ಬಾ ಬಾ ಸಂಘಸ್ಥಾನದ ಕಡೆಗೆ

ಬಾ ಬಾ ಸಂಘಸ್ಥಾನದ ಕಡೆಗೆ || ಪ ||

ಸ್ವಾರ್ಥದ ಸೋಪಾನದ ತುಳಿತುಳಿಯುತ ಬಾಬಾ ಭೂಮಾತೆಯ ಮಡಿಲೆಡೆಗೆ
ಉರಿಯಾರದೆ ಕಿಡಿ ಕಾರದೆ ಬೆಳಗುವ ಚಿರಸ್ನೇಹದ ವರದೀಪದ ಕಡೆಗೆ || 1 ||

ತುಂಬಿದ ಹೃದಯದ ಸೋದರವೃಂದವು ಆದರದಿಂದಲಿ ಕರೆಯುವ ಕಡೆಗೆ
ಎದೆಯಾಳದಿ ಅತಿ ಪ್ರೀತಿಯ ಮಮತೆಯ ಮೈತ್ರಿಯ ಸಾಗರ ಮೊರೆಯುವ ಕಡೆಗೆ || 2 ||

ಸ್ವಾರ್ಥವ ಮರೆಯಿಸಿ ಸ್ಫೂರ್ತಿಯ ದೊರಕಿಸಿ ಭಾವಾವೇಶವು ಹೊಮ್ಮುವ ಕಡೆಗೆ
ಚೇತನಚಿಲುಮೆಯ ಶತಶತ ಧಾರೆಯ ಬಗೆಯಾವೇಗವು ಚಿಮ್ಮುವ ಕಡೆಗೆ || 3 ||

ಅನುಶಾಸನದಾದೇಶವ ನೀಡುವ ಮಹಿಮಾನ್ವಿತ ಆದರ್ಶದ ಎಡೆಗೆ
ಚಾರಿತ್ರ್ಯದ ಆರಾಧನೆ ನಡೆಯುವ ಭಾರತಭೂಮಿಯ ಭಕ್ತರ ಗುಡಿಗೆ || 4 ||

Leave a Reply

Your email address will not be published. Required fields are marked *

*

code