ಅತಿಶಯದ ಮಾತಲ್ಲ

ಅತಿಶಯದ ಮಾತಲ್ಲ ಯುಗಪುರುಷ ನಿನ್ನೊಳಿದೋ ಭಾವ ನೈವೇದ್ಯಗಳ ಅರ್ಪಿಸುತಿಹೆ ನಿನ್ನ ನಡೆಗಳ ಕಲಿಸು ನಿನ್ನ ನುಡಿಗಳನುಲಿಸು ಧನ್ಯ ಜೀವನಕಾಗಿ ಪ್ರಾರ್ಥಿಸುತಿಹೆ || ಪ || ಹಿಂದು ರಾಷ್ಟ್ರದ ಋಷಿಯ ದೃಷ್ಟಿ ಸಿಂಚಿಸಿತು ರಾಷ್ಟ್ರಭಕ್ತಿಯ ಅಮೃತ ವೃಷ್ಟಿ ದಾಸ್ಯಗಳ ಧಿಕ್ಕರಿಸಿ, ಸ್ವತ್ವಗಳ ವಿಸ್ತರಿಸಿ ಸೂಸಿದೆ ಸನಾತನದ ಸೃಷ್ಟಿ ದೊರೆತಿದೆ ಪುರಾತನದ ಪುಷ್ಟಿ || 1 || ಋತು ಚಕ್ರವುರುಳುತಿರೆ ಜೋಕೆ | ಕ್ಷಣ ಕ್ಷಣವು ಫಲಿಸುತಿದೆ ಯುಗಯುಗದ ಹರಕೆ ಹಿಂದುತ್ವ ಚೈತನ್ಯ | ರಾಷ್ಟ್ರದೇಹದಿ ನೆಲೆಸಿ ಮೀಟುತಿದೆ ನಾಡಿನಾಡಿಗಳ […]

Read More

ಶ್ರೀ ವಿವೇಕಾನಂದ ಗುರುವರ (ಕುವೆಂಪು)

ಶ್ರೀ ವಿವೇಕಾನಂದ ಗುರುವರ, ನವಯುಗಾಚಾರ್ಯ, ರಾಮಕೃಷ್ಣರ ಭೀಮಶಿಷ್ಯನೆ, ವೀರ ವೇದಾಂತಿ, ಭಾರತಾಂಬೆಯ ಧೀರಪುತ್ರನೆ, ಸಾಧು ಭೈರವನೆ, ಸ್ಥೈರ್ಯದಚಲವೆ, ಧೈರ್ಯದಂಬುಧಿ, ಜಯತು! ಜಯ ಜಯತು! || ಪ || ಮೊರೆದು ಗರ್ಜಿಪ ಕಡಲ ವಾಣಿಯು ನಿನ್ನ ವರವಾಣಿ, ಕಾರಮಿಂಚನು ನಗುವ ತೇಜವು ನಿನ್ನ ಮೈ ಕಾಂತಿ, ಆಳವಂಬುಧಿಯಾಳ ಮೇರೆಯೆ ನಭದ ವಿಸ್ತಾರ ಮಂದರಾದ್ರಿಯ ಮೀರಿದಚಲನು ನೀನು, ಯೋಗೀಂದ್ರ ! || 1 || ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರ ಮಂತ್ರ ನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ ನಮ್ಮ ಹೃದಯಕೆ […]

Read More

ಜಾತಿಭೇದಭಾವ ಬಿಟ್ಟು

ಜಾತಿಭೇದಭಾವ ಬಿಟ್ಟು ಪಂಥಪಂಗಡಾಚೆ ಇಟ್ಟು ನಾವು ಹಿಂದು ನಾವು ಬಂಧು ಎಂದು ಸಾರಿರಿ ಹಿಂದು ದೇಶ ಹಿಂದು ಧರ್ಮ ಹಿಂದುವಾಗಿ ಉಳಿಯಲೆಂದು ಸಂಘ ಸೇರಿ ಹಿಂದು ಬಂಧು ಒಂದಾಗಿರಿ || ಪ || ರಾಮ ಮತ್ತೆ ಹುಟ್ಟಿ ಬರಲಿ, ಕೃಷ್ಣನಾಗಿ ಧರ್ಮ ತರಲಿ ಧರ್ಮಗಂಭ ಮೇಲೆ ನಮ್ಮ ರಾಷ್ಟ್ರ ಕಟ್ಟಲಿ ನಮ್ಮ ದೇಶ ನಮ್ಮ ನಾಡು ನಮ್ಮದಾಗಿ ಉಳಿಯಲೆಂದು ನಮ್ಮತನವ ಬೆಳೆಸಲೆಂದು ಬಂದು ಸೇರಿರಿ || 1 || ಹರಿಹರಾದಿ ಭಕ್ತರೆಲ್ಲ ಒಂದೇ ತಾಯಿ ಮಕ್ಕಳೆಲ್ಲಾ ತಾಯಿ […]

Read More

ರಾಷ್ಟ್ರೋದ್ಧಾರದ ಮೂಲಮಂತ್ರ

ರಾಷ್ಟ್ರೋದ್ಧಾರದ ಮೂಲಮಂತ್ರ ಸ್ವಾಭಿಮಾನ ದೇಶಾಭಿಮಾನ ದಿಗ್ವಿಜಯದ ಭುಜಕೀರ್ತಿಯ ಧರಿಸಿ ಮೊಳಗಲಿ ಮಾತೆಯ ಜಯಜಯಗಾನ || ಪ || ಕಲ್ಲುಮುಳ್ಳುಗಳ ಹಾದಿಯಲಿ ಎದೆಗುಂದದೆ ಸಂಚರಿಸೋಣ ವಿಘ್ನ ವಿರೋಧವನೆದುರಿಸುತ ಭರದಲಿ ಗುರಿಯನು ಸೇರೋಣ || 1 || ನಾಡನೆ ನುಂಗುವ ಹೊಂಚುಗಳ ವಿದ್ರೋಹದ ಶತ ಸಂಚುಗಳ ವಿಫಲಗೊಳಿಸುವೆವು ನಾವಿಂದು ಸಬಲಗೊಂಡಿಹುದು ನಾಡಿಂದು || 2 || ರಾಷ್ಟ್ರವ ಕಟ್ಟುವ ಕಾಯಕಕೆ ಅರೆಕ್ಷಣವೆಲ್ಲಿದೆ ವಿಶ್ರಾಂತಿ? ನಿತ್ಯ ನಿರಂತರ ಜಾಗರಣ ಸನಿಹಕೆ ಬಂದಿದೆ ಸಂಕ್ರಾಂತಿ || 3 ||

Read More

ನುಗ್ಗಿ ಮುನ್ನಡೆ, ಶಿರಬಾಗಿ ಭಗವಗೆ

ನುಗ್ಗಿ ಮುನ್ನಡೆ, ಶಿರಬಾಗಿ ಭಗವಗೆ ಮುನ್ನುಗ್ಗಿ ಮುನ್ನಡೆ, ಶಿರಬಾಗಿ ಭಗವಗೆ ಹಳ್ಳಿ ಹಳ್ಳಿಗೆ ಹೋಗಿ ಸಂಘ ಶಾಖೆಯ ಮಾಡಿ ಒಗ್ಗಟ್ಟಿನಲ್ಲಿಹ ನಮ್ಮ ಬಲವನು ತೋರಿ || ಪ || ಕಾಶ್ಮೀರ ಕಬಳಿಸಲು ಪಾಕಿಗಳು ಕಾದಿಹರು ಅಸ್ಸಾಮಲಿ ದ್ರೋಹಿಗಳು ನುಸುಳಿ ಬೇರು ಬಿಟ್ಟಿಹರು ಖಲಿಸ್ಥಾನಕಾಗಿ ನಡೆವ ಮಾರಣ ಹೋಮವ ನೋಡು ಎಚ್ಚರಾಗೋ ನೀ ಮರೆತು ತುಚ್ಚವಾದ ಭೇದಭಾವ || 1 || ಜಗದಗಲ ಹಿಂದುಗಳು ನನ್ನೆಚ್ಚಿನ ಬಂಧುಗಳು ಅವರ ನೋವೆ ನನಗೆ ನೋವು ಅವರ ನಲಿವೆ ನನಗೆ ನಲಿವು […]

Read More

ಹುಟ್ಟಿನಿಂದಲೇ ಜಾತಿ ಹಣೆಪಟ್ಟಿ ಹಚ್ಚುತ್ತ

ಹುಟ್ಟಿನಿಂದಲೇ ಜಾತಿ ಹಣೆಪಟ್ಟಿ ಹಚ್ಚುತ್ತ ಮುಟ್ಟದೆ ಅಟ್ಟುವುದು ಸರಿಯೇ? ಅಂತರಿಕ್ಷಕ್ಕೆ ಅಡಿಯಿಟ್ಟ ನರನಿಂದು ಅಂತರವ ತೋರುವುದು ತರವೇ? || ಪ || ಪ್ರಾಣಿ ಪಕ್ಷಿಯಲಿನಿತು ಐಕ್ಯಮತ್ಯದ ಭಾವ ಸಣ್ಣಿರುವೆ ತೆರೆಸೀತೆ ಕಣ್ಣ ಅಣು ಅಣುವ ಸೃಷ್ಟಿ ಮಾಡಿರಲು ಮಾದೇವ ಮತ್ತೇಕೆ ಅಸ್ಪೃಶ್ಯ ವರ್ಣ || 1 || ತರತಮದ ಮೌಢ್ಯ ಮನುಕುಲದ ಜಾಡ್ಯ ಅಳಿಸೋಣ ಹರಿಸುತ್ತ ಒಲವ ಗುರುತಿಸುತ ಆತ್ಮ ಬೆಸೆಯುತ್ತ ಸ್ನೇಹ ಗಳಿಸೋಣ ಏಕತೆಯ ಬಲವ || 2 || ಸೇವೆಯೇ ವ್ರತವು ದುಡಿಮೆಯೇ ಬಲವು […]

Read More

ಮನುಕುಲದೇಳಿಗೆ ಸಾಧಿಸ ಹೊರಟೆವು

ಮನುಕುಲದೇಳಿಗೆ ಸಾಧಿಸ ಹೊರಟೆವು ಪ್ರಭಾತ ಕಿರಣಗಳರಳಿಸುತ ಶೋಷಿತ ಪೀಡಿತ ದಲಿತ ಜನಾಂಗದ ಭಾಗ್ಯೋದಯವನು ನಿರ್ಮಿಸುತಾ || ಪ || ಮೈ ಬೆವರಿನ ಜಲಪಾತವ ಧುಮುಕಿಸಿ ಹೊನ್ನನು ಸೃಜಿಪೆವು ಮಣ್ಣಿನಲಿ ಕಗ್ಗಲ್ಲೊಳು ಸುರಪ್ರತಿಮೆಯ ನಿರ್ಮಿಸಿ ಹೂವರಳಿಸುವೆವು ಮುಳ್ಳಿನಲಿ ಸತತ ಪರಿಶ್ರಮ ಸುರಿಸುತ ನಡೆವೆವು ವೈಭವ ಶಿಖರಕೆ ಧಾವಿಸುತಾ || 1 || ಯಾರೊಬ್ಬರ ಬಾಯ್ತುತ್ತನು ಕಸಿವುದು ಸಲ್ಲದು ಬೇಕಿಲ್ಲವು ನಮಗೆ ನ್ಯಾಯಕೆ ನೀತಿಗೆ ಹೋರಾಡುತಲಿರುವೆವು ನಾವ್ ಕಡೆಯುಸಿರಿನವರೆಗೆ ನಮ್ಮಯ ಹಿತವನು ಪರಹಿತದೊಂದಿಗೆ ಬೆಸೆವೆವು ಸಮರಸ ಸಾಧಿಸುತ || 2 […]

Read More

ತಾಯೇ ವಂದಿಸುವೆ (ವಂದೇ ಮಾತರಂ ಗೀತೆಯ ಭಾವಾನುವಾದ)

ತಾಯೇ ವಂದಿಸುವೆ ಜಲಭರಿತೆ ಫಲಭರಿತೆ ತೆಂಕಣದ ತಂಬೆಲರ ಸರಿತೆ ಸೊಂಪಿಡಿದ ಪೈರು ಪಚ್ಚೆಯ ತವರ್ಮನೆಯೆ ಹೇ ತಾಯೆ ! ಬೆಳ್ದಿಂಗಳಲಿ ಮಿಂದು ಮಿರುಗುವಿರುಳನುಟ್ಟವಳೆ ಹೂ ಚಿಗುರು ಮುಡಿದ ತರುಲತೆಗಳನೆ ತೊಟ್ಟವಳೆ ಇನಿನಗೆಯ ಜೇನ್‍ದನಿಯ ಸುಖದಾತೆ ವರದಾತೆ ಹೇ ಮಾತೆ! ಕಂಠಕೋಟಿಯ ಸಿಂಹಗರ್ಜನೆ ಸಿಡಿಸಿ ಬಾಹುಕೋಟಿಯ ಶಸ್ತ್ರಚಾಲನೆ ನಡೆಸಿ ರೌದ್ರರೂಪವ ತಳೆವ ಭೈರವಿಯೆ ನೀನು ಅಬಲೆಯೆ ತಾಯೆ ? ಸರ್ವಬಲ ಸಂಪನ್ನೆ ಶರಣು ಅಭಯಾವರಣೆ ವೈರಿಕುಲಧ್ವಂಸಿನಿಯೆ, ತಾಯೆ ! ನೀ ವಿದ್ಯೆ ನೀ ಧರ್ಮ ನೀ ಹೃದಯ ನೀನಾತ್ಮ […]

Read More

ಓ ನನ್ನ ಚೇತನ (ಶ್ರೀ ಕುವೆಂಪು)

ಓ ನನ್ನ ಚೇತನ ಆಗು ನೀ ಅನಿಕೇತನ ರೂಪ ರೂಪಗಳನು ದಾಟಿ ನಾಮ ಕೋಟಿಗಳನು ಮೀಟಿ ಎದೆಯ ಬಿರಿಯೆ ಭಾವದೀಟಿ ಓ ನನ್ನ ಚೇತನ ನೂರು ಮತದ ಹೊಟ್ಟ ತೂರಿ ಎಲ್ಲ ತತ್ತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಓ ನನ್ನ ಚೇತನ ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು ಓ ನನ್ನ ಚೇತನ ಅನಂತ ತಾನ್ ಅನಂತವಾಗಿ ಆಗುತಿಹನೆ ನಿತ್ಯಯೋಗಿ ಅನಂತ ನೀ ಅನಂತವಾಗು ಆಗು ಆಗು ಆಗು ಆಗು ಓ ನನ್ನ […]

Read More

ನಾಡದೇವಿಯ ಆರಾಧನೆ

ನಾಡದೇವಿಯ ಆರಾಧನೆ, ಸುತ ಕೋಟಿ ಧನ್ಯತೆ ಅಭಿವಂದನೆ ಮಾನಸ ಸರಸಿನ ಭಾವಕಮಲ, ಅರಳಿ ತಳೆದ ಪರಿಕಲ್ಪನೆ || ಪ || ಭಾಷೆ ಬೇರೆ, ವೇಷ ಬೇರೆ, ವೃತ್ತಿ ಬೇರೆ, ಪ್ರವೃತ್ತಿ ಬೇರೆ ಅಂಗುಲಂಗುಲ ನೆಲದಾ ಮತಿಯ, ಕೃತಿ ಸಂಸ್ಕೃತಿಯ ಗತಿಯು ಬೇರೆ ಉಸಿರಿನ ಪ್ರಾಣ ಗಾಳಿಯು ಒಂದೇ, ಹಸುರಿನ ಜೀವ ನೆಲ ಜಲ ಒಂದೇ ಹರಿಯುವ ರಕ್ತದ ಕಣಕಣ ಒಂದೇ, ನಾಡ ದೇವಿಯ ಪೂಜೆಗೆ ಸಮರಸ ಮಂತ್ರ ಸುಮಾರ್ಚನೆಯೊಂದೇ || 1 || ಅಳಿಸುವ ಅಸಮತೆ ಗಳಿಸುವ […]

Read More