ನವ ಭಾರತ ನವ ಯುವಕನೆ

ನವ ಭಾರತ ನವ ಯುವಕನೆ ನವೋದಯದ ಹರಿಕಾರನೆ
ನಾಡ ನಾಡಿಯನ್ನೇ ಮಿಡಿವ ನವ-ನೂತನ ಚೇತನವೆ || ಪ ||

ಹಿಮಾಚಲದ ತುಂಗಶೃಂಗ ನಿನ್ನ ಉತ್ತಮಾಂಗ
ಧವಳ ವರ್ಣ ದಯಾಪೂರ್ಣ ನಿನ್ನ ಅಂತರಂಗ
ರತ್ತಧುನೀ ಧಮನಿ ಧಮನಿ ನದಿ ನದಂಗಳೆಲ್ಲ
ತದತ್ತರಂಗವಾಗಿ ಹರಿವ ತೇಜದೊಡಲು ನಿನ್ನದು || 1 ||

ದ್ರೋಹ ದರ್ಪ ದೌರ್ಜನ್ಯಕೆ ಎತ್ತು ಕೊಡಲಿ ಇಂದೇ
ತುಂಡಾದರೂ ಮೊಂಡಾದರೂ ಭರತಖಂಡ ನಿನ್ನದೇ
ದಿಕ್ತಟದಲಿ ಪಟಪಟಿಸಲಿ ಭವ್ಯನಾಡ ಬಾವುಟ
ಶಾಂತಿ ಸಾಕು ಕ್ರಾಂತಿ ಬೇಕು ತೋರೋ ಮನದ ಆರ್ಭಟ || 2 ||

ಮೈಯನೊದರು ಮುಡಿಯ ಕೆದರು ಕಣ್ಣುಕೆಂಡವಾಗಲಿ
ನಚ್ಚ ತುಂಬು ಮನದ ತುಂಬ ಕೆಚ್ಚು ನಿನ್ನದಾಗಲಿ
’ನಾನು ಭಾರತೀಯ’ ನೆಂಬ ತಾರಕದಾ ಮಂತ್ರ
ಘೋಷಿಸುತ್ತೆ ಮುಂದೆ ಸಾಗೊ ಧನ್ಯವೀ ಸ್ವತಂತ್ರ || 3 ||

Leave a Reply

Your email address will not be published. Required fields are marked *