ರಾಷ್ಟ್ರೋದ್ಧಾರದ ಮೂಲಮಂತ್ರ

ರಾಷ್ಟ್ರೋದ್ಧಾರದ ಮೂಲಮಂತ್ರ
ಸ್ವಾಭಿಮಾನ ದೇಶಾಭಿಮಾನ
ದಿಗ್ವಿಜಯದ ಭುಜಕೀರ್ತಿಯ ಧರಿಸಿ
ಮೊಳಗಲಿ ಮಾತೆಯ ಜಯಜಯಗಾನ || ಪ ||

ಕಲ್ಲುಮುಳ್ಳುಗಳ ಹಾದಿಯಲಿ
ಎದೆಗುಂದದೆ ಸಂಚರಿಸೋಣ
ವಿಘ್ನ ವಿರೋಧವನೆದುರಿಸುತ
ಭರದಲಿ ಗುರಿಯನು ಸೇರೋಣ || 1 ||

ನಾಡನೆ ನುಂಗುವ ಹೊಂಚುಗಳ
ವಿದ್ರೋಹದ ಶತ ಸಂಚುಗಳ
ವಿಫಲಗೊಳಿಸುವೆವು ನಾವಿಂದು
ಸಬಲಗೊಂಡಿಹುದು ನಾಡಿಂದು || 2 ||

ರಾಷ್ಟ್ರವ ಕಟ್ಟುವ ಕಾಯಕಕೆ
ಅರೆಕ್ಷಣವೆಲ್ಲಿದೆ ವಿಶ್ರಾಂತಿ?
ನಿತ್ಯ ನಿರಂತರ ಜಾಗರಣ
ಸನಿಹಕೆ ಬಂದಿದೆ ಸಂಕ್ರಾಂತಿ || 3 ||

Leave a Reply

Your email address will not be published. Required fields are marked *