ಧ್ಯೇಯ ಜನಿಸಿತು ದೇಹ ಧರಿಸಿ

ಧ್ಯೇಯ ಜನಿಸಿತು ದೇಹ ಧರಿಸಿ
ಸಂಪರ್ಕದಮೃತವನೆಮಗೆ ಕುಡಿಸಿ, ನಿತ್ಯಶಕ್ತಿಯ ಮಂತ್ರ ನೀಡಲು
ಧ್ಯೇಯ ಜನಿಸಿತು ದೇಹ ಧರಿಸಿ || ಪ ||

ಶೂನ್ಯ ಪಥದೊಳು ಸಾಗುತಿರಲು ನಾಡಿನೆಲ್ಲೆಡೆ ತರುಣ ಜನತೆ
ಶೂನ್ಯದಲೆ ಲಯವಾಗುತಿರಲು ರಾಷ್ಟ್ರಜೀವನದಖಿಲ ಚರಿತೆ
ಬೆಳಕು ಹೊಮ್ಮಿತು ಪ್ರಭೆಯ ಚಿಮ್ಮಿತು, ಧರ್ಮ ಸಾರಿತು ಭರದಿ ದ್ರವಿಸಿ || 1 ||

ವಿಷಮ ಭಾವದೊಳೈಕ್ಯ ಸಾಧನ ಸೂತ್ರಗಳು ತುಂಡಾಗುತಿರಲು
ದಿವ್ಯತರ ಚಿರ ರಾಷ್ಟ್ರಜೀವನ ಸತ್ವ ಲಯವಾಗಳಿಯುತಿರಲು
ಸಂಸ್ಕೃತಿಯ ನವ ಸ್ನೇಹವುದಿಸಿತು, ಧರ್ಮ ಸಾರಿತು ಕರುಣೆಯಿರಿಸಿ || 2 ||

ಸೋತು ಪರಕೀಯತೆಯ ಸುಳಿಯಲಿ ಮುಳುಗಿಹೋಗಿರೆ ದೇಶವೆಮದು
ಆತ್ಮವಿಸ್ಮೃತಿ ಕವಿದು ಘೂರ್ಮಿಸಿ, ಶಕ್ತಿಗುಂದಿರೆ ನಾಡು ಕುಸಿದು
ಶ್ರದ್ಧೆ ಭರವಸೆ ಎದ್ದಿತಾ ಕ್ಷಣ, ದೇಹ ಜನಿಸಿತು ಧ್ಯೇಯ ಧರಿಸಿ || 3 ||

Leave a Reply

Your email address will not be published. Required fields are marked *

*

code