ಮೂಡುತಿಹುದು ಹಿಂದು ಯುಗವು

ಮೂಡುತಿಹುದು ಹಿಂದು ಯುಗವು
ಬೆಳಗುತಿಹುದು ಸಕಲ ಜಗವು || ಪ ||

ನೆಲಜಲದ ಗರ್ಭದಿಂದ | ಬದಿ ಹೊಲದ ದರ್ಭೆಯಿಂದ
ಕವಿ ಮನದ ಗಹನದಿಂದ | ಕಲಿ ಕರ್ಮದ ಕಮಟದಿಂದ
ರೂಪುಗೊಂಡ ರಾಷ್ಟ್ರವಾಗಿ | ಇಂಬುಗೊಂಡ ದೃಷ್ಟಿಯಾಗಿ || 1 ||

ಧಮನಿಯ ನೆತ್ತರಿಂದ | ಬೆವರಿನ ಹನಿಗಳಿಂದ
ಸ್ಥೈರ್ಯದ ನೆಲೆಯು ನೆಮ್ಮಿ | ಬದುಕಲಿ ಆದರ್ಶ ಹಮ್ಮಿ
ಯುವಜನರ ತ್ಯಾಗವಾಗಿ | ಯುಗಯುಗದ ಭಾಗ್ಯವಾಗಿ || 2 ||

ನವಚೇತನ ಪುಳಕಗೊಂಡು | ಆಲಸ್ಯಕೆ ಮರಣ ಸಾರಿ
ಚಿಂತನ ಗರಿ ಕೆದರಿಗೊಂಡು | ಉತ್ಥಾನದತ್ತ ದಾರಿ
ಮಾನವತೆ ನಲಿವುದಿಲ್ಲಿ | ಮೆರೆವುದು ಮಾನ್ಯತೆಯ ಚೆಲ್ಲಿ || 3 ||

Leave a Reply

Your email address will not be published. Required fields are marked *

*

code