || ಪರಮ ಪುರುಷನ ರಾಮಚಂದ್ರನ ಸೂರ್ಯಕುಲ ಸಂತಾನರೆ ಶುದ್ಧರಕ್ತದ ಕ್ಷಾತ್ರತೇಜದ ಧೀರ ಪೌರುಷವಂತರೆ ಶೂರವೀರನು ಪೌರವಾರ್ಯನು ಶಕ್ತಿಬಿತ್ತಿಹ ನೆಲವಿದು ಪುರುಷಸಿಂಹನು ಪೃಥ್ವಿರಾಜನು ನೆತ್ತರಿತ್ತಿಹ ನಾಡಿದು || 1 || ಮಾನಕಾಗಿಯೇ ಬಾಳಿ ಬದುಕಿದ ಜಾತಿವಂತರ ತೌರಿದು ಮಾತಿಗಾಗಿಯೆ ಬಲಿಯ ನೀಡಿದ ನೀತಿವಂತರ ನೆಲೆಯಿದು ತುಂಡು ಭೂಮಿಗೆ ಕೋಡಿ ನೆತ್ತರ ಹರಿಸಿದೊಡೆಯರ ಬೀಡಿದು ಮಣ್ಣಿಗಾಗಿಯೆ ಮಣ್ಣುಗೂಡಿದ ತ್ಯಾಗಿ […]
ಭರತ ದೇಶ ಭಾಗ್ಯ ಕೋಶ ನಮ್ಮ ಜನರ ಸಂಪದ ಕೋಟಿ ಕೋಟಿ ಹೃದಯ ತೀರ್ಥ ಬೃಂದಾರಕ ಶಿವಪಥ || ಪ || ಹೈಮಾಚಲದುನ್ನತಿಯಲಿ ಆಧ್ಯಾತ್ಮದ ತೇಜದಲ್ಲಿ ಸಗ್ಗಸಿರಿಯ ಸುರಿವಳಿಲ್ಲಿ ಆತ್ಮರತೀ ವನಮಾಲಿ || 1 || ಸಹಾಧ್ಯಯನ ಸಹಭೋಜನ ಸಹ ಪೌರುಷ ಸಹ ತೋಷ ವಿಶ್ವಮೈತ್ರಿ ಗಾಯತ್ರಿಯ ಪಠಿಸಿದಂಥ ಧೀರಯುತ || 2 || ಭವ್ಯಭೂಮಿ ಭಾರತ ಮಿಗಿಲೆನಗಿದು ಜಗಕಿಂತ ಈ ಮಣ್ಣಿನ ಕಣಕಣವೂ ನನ್ನ ದೇಹ ನಿಶ್ಚಿತ || 3 || ಜನ್ಮ ಭೂಮಿ, ಜನನಿ […]
ಭಗವೆಯ ನಾವ್ ಗಗನದಲಿ ಹಾರಿಸುವಾ ಹಿರಿಮೆಯಿಂದ ಮೆರೆಯಿಸುವಾ ಬಲುಮೆಯಿಂದ || ಪ || ಮೇಲೆ ಮೇಲೆ ಗಗನದಲಿ ಹೊಳೆವ ನೀಲ ಮೇಘದಲಿ ಪಟಪಟನೇ ಪುಟಿಸುತಲಿ ನಲಿಯಿಸುವಾ ಕಲಿತನದಿ || 1 || ಹಿರಿತನದ ಹಿರಿಮೆಯಿಂದ ಯೌವನದ ಹೆಮ್ಮೆಯಿಂದ ಬಾಲತನದ ಲೀಲೆಯಿಂದ ಪೂಜಿಸುವಾ ಪ್ರತಿದಿನದಿ || 2 || ಭಾರತದ ಐಸಿರಿಯ ವೀರತೆಯ ಜಯ ಸಿರಿಯ ಕೇಶವನ ಮನಸಿರಿಯ ಮೆರೆಯಿಸುವಾ ಅವಿರತದಿ || 3 ||
ಬೆಳಕು ಒಂದು ಇಳೆಗೆ ಬಂದು ಇರುಳನೆಲ್ಲ ಕಳೆಯಿತು ಧರೆಯ ಕಣದ ಬತ್ತಿ ಉರಿದು ಕೋಟಿ ಹಣತೆ ಬೆಳಗಿತು || ಪ || ಆತ್ಮ ಒಂದು ರೂಪುಗೊಂಡು ಹಿಂದು ಎದೆಯೊಳರಳಿತು ಸಿಂಧು ಬಿಂದು ನೊಂದು ಬೆಂದು ಬಂದು ಮನವ ತಲುಪಿತು ಮಂತ್ರ ಒಂದು ಜನಿಸಿತು, ಸಂಘಶಕ್ತಿ ಉದಿಸಿತು ಕವಿದು ನಿಂತ ದಾಸ್ಯಛಾಯೆ, ಬಿಟ್ಟಿತೋ ತೊಲಗಿತು || 1 || ತತ್ವ ಒಂದು ಸಲಿಲವಾಗಿ ದೇಶವ್ಯಾಪಿ ಹರಿಯಿತು ಹನಿಗಳೆಲ್ಲ ಒಂದುಗೂಡಿ ಹರಿವಿನಲ್ಲಿ ಮೊರೆಯಿತು ಉಕ್ಕಿಹರಿವ ಸೆಳವಿನಲ್ಲಿ ಸೊಕ್ಕಿ ಬೆಳೆದ ಅಸುರಶಕ್ತಿ […]
ಬಾಳ ಹಣತೆ ಜ್ಯೋತಿ ನಗಲಿ ಎರೆವ ಸೇವೆ ತೈಲವ ಶುದ್ಧ ಮಮತೆ ಭಕ್ತಿ ಇರಲಿ ತೊರೆವ ಸ್ವಾರ್ಥ ಮೋಹವ || ಪ || ಕರುಣೆ ಕಡಲ ಒಡಲಿನಲ್ಲಿ ತೊಳೆದು ಬಿಡುವ ಭೇದವ ಸ್ಫೂರ್ತಿ ಗಂಗೆ ಉಕ್ಕಿ ಬರಲಿ ಕೊಚ್ಚಿ ಜಡ ಸ್ವಭಾವವ ಸ್ವಾಭಿಮಾನ ಕವಚದಲ್ಲಿ ಪೊರೆವ ಸತ್ಯ ಧರ್ಮವ ಬಿರಿದು ಬದುಕು ಶ್ರಮಿಸುತಿರಲಿ ಅರಿತು ಸಮಯ ಮೌಲ್ಯವ || 1 || ದೇಹದುಸಿರು ಸ್ಥಿರವದಲ್ಲ ಅಮರ ನಮ್ಮ ಕಾಯಕ ಒಂದುಗೂಡಿ ನಡೆವೆವೆಲ್ಲ ದಾಟಿ ಸಕಲ ಕಂಟಕ ಕೀರ್ತಿ […]
ಬಾ ಬಾ ಸಂಘಸ್ಥಾನದ ಕಡೆಗೆ || ಪ || ಸ್ವಾರ್ಥದ ಸೋಪಾನದ ತುಳಿತುಳಿಯುತ ಬಾಬಾ ಭೂಮಾತೆಯ ಮಡಿಲೆಡೆಗೆ ಉರಿಯಾರದೆ ಕಿಡಿ ಕಾರದೆ ಬೆಳಗುವ ಚಿರಸ್ನೇಹದ ವರದೀಪದ ಕಡೆಗೆ || 1 || ತುಂಬಿದ ಹೃದಯದ ಸೋದರವೃಂದವು ಆದರದಿಂದಲಿ ಕರೆಯುವ ಕಡೆಗೆ ಎದೆಯಾಳದಿ ಅತಿ ಪ್ರೀತಿಯ ಮಮತೆಯ ಮೈತ್ರಿಯ ಸಾಗರ ಮೊರೆಯುವ ಕಡೆಗೆ || 2 || ಸ್ವಾರ್ಥವ ಮರೆಯಿಸಿ ಸ್ಫೂರ್ತಿಯ ದೊರಕಿಸಿ ಭಾವಾವೇಶವು ಹೊಮ್ಮುವ ಕಡೆಗೆ ಚೇತನಚಿಲುಮೆಯ ಶತಶತ ಧಾರೆಯ ಬಗೆಯಾವೇಗವು ಚಿಮ್ಮುವ ಕಡೆಗೆ || 3 […]
ಬನ್ನಿ ಹಿಂದು ವೀರರೇ ಮುಂದೆ ಸಾಗುವಾ ವೀರಮಾತೆ ಪುತ್ರರೆಂದು ಧೀರ ಸಂತಾನರೆಂದು ಧರೆಯೊಳಿಂದು ಸಾರುವಾ ಮುಂದೆ ಸಾಗುವಾ || ಪ || ತಾಯ ಸೇವೆಗಾಗಿ ಬನ್ನಿ ಧ್ಯೇಯಕಾಗಿ ದುಡಿವ ಬನ್ನಿ ನಿದ್ದೆ ತೊರೆಯುವಾ, ಎದ್ದು ನಿಲ್ಲುವಾ, ಸಿದ್ಧರಾಗುವಾ ಕತ್ತಲನ್ನು ಕಬಳಿಸುತ್ತ, ಸುತ್ತ ಬೆಳಕನರಳಿಸುತ್ತ ಮುಕ್ತ ರವಿಯು ಮೂಡುವಾ ನೋಟ ನೋಡುವಾ || 1 || ಭಗವ ಧ್ವಜ ಹಾರುತಿಹುದು, ಮುಗಿಲ ಮೇಲೇರುತಿಹುದು ಶುಭವ ಕೋರುತಾ, ಅಭಯವೀಯುತಾ, ಪ್ರಭೆಯ ಬೀರುತಾ ಭೋಗ ವಿಷಯ ರಾಗ ತ್ಯಜಿಸಿ, ತ್ಯಾಗ ಭಾವ […]
ಬನ್ನಿ ಸೋದರರೆ ಬನ್ನಿ ಬಾಂಧವರೆ ಹೃದಯ ಹೃದಯಗಳ ಬೆಸೆಯೋಣ ವಸುಧಾ ಕುಟುಂಬ ರಚಿಸೋಣ ಮೊಳಗಲಿ ತಾಯ ಯಶೋಗಾನ ಭಾರತೀ ಜಯ ಭಾರತೀ ಜಯ ಭಾರತೀ ಜಯ ಭಾರತೀ || ಪ || ಹಸಿವಡಗಲಿ ತೃಷೆ ಹಿಂಗಲಿ ಅಜ್ಞಾನದ ಪೊರೆ ಹರಿಯಲಿ ರೋಗ ರೂಢಿಗೊದಗಲಿ ಅವಸಾನ ಸುತರೆಮಗಿದು ಕರ್ತವ್ಯಪಣ ಧರೆ ಎನಿಸಲಿ ಆನಂದವನ || 1 || ಕೊರತೆ ಕಲುಷಗಳನಳೆದಳೆದು ಸರಿಯುತ್ತರ ಸುರಿಮಳೆಗರೆದು ಸರ್ವವ್ಯಾಪಿಯಾಗಲಿ ಸಂಕ್ರಮಣ ಸಂಘಟನಾಬಲ ನಿರ್ಮಾಣ ವಿಶ್ವ ಸಂತತಿಯ ಕಲ್ಯಾಣ || 2 || ಹಿಂದು […]