ಭವ್ಯರಾಷ್ಟ್ರದ ಧನ್ಯಜನನಿಯೆ

ಭವ್ಯರಾಷ್ಟ್ರದ ಧನ್ಯಜನನಿಯೆ ನಿನಗೆ ನೂರು ನಮನ
ಮಾತೃಸಂಸ್ಕೃತಿಯ ಮೂರ್ತರೂಪಿಣೆಯೆ ನಿನಗೆ ಯಾರು ಸಮಾನ || ಪ ||

ನೆಲವಾದವಳೆ ಜಲವಾದವಳೆ
ಜ್ವಾಲಾ ರೂಪದಿ ಬಂದವಳ
ಉಸಿರಾದವಳೆ ಹಸಿರಾದವಳೆ
ಪಂಚತತ್ವದಲು ನಿಂದವಳೆ
ಹಿಂದು ಪರಂಪರೆ ದರುಶನ ಮಾಡಿದ ಆದಿಶಕ್ತಿ ರೂಪಿಣಿಯೆ
ಮಾನವ್ಯಕೆ ಹಾಲುಣಿಸಿದ ಮಾತೆಯೆ ಆರ್ಯಕುಲದ ಮಾನಿನಿಯೆ || 1 ||

ಸಾವಿರ ವರ್ಷದ ರಣಸಂಘರ್ಷದ
ಸಂಸಾರದಿ ವಿಷವುಂಡವಳೆ
ಸಂಕಟಬರಲಿ ಸಂತಸವಿರಲಿ
ಏಕೋಭಾವದಿ ಕಂಡವಳೆ
ಸದ್ಗುಣ ಸೆಲೆ ಸಂಸ್ಕಾರದ ನೆಲೆಯಲಿ ಮನೆಕಟ್ಟಿದ ಮಹಿಮಾನ್ವಿತೆಯೆ
ಸಂಸ್ಕೃತಿಯುಳುಹಿ ಸಮಾಜವ ಬೆಳಗಿದ ಹಿಂದು ಅಭಿಮಾನಿ ದೇವತೆಯೆ || 2 ||

ಆಮಿಷ ಭ್ರಮೆಗಳ ಆಸುರಿಯಜ್ಞಕೆ
ಆಹುತಿಗೊಳದೀ ಸ್ತ್ರೀ ಚರಿತೆ
ನೇತೃತ್ವದಲಿ ಮಾತೃತ್ವದಲಿ
ಕರ್ತೃತ್ವದಲಿದೆ ಸಾರ್ಥಕತೆ
ಜಾಗೃತವಾಗಲಿ ಲೋಕಲೋಕದಲಿ ಮಾತೃಮಾನ್ಯಭಾವ
ವೇದದ ನುಡಿ ಅನುನಾದವಗೈಯಲಿ “ಮಾತೃದೇವೋಭವ” || 3 ||

Leave a Reply

Your email address will not be published. Required fields are marked *

*

code