ಧಾವಿಸು ಮುಂದೆ ಧಾವಿಸು

ಧಾವಿಸು ಮುಂದೆ ಧಾವಿಸು
ಧೀರಪಥದಿ ಅಂತಿಮ ಜಯ ನಿನ್ನದೆಂದೆ ಭಾವಿಸು || ಪ ||

ಸೋಲರಿಯದ ಶಕ್ತಿ ನಿನದು ಸಾವರಿಯದ ಸಂತತಿ
ಕಾಲನ ಜತೆ ಕಾಲನಿಡುವ ನಿನದಜೇಯ ಸಂಸ್ಕೃತಿ
ನಿನಗೆ ಹಾಲನೆರೆದ ತಾಯಿ ಸನಾತನೆ ಭಾರತಿ
ಅವಳ ಗರಿಮೆ ಗಳಿಕೆಗಾಗಿ ಜೀವಿಸು || 1 ||

ಅಂಜುವೆದೆಯ ಕದವ ತೆರೆದು ಧ್ಯೇಯಜಲವ ಚಿಮುಕಿಸು
ನಂಜನುಂಗಿ ಅಮರನಾಗು ಧೈರ್ಯಧಾರೆ ಧುಮುಕಿಸು
ಮಂಜು ಹರಿದು ಅರಿಯ ಎದುರು ವಿಜಯಖಡ್ಗ ಝಳಪಿಸು
ಹೋರಿಗುರಿಯ ಸೇರು ಬದುಕನರ್ಪಿಸು || 2 ||

ಹೇಡಿಗೆಷ್ಟು ಸಾವು ಬಹುದೊ ಎಷ್ಟು ಬದುಕೊ ತಿಳಿಯದು
ವೀರ ನಿನಗೆ ಒಮ್ಮೆ ಮಾತ್ರ ಬದುಕು ಬೆಳಕು ದೊರೆವುದು
ಶತ್ರುಂಜಯ ಮೃತ್ಯುಂಜಯನೆನುವ ಮಾತ ನೆನಪಿಡು
ಕ್ಷಾತ್ರಪಥವ ಹಿಡಿದು ತಾಯ ರಕ್ಷಿಸು || 3 ||

Leave a Reply

Your email address will not be published. Required fields are marked *

*

code