ಧರೆಯ ಹೃದಯ ಗೆದ್ದು

ಧರೆಯ ಹೃದಯ ಗೆದ್ದು ಎದ್ದು ನಿಲ್ಲಬಲ್ಲ ಭಾರತ
ತಾಯೇ ನಿನ್ನ ಪೂಜೆ ನಾನು ಮಾಡುವೆನು ಅವಿರತ        || ಪ ||

ನೋವನೆಲ್ಲ ನುಂಗಿ ನೀನು ನಮ್ಮನೆಲ್ಲ ಸಲಹಿದೆ
ನಿನ್ನ ನಾವು ಮರೆತ ನೋವು ಎದೆಯನೆಲ್ಲ ತುಂಬಿದೆ
ಅಂದುಗೈದ ಪಾಪ ತೊಳೆದು ಮತ್ತೆ ಶುದ್ಧರಾಗಲು
ಬಿಡದೆ ನಿನ್ನ ಸೇವಿಸುವ ಸತ್ವಶೀಲ ಸುತರೊಲು               || 1 ||

ನಿನ್ನ ಅಂಗ ಅಂಗವೆಲ್ಲ ಭಂಗವಾಗಿ ಹೋದ ಚಿತ್ರ
ಕಾಣುತಿಹುದು ಕಣ್ಣ ಮುಂದೆ ಭೀತಿ ತರುವ ವಿಷದ ಚಕ್ರ
ಅಮ್ಮ ನಿನ್ನ ಮಕ್ಕಳೆಲ್ಲ ತುಂಬಿಕೊಂಡು ಭೇದಭಾವ
ಕಾದಿ ಮಡಿವ ದೃಶ್ಯ ಕಂಡು ನೊಂದೆ ತಾಯೇ ಭಾರತೀ   || 2 ||

ಸುತ್ತ ಮುತ್ತಿದಂಥ ಘೋರ ಅಂಧಕಾರ ತೊಡೆವೆನಿಂದು
ಎನ್ನ ಬಾಳ ಭವ್ಯ ಗುರಿಯ ತೋರಿಸಿದೆ ಸಂಘವಿಂದು
ಎನ್ನ ಸರ್ವಶಕ್ತಿ ಸುರಿದು ಸಂಘ ಕಾರ್ಯಗೈದು ನಾನು
ಭವ್ಯ ಬಾಳು ಬಾಳುವಂತೆ ಹರಸು ಎನ್ನ ಓ ಪ್ರಭೋ        || 3 ||

Leave a Reply

Your email address will not be published. Required fields are marked *

*

code