ನಮಿಸಿ ಭಾರತಮಾತೆಗೆ

ನಮಿಸಿ ಭಾರತಮಾತೆಗೆ ಧುಮುಕಿ ಕಾರ್ಯಕ್ಷೇತ್ರಕೆ
ತ್ಯಜಿಸಿ ಭೀತಿ ಅಂಜಿಕೆ ಚಲಿಸಿ ಮುಂದೆ ಮುಂದಕೆ
ಜೈ ಭಾರತಿ, ಜೈ ಭಾರತಿ, ಜೈ ಭಾರತಿ ನಮೋ ಜಗದ ಸಾರಥಿ || ಪ ||

ಶೂರವೀರಧೀರರು ಸಾಧುಸಂತಯತಿಗಳು
ತೋರಿದಂಥ ದಾರಿಯು ಸಾರಿದಂಥ ನೀತಿಯು
ನಮಗೆ ಮಾರ್ಗದರ್ಶಕ ಸತತ ಸ್ಫೂರ್ತಿದಾಯಕ                  || 1 ||

ಬರಲಿ ವಿಘ್ನ ಸಾವಿರ ಕಷ್ಟನಷ್ಟ ಭೀಕರ
ಕೆಚ್ಚಿನಿಂದ ಎದುರಿಸಿ ಧ್ಯೇಯದೀಪ ಬೆಳಗಿಸಿ
ಮುಂದೆ ನಡೆವ ಛಲವಿದೆ ಗೆಲುವು ಪಡೆವ ಬಲವಿದೆ           || 2 ||

ನಾಡಗುಡಿಯ ಕಟ್ಟಲು ಭರದಿ ಗುರಿಯ ಮುಟ್ಟಲು
ನಮ್ಮ ಕಾಯ ಮೀಸಲು ಜನರ ನೋವನಳಿಸಲು
ದಹಿಸಿ ದ್ವೇಷದ ಹಗೆ ಬಿತ್ತಿ ಸ್ನೇಹದ ನಗೆ                               || 3 ||

Leave a Reply

Your email address will not be published. Required fields are marked *

*

code