ಮೂಡುತಿಹುದು ಹಿಂದು ಯುಗವು ಬೆಳಗುತಿಹುದು ಸಕಲ ಜಗವು || ಪ || ನೆಲಜಲದ ಗರ್ಭದಿಂದ | ಬದಿ ಹೊಲದ ದರ್ಭೆಯಿಂದ ಕವಿ ಮನದ ಗಹನದಿಂದ | ಕಲಿ ಕರ್ಮದ ಕಮಟದಿಂದ ರೂಪುಗೊಂಡ ರಾಷ್ಟ್ರವಾಗಿ | ಇಂಬುಗೊಂಡ ದೃಷ್ಟಿಯಾಗಿ || 1 || ಧಮನಿಯ ನೆತ್ತರಿಂದ | ಬೆವರಿನ ಹನಿಗಳಿಂದ ಸ್ಥೈರ್ಯದ ನೆಲೆಯು ನೆಮ್ಮಿ | ಬದುಕಲಿ ಆದರ್ಶ ಹಮ್ಮಿ ಯುವಜನರ ತ್ಯಾಗವಾಗಿ | ಯುಗಯುಗದ ಭಾಗ್ಯವಾಗಿ || 2 || ನವಚೇತನ ಪುಳಕಗೊಂಡು | ಆಲಸ್ಯಕೆ ಮರಣ […]
ಮುಂದೆ ಮುಂದೆ ನಡೆವುದೇ ನಮ್ಮ ನೀತಿಯು ಇಲ್ಲವೆಮಗೆ ಅಂಜಿಕೆ ಭಯ ಭೀತಿಯು || ಪ || ಇಟ್ಟ ಹೆಜ್ಜೆ ಹಿಂದೆಗೆಯದೆ ಚಲಿಸಿ ವೇಗದಿ ಹೊಸ ದಿಗಂತಗಳನು ದಾಟಿ ಧ್ಯೇಯ ಮಾರ್ಗದಿ ಕಲ್ಲು ಮುಳ್ಳಿನಾಗರ, ಕಷ್ಟ ನಷ್ಟ ಭೀಕರ ಗೆಲ್ಲುವನಕ ನಿಲ್ಲವೆಲ್ಲೂ ಬರಲಿ ವಿಘ್ನಸಾವಿರ || 1 || ಛತ್ರಪತಿ ಚರಿತೆಯೆಮಗೆ ಸ್ಫೂರ್ತಿದಾಯಕ ಶತ್ರುನಾಶ ಗೈದ ಗಾಥೆ ರೋಮಾಂಚಕ ನಾವು ವೀರಪುತ್ರರು, ಮಾನವತೆಯ ಮಿತ್ರರು ವ್ಯಕ್ತಿ ವ್ಯಕ್ತಿಯಾಗಲಿಂದು ನಾಡ ರಕ್ಷಕ || 2 || ವಿಘ್ನ ಸಂತೋಷಿಗಳಿಗೆ ಪಾಠ […]
ಮಾತೆಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೆ ಆಸೆಯು ಮನದಲಿ || ಪ || ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ || 1 || ನಗುತ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ ನಿನ್ನ […]
ಮರೆಯದಿರು ರಾಖಿಬಂಧನ್ ಹಿಂದುಗಳ ಐಕ್ಯ ಸಾಧನ್ ಬಂಧುಗಳ ಪ್ರೇಮ ಬಂಧನ್ ಇದೆ ಹಿಂದುರಾಷ್ಟ್ರ ಜೀವನ್ || ಪ || ಹಿನ್ನಡೆದ ಹಿಂದುಗಳಲಿ ಹುಮ್ಮಸನು ತುಂಬುತಿಹುದು ಮೈಮರೆತ ಬಂಧುಗಳಲಿ ತನ್ನರಿವ ಬಿಂಬಿಸಿಹುದು ಅಭಿಮಾನಪೂರ್ಣ ಜೀವನ್, ಸಾರುತಿದೆ ರಾಖಿ ಬಂಧನ್ || 1 || ಹೃದಯಕ್ಕೆ ಹೃದಯ ಬೆರೆಸಿ ನಿಜ ಪ್ರೇಮ ಝರಿಯ ಹರಿಸಿ ಆಂತರಿಕ ಜ್ಯೋತಿ ಜ್ವಲಿಸಿ ನವ ಸ್ಫೂರ್ತಿಸುಧೆಯ ಸುರಿಸಿ ಸಂಘಟನ ಮೂಲ ಸಾಧನ್, ಸಾರುತಿದೆ ರಾಖಿ ಬಂಧನ್ || 2 || ಸದ್ಧರ್ಮ ಮರ್ಮವರುಹಿ, ಸಂಸ್ಕೃತಿಯ […]
ಮಥಿಸಿ ಮೈದಳೆಯುತಿದೆ ಹಿಂದುತ್ವದಮೃತ ಗತಿಸಿದೆ ವಿದ್ವೇಷ ಹಾಲಾಹಲ ವಿಷ || ಪ || ವೇದಗಳ ದರುಶನವ ಲೋಕದೆದುರಲಿ ತೆರೆದು ಬದುಕಿನುನ್ನತ ಗತಿಯ ಔದಾರ್ಯ ಮೆರೆದು ನೆಲೆಗೊಳಿಸಿ ನೀತಿಗಳ ನಿರ್ಮಿಸಿದೆ ಧರ್ಮಪಥ ಕಾಲದ ಸವಾಲುಗಳ ಎದುರಿಸಿದೆ ಸತತ || 1 || ಜನಮನವ ಸಂಸ್ಕೃರಿಸಿ ತರತಮದ ಕೆಡುಕಳಿಸಿ ಬಲದುಪಾಸನೆ ಕಲಿಸಿ ಬಲಿದು ಸಂಘಟಿಸಿ ಶ್ರೇಷ್ಠ ಸದ್ಗುಣ ಸುಮಗರಳುತಿವೆ ಅನವರತ ರಾಷ್ಟ್ರ ಸ್ವೀಕರಿಸಿದೆ ಸಂಘ ಸಿದ್ಧಾಂತ || 2 || ಧರ್ಮ ಸಂಸ್ಥಾಪನೆಗೆ ಬನ್ನಿರೆಲ್ಲರೂ ಕೂಡಿ ದುರ್ಮತಿಗೆ ದುರ್ಜನಕೆ ರಣವೀಳ್ಯ […]
ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ ಮನುಜರಾಗಿ ಹುಟ್ಟಲಿಲ್ಲಿ ಜನುಮಜನುಮ ಸುಕೃತ || ಪ || ನಾಲ್ಕುದಿನದ ಬಾಳು ನಮದು ಆಗಲಿಂದು ಸಾರ್ಥಕ ತ್ಯಾಗ ಮೆರೆದು ಅಮರರಾದ ಸಂತರೆಮೆಗೆ ಪ್ರೇರಕ ಮಣ್ಣ ಋಣವ ಕಳೆವುದಕ್ಕೆ ಸೇವೆಯೊಂದೇ ಸಾಧಕ ನಗುತ ನಲಿವ ರಾಷ್ಟ್ರಕ್ಕಾಗಿ ಸಾಗಬೇಕು ಕಾಯಕ || 1 || ಧ್ಯೇಯ ಪಥವ ಬಿಟ್ಟ ಬಾಳ್ವೆ ಬೇಡ ನಮಗೆ ನೀರಸ ಪರರಿಗಾಗಿ ಸತತ ಮಿಡಿವ ಹೃದಯದಿಂದ ಸಂತಸ ಕಳೆದು ಬಿಡುವ ರೋಷ ದ್ವೇಷ ಎಲ್ಲ ಮನದ ಕಲ್ಮಶ […]
ಬಿಂದುವು ಮೊರೆಯಿತು ಸಾಗರವಾಗಿ ಸಸಿಯು ಬೆಳೆಯಿತು ಹೆಮ್ಮರವಾಗಿ ಹಿಂದುವು ನಿಂದಿಹನು ಮೈಕೊಡವಿ ಅಕ್ಷಯ ಶಕ್ತಿಯ ಆಗರವಾಗಿ ಇದುವೇ ಸಂಘದ ಸಾಧನೆಯು… ನನಸಾಯಿತು ಬರಿ ಕಲ್ಪನೆಯು || ಪ || ಕಳೆಯಿತು ಸೋಲಿನ ಕತ್ತಲ ಕಾಲ ಹರಿಯಿತು ಸಾಸಿರ ಸಂಚಿನ ಜಾಲ ಸಾಗದು ಇನ್ನು ಶತ್ರುಗಳಾಟ ದಿಶೆತಪ್ಪಿದ ಉಗ್ರರ ಚೆಲ್ಲಾಟ… ಇದುವೇ… || 1 || ಭ್ರಮೆ ಕೀಳರಿಮೆಗೆ ಅಂತ್ಯವ ಸಾರಿ ಹಿಂದುತ್ವದ ಹೊಂಗಿರಣವ ಬೀರಿ ಮುನ್ನಡೆದಿದೆ ಯುವವೀರರ ಪಡೆಯು ಬಳಿಸಾರಿದೆ ಘನವಿಜಯದ ಗುರಿಯು… ಇದುವೇ… || 2 […]
ಭಾರತಾಂಬೆ ನಮ್ಮ ತಾಯಿ ನಾವು ಅವಳ ಮಕ್ಕಳು ಒಂದುಗೂಡಿ ಬನ್ನಿರೆಲ್ಲ ಭವ್ಯರಾಷ್ಟ್ರಕಟ್ಟಲು || ಪ || ಒಂದೆ ಮಣ್ಣ ಕಣಗಳಲ್ಲಿ ಇರದು ಎಂದೂ ಭಿನ್ನತೆ ಒಂದೆ ನೀರ ಹನಿಗಳಲ್ಲಿ ಇರುವುದೇ ವಿಭಿನ್ನತೆ? ಭೇದಭಾವ ಬಿಸುಟು ದೂರ ಸಾಧಿಸಿ ಸಮಾನತೆ ಕಾಣಬನ್ನಿ ನಾಡಸೇವೆಯಲ್ಲಿ ಬಾಳಧನ್ಯತೆ || 2 || ನಮ್ಮ ನಾಡ ಚರಿತೆಯ ಪುಟ ಪುಟ ರೋಮಾಂಚಕ ಛತ್ರಪತಿಯ ವೀರಗಾಥೆ ಅಮಿತ ಸ್ಫೂರ್ತಿದಾಯಕ ಕೋಟಿ ಕೋಟಿ ಪುತ್ರರಿರಲು ಮಾತೆಗೇಕೆ ಕಂಬನಿ? ನಾಡರಕ್ಷೆಗಾಗಿ ಮುಡಿಪು ನೆತ್ತರಿನ ಹನಿ ಹನಿ || […]
ಭಾರತದಾ ನವ ತರುಣರಂಗದಿ ಸತ್ಯ ಅಸತ್ಯದ ಸಮರ ಬೆಳೆದು ಹಿಂದು ಬಲ ಅಳಿದು ವಾಮಛಲ ಕರಗಲಿದೆ ಭ್ರಮೆ ತಿಮಿರ ಕೇಶವನಿರುವೆಡೆ ಧರ್ಮ ಧರ್ಮಕೆ ಜಯ ಯುಗ ನಿಯಮ || ಪ || ಶತಶತಮಾನದ ಮೌಢ್ಯದ ಗೋಡೆ ಒಡೆಯಲಿ ಅಳಿಸುತ ನೋವ ಕನಕ ಭಕ್ತಿಗೆ ಸಂಘ ಶಕ್ತಿಗೆ ಒಲಿಯುವ ಸಮಾಜ ದೇವಾ ಧ್ವನಿಸಲಿ ಹಿಂದೂ ಭಾವ ಪುನರುತ್ಥಾನ ಪುನರುಜ್ಜೀವನ ಗರ್ಭಗುಡಿಯ ಮಡಿಲಿಂದ ನವ ನಿರ್ಮಾಣದ ಪ್ರತಿ ಶಿಲೆಕಲ್ಲಿಗೂ ಸಮರಸ ಸೂತ್ರದ ಬಂಧ ಭೇದ ಬೆದರುವ ಸ್ವಾರ್ಥ ಕುತಂತ್ರ ಬಯಲಾಗುತ […]
ಭಾರತದ ಆಗಸದಿ ನವಸೂರ್ಯೋದಯವಾಗುತಿದೆ ಶತಶತಮಾನದ ದೈನ್ಯವನಳಿಸುತ ನವ ಜೀವನ ಪ್ರಭೆ ಮೂಡುತಿದೆ || ಪ || ರೂಢಿಯ ಜಡತೆಯ ಬಂಧನ ಕಳಚುತ ನವೋತ್ಸಾಹ ನವ ಸ್ಫೂರ್ತಿಯನೆರೆಯುತ ಮಸಣದ ಶೂನ್ಯದಿ ಸಾಸಿರ ಸುಮಗಳ ನವ ನಂದನ ಸಜ್ಜಾಗುತಿದೆ || 1 || ತ್ಯಾಗ ತಪೋಮಯ ಋಷಿ ಮುನಿ ಜೀವನ ಸಾಹಸ ಚೈತ್ರದ ಕ್ಷಾತ್ರೋತ್ಸ್ಫುರಣ ಶೀಲದ ಶೌರ್ಯದ ಆರಾಧನೆಯಲಿ ನಾಡಿದು ತನ್ಮಯವಾಗುತಿದೆ || 2 || ಬಿಂದುವು ಸಿಂಧುತ್ವಕೆ ತಾನೆಳೆಸಲು ಕಳೆಯದೆ ಹಿಂದುತ್ವದ ಬಿರಿಯಳಲು ಬಾನ್ಧರೆ ಬೆಸೆಯುವ ಮಹದಾಕಾಂಕ್ಷೆಯ ಸಂಘ […]