ಭಾರತಾಂಬೆ ನಮ್ಮ ತಾಯಿ
ನಾವು ಅವಳ ಮಕ್ಕಳು
ಒಂದುಗೂಡಿ ಬನ್ನಿರೆಲ್ಲ ಭವ್ಯರಾಷ್ಟ್ರಕಟ್ಟಲು || ಪ ||
ಒಂದೆ ಮಣ್ಣ ಕಣಗಳಲ್ಲಿ ಇರದು ಎಂದೂ ಭಿನ್ನತೆ
ಒಂದೆ ನೀರ ಹನಿಗಳಲ್ಲಿ ಇರುವುದೇ ವಿಭಿನ್ನತೆ?
ಭೇದಭಾವ ಬಿಸುಟು ದೂರ ಸಾಧಿಸಿ ಸಮಾನತೆ
ಕಾಣಬನ್ನಿ ನಾಡಸೇವೆಯಲ್ಲಿ ಬಾಳಧನ್ಯತೆ || 2 ||
ನಮ್ಮ ನಾಡ ಚರಿತೆಯ ಪುಟ ಪುಟ ರೋಮಾಂಚಕ
ಛತ್ರಪತಿಯ ವೀರಗಾಥೆ ಅಮಿತ ಸ್ಫೂರ್ತಿದಾಯಕ
ಕೋಟಿ ಕೋಟಿ ಪುತ್ರರಿರಲು ಮಾತೆಗೇಕೆ ಕಂಬನಿ?
ನಾಡರಕ್ಷೆಗಾಗಿ ಮುಡಿಪು ನೆತ್ತರಿನ ಹನಿ ಹನಿ || 3 ||
ಕಾಶ್ಮೀರ ಕಣಿವೆಯೊಳಗೆ ನುಸುಳಿತಿಹರು ಅರಿಗಳು
ಗಡಿಗಳಲ್ಲಿ ಗುಡುಗುತಿರಲು ಧೂರ್ತ ಶತ್ರು ಪಡೆಗಳು
ಮನದಿ ಮನೆಯ ಮಾಡಿದಂಥ ಹೇಡಿತನವ ದಹಿಸುವಾ
ಶಸ್ತ್ರ ಹಿಡಿದು ಹೋರಾಡಿ ವಿಶ್ವವನ್ನೆ ಜಯಿಸುವಾ || 3 ||